ಬುಧವಾರ, ಜೂಲೈ 8, 2020
27 °C

ಫುಟ್‌ಬಾಲ್: ಭಾರತ-ಬಹರೇನ್ ಮುಖಾಮುಖಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದೋಹಾ (ಪಿಟಿಐ): ಆಸ್ಟ್ರೇಲಿಯಾ ಎದುರು ತೀರ ನೀರಸ ಆಟವಾಡಿ ನಿರಾಸೆ ಹೊಂದಿದ ಭಾರತ ತಂಡದವರು ಎಎಫ್‌ಸಿ ಏಷ್ಯನ್ ಕಪ್ ಫುಟ್‌ಬಾಲ್ ಚಾಂಪಿಯನ್‌ಷಿಪ್‌ನ ‘ಸಿ’ ಗುಂಪಿನ ಲೀಗ್ ಪಂದ್ಯದಲ್ಲಿ ಶುಕ್ರವಾರ ಬಹರೇನ್ ವಿರುದ್ಧ ಸೆಣಸಲಿದ್ದಾರೆ. ಜಸ್ಸಿಮ್ ಬಿನ್ ಹಮಾದ್ ಕ್ರೀಡಾಂಗಣದಲ್ಲಿ ಗುಂಪಿನ ಎರಡನೇ ಲೀಗ್ ಪಂದ್ಯದಲ್ಲಿ ಆಡಲಿರುವ ಭಾರತವು ಗೆಲುವು ಪಡೆಯುವುದು ಅಗತ್ಯವಾಗಿದೆ. ಮತ್ತೊಂದು ನಿರಾಸೆಯು ಗುಂಪಿನಲ್ಲಿ ಕೊನೆಯ ಸ್ಥಾನದಲ್ಲಿಯೇ ಉಳಿಯುವಂತೆ ಮಾಡಲಿದೆ.ಕೆಲವು ಸುಲಭದ ಅವಕಾಶಗಳು ಸಿಕ್ಕಾಗಲೂ ಭಾರತದವರು ಚುರುಕಾಗಿ ಪ್ರತಿಕ್ರಿಯಿಸಿರಲಿಲ್ಲ. ಆದ್ದರಿಂದ 0-4 ಗೋಲುಗಳ ಅಂತರದಿಂದ ಪರಾಭವಗೊಳ್ಳ ಬೇಕಾಯಿತು.ಬಹರೇನ್ ತಂಡದವರು ಭಾರತಕ್ಕಿಂತ ಸ್ವಲ್ಪ ಉತ್ತಮ ಸ್ಥಿತಿಯಲ್ಲಿದ್ದಾರೆ. ಬಹರೇನ್ ತನ್ನ ಮೊದಲ ಪಂದ್ಯವನ್ನು 2-1 ಗೋಲುಗಳಿಂದ ದಕ್ಷಿಣ ಕೊರಿಯಾ ಎದುರು ಸೋತಿದೆ. ನಾಯಕ ಭುಟಿಯಾ, ಅಭಿಷೇಕ್ ಯಾದವ್, ಸುನಿಲ್ ಚೆಟ್ರಿ ಹಾಗೂ ಮೊಹಮ್ಮದ್ ರಫಿ ಅವರು ಬಹರೇನ್ ವಿರುದ್ಧದ ಪಂದ್ಯದಲ್ಲಿ ತಮ್ಮ ಕಾಲ್ಚಳಕ ತೋರಿದಲ್ಲಿ ಉತ್ತಮ ಫಲಿತಾಂಶ ನಿರೀಕ್ಷೆ ಮಾಡಬಹುದು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.