ಸೋಮವಾರ, ಮೇ 23, 2022
30 °C

ಫುಟ್‌ಬಾಲ್: ಎಚ್‌ಎಎಲ್ ತಂಡಕ್ಕೆ ಗೆಲುವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಅಜಿತ್ ಕುಮಾರ್ ಹಾಗೂ ಆರ್.ಸಿ.ಪ್ರಕಾಶ್ ಅವರ ಮಿಂಚಿನ ಆಟದಿಂದ ಎಚ್‌ಎಎಲ್ ತಂಡದವರು ಇಲ್ಲಿ ನಡೆಯುತ್ತಿರುವ ಸೂಪರ್ ಡಿವಿಷನ್ ಫುಟ್‌ಬಾಲ್ ಲೀಗ್ ಚಾಂಪಿಯನ್‌ಷಿಪ್‌ನ ಪಂದ್ಯದಲ್ಲಿ ಗೆಲುವು ಸಾಧಿಸಿದ್ದಾರೆ.ಅಶೋಕನಗರದಲ್ಲಿರುವ ಬಿಡಿಎಫ್‌ಎ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಎಚ್‌ಎಎಲ್ 4-2 ಗೋಲುಗಳಿಂದ ಕೆಜಿಎಫ್‌ನ ಸ್ಪೋರ್ಟ್ಸ್ ಅಕಾಡೆಮಿ (ಕೆಎಸ್‌ಎ) ತಂಡವನ್ನು ಸೋಲಿಸಿತು. ವಿಜಯಿ ತಂಡದ ಅಜಿತ್ ಕುಮಾರ್ (51ನೇ ಹಾಗೂ 66ನೇ ನಿಮಿಷ) ಹಾಗೂ ಆರ್.ಸಿ.ಪ್ರಕಾಶ್ (56ನೇ ಹಾಗೂ 65ನೇ ನಿ.) ಗೋಲು ತಂದಿತ್ತರು. ಕೆಎಸ್‌ಎ ತಂಡದ ಖಲಂದರ್ (21ನೇ ನಿ.) ಹಾಗೂ ಸ್ಟೀಫನ್ (42ನೇ ನಿ.) ಗೋಲು ಗಳಿಸಿದರು.ಆರ್‌ಡಬ್ಲ್ಯುಎಫ್‌ಗೆ ಜಯ: ಆರ್‌ಡಬ್ಲ್ಯುಎಫ್ ತಂಡದವರು `ಎ~ ಡಿವಿಷನ್ ಲೀಗ್‌ನ ಪಂದ್ಯದಲ್ಲಿ ಭರ್ಜರಿ ಗೆಲುವು ಸಾಧಿಸಿದರು. ಈ ತಂಡದವರು 6-2 ಗೋಲುಗಳಿಂದ ಸದರ್ನ್ ಬ್ಲೂಸ್ ತಂಡವನ್ನು ಪರಾಭವಗೊಳಿಸಿದರು.

ಆರ್‌ಡಬ್ಲ್ಯುಎಫ್‌ನ ರೇಗನ್ (18ನೇ ಹಾಗೂ 20ನೇ ನಿಮಿಷ), ಸತೀಶ್ ಕುಮಾರ್ (30ನೇ ಹಾಗೂ 46ನೇ ನಿ.), ಸಿ.ಪ್ರಕಾಶ್ (61ನೇ ನಿ.) ಹಾಗೂ ಎ.ಡಿ.ಕುಮಾರ್ (69ನೇ ನಿ.) ಗೋಲು ಗಳಿಸಿದರು. ಸದರ್ನ್ ಬ್ಲೂಸ್‌ನ ಜೇಸನ್ (7ನೇ ನಿ.) ಹಾಗೂ ರಾಘವೇಂದ್ರ ಪ್ರಸಾದ್ (34ನೇ ನಿ.) ಚೆಂಡನು ಗುರಿ ಸೇರಿಸಿದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.