ಮೈಸೂರು: ಕಳೆದ ಬಾರಿಯ ಚಾಂಪಿಯನ್ ಹರಿಯಾಣ ಮತ್ತು ರನ್ನರ್ ಅಪ್ ಮಧ್ಯಪ್ರದೇಶ ತಂಡಗಳು 4ನೇ ರಾಷ್ಟ್ರೀಯ ಜೂನಿಯರ್ ಮಹಿಳೆಯರ ‘ಎ’ ಡಿವಿಷನ್ ಟೂರ್ನಿಯಲ್ಲಿಯೂ ಪ್ರಶಸ್ತಿಗಾಗಿ ಭಾನುವಾರ ಫೈನಲ್ನಲ್ಲಿ ಸೆಣಸಲಿವೆ.

ಚಾಮುಂಡಿ ವಿಹಾರದ ಮೈದಾನದಲ್ಲಿ ಆಯೋಜಿ ಸಿರುವ ಟೂರ್ನಿಯಲ್ಲಿ ಶನಿವಾರ ನಡೆದ ಮೊದಲ ಸೆಮಿಫೈನಲ್ನಲ್ಲಿ ಹರಿಯಾಣ ತಂಡವು 10–0 ಯಿಂದ ಜಾರ್ಖಂಡ್ ವಿರುದ್ಧ ಜಯಿಸಿತು. ಇನ್ನೊಂದು ಸೆಮಿಫೈನಲ್ನಲ್ಲಿ ಮಧ್ಯಪ್ರದೇಶ ತಂಡವು 3–2 ರಿಂದ ಒಡಿಶಾ ತಂಡದ ಸವಾಲನ್ನು ಮೀರಿ ನಿಂತಿತು.

ರಾಷ್ಟ್ರೀಯ ಜೂನಿಯರ್ ತಂಡವನ್ನು ಪ್ರತಿನಿಧಿಸಿ ರುವ ಅನುಭವಿ ಆಟಗಾರ್ತಿಯರು ಇರುವ ಹರಿಯಾಣ ತಂಡದ ಎದುರು ಜಾರ್ಖಂಡ್ ತಂಡವು ಮಂಕಾಯಿತು. ‘ಎ’ ಗುಂಪಿನ ಲೀಗ್ ಸುತ್ತಿನಲ್ಲಿ ಮೂರು ಪಂದ್ಯಗಳನ್ನೂ ಗೆದ್ದು ಸೆಮಿಫೈನಲ್ ಪ್ರವೇಶಿಸಿತ್ತು. ‘ಸಿ’ ಗುಂಪಿನಲ್ಲಿ ಒಂದು ಡ್ರಾ ಮತ್ತು ಎರಡು ಪಂದ್ಯಗಳನ್ನು ಗೆದ್ದು ನಾಲ್ಕರ ಘಟ್ಟ ಪ್ರವೇಶಿಸಿದ್ದ ಜಾರ್ಖಂಡ್ ಮಧ್ಯಪ್ರದೇಶದ ಎದುರು ಮಂಡಿಯೂರಿತು. ತಲಾ ಮೂರು ಗೋಲು ಗಳಿಸಿದ ಮುನ್ಪಡೆ ಆಟಗಾರ್ತಿ ಜ್ಯೋತಿ ಗುಪ್ತಾ (5, 30, 61ನಿ) ಮತ್ತು ರೀತ್ (19, 40, 53ನಿ) ಗೆಲುವಿನ ರೂವಾರಿಯಾದರು.

ಇವರಿಗೆ ತಕ್ಕ ಸಾಥ್ ನೀಡಿದ ನರೀಂದರ್ ಕೌರ್ (9ನಿ, 69ನಿ) ಎರಡು ಮತ್ತು ಪೂಜಾರಾಣಿ (14ನಿ), ದೇವಿಕಾ ಸೇನ್ (62ನಿ) ತಲಾ ಒಂದು ಗೋಲು ಹೊಡೆದರು. ಪಂದ್ಯದ ನಂತರ ಸುದ್ದಿಗಾರರೊಂದಿಗೆ ಮಾತನಾ ಡಿದ ಹರಿಯಾಣ ತಂಡದ ನಾಯಕಿ ನೇಹಾ ಗೋಯಲ್, ‘ನಮ್ಮ ಕೋಚ್ ಕುಲದೀಪ್ ಹೇಳಿದ ಸೂಚನೆಗಳನ್ನು ಚಾಚೂ ತಪ್ಪದೇ ಪಾಲಿಸಿದ್ದೇವೆ. ಯಾವುದೇ ಹೊಸ ಪ್ರಯೋಗಕ್ಕೆ ಪ್ರಯತ್ನಿಸದೇ ಉತ್ತಮ ಹೊಂದಾಣಿಕೆಯೊಂದಿಗೆ ಆಡಿದ್ದು ಗೆಲುವಿಗೆ ಕಾರಣವಾಯಿತು. ಗೋಲು ಗಳಿಕೆಯ ಜೊತೆಗೆ ಉತ್ತಮ ಕೌಶಲ್ಯ ಪ್ರದರ್ಶನಕ್ಕೆ ಒತ್ತು ನೀಡುತ್ತಿದ್ದೇವೆ’ ಎಂದು ಹೇಳಿದರು.

ಒಡಿಶಾ ಹೋರಾಟ: ಬುಡಕಟ್ಟು ಜನಾಂಗದ ಆಟಗಾರ್ತಿಯರು ಹೆಚ್ಚಿನ ಸಂಖ್ಯೆಯಲ್ಲಿರುವ ಒಡಿಶಾ ತಂಡವು ಶುಕ್ರವಾರ ಸಂಜೆಯ ಸೆಮಿಫೈನಲ್ನಲ್ಲಿ ಕೊನೆಯ ಹಂತದವರೆಗೂ ಪ್ರತಿರೋಧ ತೋರಿತು. ‘ಬಿ’ ಗುಂಪಿನ ಲೀಗ್ನಲ್ಲಿ ಕರ್ನಾಟಕ ಎದುರಿನ ಪಂದ್ಯವೂ ಸೇರಿದಂತೆ ಮೂರರಲ್ಲಿ ಜಯ ಸಾಧಿಸಿದ್ದ ಮಧ್ಯಪ್ರದೇಶ ಹಾಕಿ ಅಕಾಡೆಮಿಯು 3–2ರಿಂದ ಒಡಿಶಾ ವಿರುದ್ಧ ಗೆಲುವು ಸಾಧಿಸಿತು. ಪಂದ್ಯದ ಮೂರನೇ ನಿಮಿಷದಲ್ಲಿ ರಾಖಿ ಪ್ರಜಾಪತಿ ಮಧ್ಯಪ್ರದೇಶ ಗೋಲಿನ ಖಾತೆ ತೆರೆದರು.

ಮೂರು ನಿಮಿಷಗಳ ನಂತರ ಸಿಕ್ಕ ಪೆನಾಲ್ಟಿ ಕಾರ್ನರ್ ಅವಕಾಶದಲ್ಲಿ ಒಡಿಶಾ ನಾಯಕಿ ಅಂಬಿಕಾ ಟೊಪ್ಪೊ (6ನಿ) ಗೋಲು ಗಳಿಸಿ ಸಮಬಲ ಸಾಧಿಸಿದರು. ಮಧ್ಯಪ್ರದೇಶದ ಅನುಜಾ ಸಿಂಗ್ (12ನಿ) ಗೋಲು ಹೊಡೆದ ಮತ್ತೆ ಮುನ್ನಡೆ ಸಾಧಿಸಿದರು. ರಾಖಿ ಪ್ರಜಾಪತಿ (47ನಿ) ಮತ್ತೊಂದು ಗೋಲು ಹೊಡೆ ದರು. ಆದರೆ, ಪಂದ್ಯ ಮುಕ್ತಾಯಕ್ಕೆ ಇನ್ನೂ ಒಂದು ನಿಮಿಷ ಬಾಕಿಯಿದ್ದಾಗ ಸಿಕ್ಕ ಪೆನಾಲ್ಟಿ ಕಾರ್ನರ್ನಲ್ಲಿ ಒಡಿಶಾದ ನಾಯಕಿ ಅಂಬಿಕಾ ಮತ್ತೊಂದು ಗೋಲು ಗಳಿಸಿದರು. ಕೊನೆಯ ನಿಮಿಷದ ಹೋರಾಟದಲ್ಲಿ ಸಮಬಲ ಸಾಧಿಸುವ ಪ್ರಯತ್ನ ಫಲಿಸಲಿಲ್ಲ. ಮಧ್ಯಪ್ರದೇಶ ತಂಡವು ವಿಜಯದ ನಗೆ ಬೀರಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.