ಸೋಮವಾರ, ಮೇ 23, 2022
26 °C

ಫುಟ್‌ಬಾಲ್: ಉಮಾಶಂಕರ್ ಹ್ಯಾಟ್ರಿಕ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಉಮಾಶಂಕರ್ ಗಳಿಸಿದ ಹ್ಯಾಟ್ರಿಕ್ ಗೋಲುಗಳ ನೆರವಿನಿಂದ ಆರ್‌ಬಿಐ ತಂಡ ಪುನರಾರಂಭವಾದ ಸೂಪರ್ ಡಿವಿಷನ್ ಫುಟ್‌ಬಾಲ್ ಲೀಗ್ ಚಾಂಪಿಯನ್‌ಷಿಪ್‌ನ ಶುಕ್ರವಾರದ ಪಂದ್ಯದಲ್ಲಿ 4-3ಗೋಲುಗಳಿಂದ ಎಲ್‌ಆರ್‌ಡಿಇ ಎದುರು ಗೆಲುವು ಸಾಧಿಸಿತು.ಬೆಂಗಳೂರು ಜಿಲ್ಲಾ ಫುಟ್‌ಬಾಲ್ ಸಂಸ್ಥೆ (ಬಿಡಿಎಫ್‌ಎ) ಆಶ್ರಯದಲ್ಲಿ ಕರ್ನಾಟಕ ರಾಜ್ಯ ಫುಟ್‌ಬಾಲ್ ಸಂಸ್ಥೆಯ ಕ್ರೀಡಾಂಗಣದಲ್ಲಿ ಈ ಪಂದ್ಯ ನಡೆಯಿತು. ವಿಜಯಿ ತಂಡದ ಅಲ್ವಿನ್ 7ನೇ ನಿಮಿಷದಲ್ಲಿ ಗೋಲಿನ ಖಾತೆ ತೆರೆದರು. ನಂತರ ಉಮಾಶಂಕರ್ 14, 30 ಹಾಗೂ 47ನೇ ನಿಮಿಷದಲ್ಲಿ ಗೋಲು ಗಳಿಸಿದರು.ಎಲ್‌ಆರ್‌ಡಿಇ ತಂಡದ ಚಂದ್ರಕುಮಾರ್ ಸಹ ಇದಕ್ಕೆ ತಕ್ಕ ಪೈಪೋಟಿ ಒಡ್ಡಿದರು. ಅವರೂ ಹ್ಯಾಟ್ರಿಕ್ ಗೋಲು ಗಳಿಸಿದರು. ಆ ಗೋಲುಗಳು 44, 50 ಮತ್ತು 70ನೇ ನಿಮಿಷದಲ್ಲಿ ಬಂದವು.ದಿನದ ಇನ್ನೊಂದು ಪಂದ್ಯದಲ್ಲಿ ಬಿಇಎಂಎಲ್ (ಕೆಜಿಎಫ್ ಅಕಾಡೆಮಿ) 2-0ಗೋಲುಗಳಿಂದ ಸಿಐಎಲ್ ಎದುರು ಜಯ ಪಡೆಯಿತು. ವಿಜಯಿ ತಂಡದ ರಾಜೇಶ್ ಹಾಗೂ ಕಲಂದರ್ ಕ್ರಮವಾಗಿ 11 ಹಾಗೂ 82ನೇ ನಿಮಿಷದಲ್ಲಿ ತಲಾ ಒಂದು ಗೋಲು ಗಳಿಸಿದರು.ಪಂದ್ಯವನ್ನಾಡುತ್ತ ಕ್ರೀಡಾಂಗಣದಲ್ಲಿ ಆಟಗಾರ ಮೃತಪಟ್ಟ ಘಟನೆ ನಡೆದ ಹಿನ್ನೆಲೆಯಲ್ಲಿ ಈ ಟೂರ್ನಿಯನ್ನು ಮುಂದೂಡಲಾಗಿತ್ತು.ಶನಿವಾರದ ಪಂದ್ಯಗಳು: ಧರ್ಮರಾಜ್ ಯೂನಿಯನ್-ಐಎಸ್‌ಆರ್‌ಒ ಮತ್ತು ಎಚ್‌ಎಎಲ್-ಎಡಿಇ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.