ಫುಟ್‌ಬಾಲ್; ಭಾರತಕ್ಕೆ ಸರಣಿ ಜಯ

ಭಾನುವಾರ, ಮೇ 26, 2019
27 °C

ಫುಟ್‌ಬಾಲ್; ಭಾರತಕ್ಕೆ ಸರಣಿ ಜಯ

Published:
Updated:

ನವದೆಹಲಿ (ಐಎಎನ್‌ಎಸ್): ಉತ್ತಮ ಪ್ರದರ್ಶನ ನೀಡಿದ ಭಾರತ  ಮಹಿಳಾ  ಫುಟ್‌ಬಾಲ್ ತಂಡದವರು ಬಹ್ರೇನ್‌ನಲ್ಲಿ ನಡೆದ ಅಂತರರಾಷ್ಟ್ರೀಯ ಸರಣಿಯನ್ನು ಗೆದ್ದುಕೊಂಡರು.ಒಟ್ಟು ಮೂರು ಪಂದ್ಯಗಳ ಸರಣಿಯಲ್ಲಿ ಭಾರತ 2-1ರಲ್ಲಿ ಬಹ್ರೇನ್ ತಂಡವನ್ನು ಮಣಿಸಿ ಸರಣಿ ತನ್ನದಾಗಿಸಿಕೊಂಡಿತು. ಮೊದಲ ಎರಡು ಪಂದ್ಯಗಳಲ್ಲಿ ತಲಾ ಒಂದೊಂದು ತಂಡಗಳು ಗೆಲುವು ಪಡೆದಿದ್ದವು. ಶನಿವಾರ ನಡೆದ ನಿರ್ಣಾಯಕ ಮೂರನೇ ಪಂದ್ಯದಲ್ಲಿ ಭಾರತ 3-1ಗೋಲುಗಳಿಂದ ಬಹ್ರೇನ್‌ಗೆ ಸೋಲುಣಿಸಿತು.

ಭಾರತ ತಂಡದ ಕಮಲಾ ದೇವಿ 25ನೇ ನಿಮಿಷದಲ್ಲಿ ಗೋಲಿನ ಖಾತೆ ತೆರೆದರು. ಇದಾದ ಮೂರು ನಿಮಿಷಗಳಲ್ಲಿ ಪಿಂಕಿ ಭೋಂಪಾಲ್ ಮಗರ್ ಮತ್ತೊಂದು ಗೋಲನ್ನು ತಂದಿತ್ತರು. 42ನೇ ನಿಮಿಷದಲ್ಲಿ ಪರ್ಮಶೋರಿ ದೇವಿ ಗಳಿಸಿ ತಂಡದ ಗೆಲುವನ್ನು ಸುಲಭವಾಗಿರಿಸಿದರು.ಭಾರತ ಮಹಿಳಾ ತಂಡದ ಈ ಗೆಲುವು ಅವರ ಸಾಮರ್ಥ್ಯವನ್ನು ಸಾಬೀತು ಪಡಿಸಿದೆ ಎಂದು ತಂಡದ ಕೋಚ್ ಮೊಹಮ್ಮದ್ ಶಬ್ಬೀರ್ ಜಬ್ಬಾರ್ ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry