ಫುಟ್ಬಾಲ್: ಡ್ರಾ ಪಂದ್ಯದಲ್ಲಿ ಬಿಎಫ್ಸಿ

ಬೆಂಗಳೂರು: ಬೆಂಗಳೂರು ಫುಟ್ ಬಾಲ್ ಕ್ಲಬ್ (ಬಿಎಫ್ಸಿ) ಮತ್ತು ಸೌತ್ ಯುನೈಟೆಡ್ ತಂಡಗಳ ನಡು ವಿನ ಸೂಪರ್ ಡಿವಿಷನ್ ಫುಟ್ಬಾಲ್ ಲೀಗ್ ಚಾಂಪಿಯನ್ಷಿಪ್ನ ಪಂದ್ಯವು ಡ್ರಾದಲ್ಲಿ ಅಂತ್ಯ ಕಂಡಿತು.
ಅಶೋಕ ನಗರದಲ್ಲಿರುವ ರಾಜ್ಯ ಫುಟ್ಬಾಲ್ ಸಂಸ್ಥೆ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಬಿಎಫ್ಸಿ ತಂಡದ ಎಸ್. ಕರಣ್ 43ನೇ ನಿಮಿಷದಲ್ಲಿ ಗೋಲು ಗಳಿಸಿ ಆರಂಭಿಕ ಮುನ್ನಡೆ ತಂದುಕೊಟ್ಟರು. ಆದರೆ, ಮರು ಹೋರಾಟ ತೋರಿದ ಯುನೈಟೆಡ್ನ ಸುನಿಲ್ 88ನೇ ನಿಮಿಷದಲ್ಲಿ ಗೋಲು ತಂದಿತ್ತು ಪಂದ್ಯವನ್ನು ಡ್ರಾ ಹಾದಿಗೆ ಕೊಂಡೊಯ್ದರು.
ಡಿವೈಇಎಸ್ಗೆ ಜಯ: ‘ಎ’ ಡಿವಿಷನ್ ಪಂದ್ಯದಲ್ಲಿ ಡಿವೈಇಎಸ್ ತಂಡ 1–0 ಗೋಲಿನಿಂದ ತಿಲಕ್ ಮೆಮೋರಿಯಲ್ ಎದುರು ಗೆಲುವು ಸಾಧಿಸಿತು.
ಎರಡನೇ ನಿಮಿಷದಲ್ಲಿ ಗೋಲು ತಂದಿತ್ತ ರೋಸಿಂಗ್ ಗೆಲುವಿನ ರೂವಾರಿ ಎನಿಸಿದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.