ಉಡುಪಿ: ತಾಲ್ಲೂಕಿನ ಪಿಲಾರು ಗ್ರಾಮದಲ್ಲಿ ಫ್ರಾನ್ಸಿಸ್ ಕುತಿಂಜ್ಞ ಎಂಬವರ ಮಾಲೀಕತ್ವದ 1.59 ಎಕರೆ ಜಮೀನು ಲಪಟಾಯಿಸಲು ನಕಲಿ ಕ್ರಯಪತ್ರ ಮಾಡಿದ್ದ 13 ವರ್ಷಗಳ ಹಿಂದಿನ ಪ್ರಕರಣದ ನಾಲ್ವರು ಆರೋಪಿಗಳಿಗೆ ಜಿಲ್ಲಾ ನ್ಯಾಯಾಲಯ ಮಂಗಳವಾರ 6 ವರ್ಷ ಜೈಲು ಶಿಕ್ಷೆ ವಿಧಿಸಿದೆ. ಇವರಲ್ಲಿ ಇಬ್ಬರಿಗೆ ತಲಾ 6 ವರ್ಷ ಜೈಲು ಹಾಗೂ ರೂ. 24 ಸಾವಿರ ದಂಡ ವಿಧಿಸಿದೆ. ದಂಡ ಪಾವತಿಸದಿದ್ದಲ್ಲಿ 18 ತಿಂಗಳ ಹೆಚ್ಚುವರಿ ಶಿಕ್ಷೆ ಅನುಭವಿಸುವಂತೆಯೂ ಆದೇಶಿಸಿದೆ.

ಶಿಕ್ಷೆಗೊಳಗಾದವರು:  ಪಿಲಾರು ಗ್ರಾಮದ ಪ್ರಾನ್ಸಿಸ್ ಇಗ್ನೇಷಿಯಸ್ ಡಿಸೋಜ (42), ರೊನಾಲ್ಡ್ ಗೋಮ್ಸ (31), ರಾಖಿ ಡಿಸೋಜ (33), ರತ್ನಪ್ಪ (80). 4ನೇ ಆರೋಪಿ ಇತ್ತೀಚೆಗೆ ಮೃತಪಟ್ಟಿದ್ದಾರೆ.

ವಿವರ: ಫ್ರಾನ್ಸಿಸ್ ಕುತಿಂಜ್ಞ ಇರುವಿಕೆ ಹಲವು ವರ್ಷ ಯಾರಿಗೂ ತಿಳಿಯದ ಕಾರಣ ದುರ್ಲಾಭ ಪಡೆಯಲು ಮುಂದಾದ ಅಪರಾಧಿಗಳು 1998ರಲ್ಲಿ ಸರ್ವೆ ನಂ.101/5ರಲ್ಲಿನ ಜಮೀನಿಗೆ ನಕಲಿ ಕ್ರಯಪತ್ರ ತಯಾರಿಸಿ ಮುಲ್ಕಿ ಉಪ ನೋಂದಣಿಕಾರಿ ಮುಂದೆ ಹಾಜರಾಗಿ ನಕಲಿ ಸಹಿಯನ್ನೂ ಮಾಡಿ ಸಾಕ್ಷಿಯನ್ನೂ ಹಾಕಿದ್ದರು.
ಫ್ರಾನ್ಸಿಸ್ ಎಂಬವರು ಜಮೀನಿನಲ್ಲಿ ಮಾಲೀಕತ್ವ ಸ್ಥಾಪಿಸಲು ಸಹಕರಿಸಿದ್ದರು.

ನಂತರ ಫ್ರಾನ್ಸಿಸ್ ಆರ್.ಟಿ.ಸಿ.ಯಲ್ಲಿ ತಮ್ಮ ಹೆಸರಿಗೆ ಮಾಲೀಕತ್ವ ಬದಲಿಸಲು ಅರ್ಜಿ ಸಲ್ಲಿಸಿದ್ದರು. 1999ರಲ್ಲಿ ಈ ವಿಚಾರ ತಿಳಿದ ಜೆರಾಲ್ಡ್ ಲೋಬೊ, ಎಲ್ಲಾ 4 ಆರೋಪಿಗಳ ವಿರುದ್ಧ ಉಡುಪಿ ನ್ಯಾಯಾಲಯದಲ್ಲಿ ಖಾಸಗಿ ದೂರು ಸಲ್ಲಿಸಿದ್ದರು.

ಅಂದಿನ ಪಿಎಸ್ಐ ಬಶೀರ್ ಅಹಮ್ಮದ್ ಪ್ರಕರಣ ದಾಖಲಿಸಿ ಇನ್ಸ್ಪೆಕ್ಟರ್ ಎಂ.ಐ.ಜಮೀಲ್ ತನಿಖೆ ನಡೆಸಿ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

ನ್ಯಾಯಾಲಯದಲ್ಲಿ 13 ವರ್ಷ ಸುದೀರ್ಘ ವಿಚಾರಣೆ ನಡೆದು ಪ್ರಾಸಿಕ್ಯೂಷನ್ ಪರ 19 ಮಂದಿ ಸಾಕ್ಷ್ಯ ಹೇಳಿದ್ದರು. ನ್ಯಾಯಾಧೀಶ ಎಂ.ಸಿ.ನಂಜೇಗೌಡ ಫೆ. 28ರಂದು ತೀರ್ಪು ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.