ಮಂಗಳವಾರ, ಏಪ್ರಿಲ್ 13, 2021
25 °C

ಫುಟ್‌ಬಾಲ್: ಡಿವೈಎಸ್‌ಎಸ್ ತಂಡಕ್ಕೆ ಗೆಲುವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಡಿವೈಎಸ್‌ಎಸ್ ತಂಡ ಬಿಡಿಎಫ್‌ಎ ಆಶ್ರಯದಲ್ಲಿ ಇಲ್ಲಿ ನಡೆಯುತ್ತಿರುವ `ಎ~ ಡಿವಿಷನ್ ಫುಟ್‌ಬಾಲ್ ಲೀಗ್ ಚಾಂಪಿಯನ್‌ಷಿಪ್‌ನ ಸೋಮವಾರದ ಪಂದ್ಯದಲ್ಲಿ 2-0ಗೋಲುಗಳಿಂದ ಧರ್ಮರಾಜ್ ಯೂನಿಯನ್ ಎದುರು ಜಯಿಸಿತು.



ರಾಜ್ಯ ಫುಟ್‌ಬಾಲ್ ಸಂಸ್ಥೆ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ವಿಜಯಿ ತಂಡದ ಹರೀಶ್ ಹಾಗೂ ರವಿಕಿರಣ್ ಕ್ರಮವಾಗಿ 35 ಮತ್ತು 80ನೇ ನಿಮಿಷದಲ್ಲಿ ತಲಾ ಒಂದು ಗೋಲು ಗಳಿಸಿದರು.



ಇನ್ನೊಂದು ಪಂದ್ಯದಲ್ಲಿ ಎಜಿಒಆರ್‌ಸಿ 2-1 ಗೋಲುಗಳಿಂದ ಸದರ್ನ್ ಬ್ಲೂಸ್ ಎದುರು ಜಯ ಪಡೆಯಿತು. ಎಜಿಒಆರ್‌ಸಿ ತಂಡದ ಪ್ರವೀಣ್ (17ನೇ ನಿಮಿಷ) ಮತ್ತು ಲೊಕೇಶ್ (37ನೇ ನಿ.) ಗೋಲು ಗಳಿಸಿದರೆ, ಸದರ್ನ್ ತಂಡದ ಏಕೈಕ ಗೋಲನ್ನು ವಿಜಯ್ ಕುಮಾರ್ 31ನೇ ನಿಮಿಷದಲ್ಲಿ ಗಳಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.