ಕುಷ್ಟಗಿ: ಕನ್ನಡ ಸಾಹಿತ್ಯ ಪರಿಷತ್ತಿಗೆ ನಡೆಯುತ್ತಿರುವ ಚುನಾವಣೆಯಲ್ಲಿ ಜಾತಿ ರಾಜಕಾರಣ ನಡೆಯುತ್ತಿದೆ ಎಂದು ಕೇಂದ್ರ ಕಸಾಪ ಚುನಾವಣೆ ಅಭ್ಯರ್ಥಿಯಾಗಿರುವ ಸಾಹಿತಿ ಚಂದ್ರಶೇಖರ ಪಾಟೀಲ ಹೇಳಿದ್ದನ್ನು ಜಿಲ್ಲಾ ಘಟಕದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ಅಭ್ಯರ್ಥಿ ರಾಜಶೇಖರ ಅಂಗಡಿ ಗುರುವಾರ ಇಲ್ಲಿ ಆಕ್ಷೇಪಿದರು.

ಚುನಾವಣೆ ನಿಮಿತ್ಯ ತಾಲ್ಲೂಕಿನ ಅಜೀವ ಸದಸ್ಯರ ಮನೆ ಮನೆಗೆ ತೆರಳಿ ಮತಯಾಚಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಂಡಾಯ ಕುರಿತು ಮಾತನಾಡುತ್ತಿರುವ ಮತ್ತು ಮೂಲ ಸಿದ್ಧಾಂತದ ಬೆನ್ನುಹತ್ತಿದವರ ಬಾಯಿಯಲ್ಲಿ `ಜಾತಿ~ ಎಂಬ ಮಾತು ಏಕೆ ಬಂತು ಎಂಬುದು ತಿಳಿಯುತ್ತಿಲ್ಲ, ಅಲ್ಲದೇ ತಾವು ಚಂಪಾ ಅವರಿಗೆ ಬುದ್ಧಿ ಹೇಳುವಷ್ಟು ದೊಡ್ಡವರಲ್ಲ ಎಂದು ಛೇಡಿಸಿದರು.

ಜಾತಿ, ಹಣ ಬಲ ಕಸಾಪ ಚುನಾವಣೆಯಲ್ಲಿ ಯಾರೂ ತೊಡಗಿಲ್ಲ, ಅಭಿಮಾನಿಗಳೇ ತಮ್ಮ ಪರವಾಗಿ ಮತಯಾಚನೆ ಮಾಡುತ್ತಿದ್ದಾರೆ.

ನೇರವಾಗಿ ಅಜೀವ ಸದಸ್ಯರನ್ನು ಭೇಟಿ ಮಾಡಿ ಸ್ನೇಹಪೂರ್ವಕವಾಗಿ ತಮ್ಮನ್ನು ಬೆಂಬಲಿಸುವಂತೆ ಹಿರಿಯರಿಗೆ ತಲೆ ಬಾಗಿ ಮನವಿ ಮಾಡುತ್ತಿದ್ದು ಗೆಲುವು ತಮ್ಮದೇ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ತಮಗೆ ಮೂವರು ಅಭ್ಯರ್ಥಿಗಳೂ ಎದುರಾಳಿಗಳು ಎಂದು ಹೇಳಿದ ಅಂಗಡಿ, ಶೇಖರಗೌಡ ಮಾಲಿಪಾಟೀಲ ಅವರ ಗುಂಪಿನಲ್ಲಿ ಗುರುತಿಸಿಕೊಂಡಿದ್ದ ಬಸವರಾಜ ಕೋಟಿ ಮೊದಲು ಸ್ಪರ್ಧಿಸುವುದಿಲ್ಲ ಎಂದು ಹೇಳಿದ್ದರು, ಆದರೆ ಮತಯಾಚನೆಗೆ ಹೋದಲ್ಲೆಲ್ಲ ಕೋಟಿ ಒಬ್ಬೊಬ್ಬರ ಪರ ಮಾತನಾಡುತ್ತಿದ್ದಾರೆ. ಕೋಟಿ ನಮ್ಮ ಅಭ್ಯರ್ಥಿಯಲ್ಲ ಎಂದು ಶೇಖರಗೌಡ ಸ್ಪಷ್ಟಪಡಿಸಿದ್ದಾರೆ.

ಆದರೂ ಅವರನ್ನು ಬೆಂಬಲಿಸುವಂತೆ ಕೋಟಿ ಹೇಳುತ್ತಿದ್ದಾರೆ ಹಾಗಾದರೆ ಕೋಟಿ ಅವರ ಒಂದು ಕರಪತ್ರದಲ್ಲೂ ಶೇಖರಗೌಡರ ಭಾವಚಿತ್ರ ಏಕಿಲ್ಲ ಎಂದು ತಿರುಗೇಟು ನೀಡಿದ ರಾಜಶೇಖರ, ಕೋಟಿ ವಿನಾಕಾರಣ ಗೊಂದಲ ಸೃಷ್ಟಿಸುತ್ತಿದ್ದಾರೆ ಎಂದು ಆರೋಪಿಸಿದರು.

ಸಂಘಟನಾ ಸಾಮರ್ಥ್ಯ, ಒಂದು ದಶಕದಿಂದಲೂ ವಿವಿಧ ಘಟಕಗಳಲ್ಲಿ ಸೇವೆ ಸಲ್ಲಿಸಿದ ಅನುಭವ, ಶೇಖರಗೌಡ ಮಾಲಿಪಾಟೀಲ ಅವರ ಉತ್ತಮ ಚಟುವಟಿಕೆಗಳು ತಮ್ಮ ಗೆಲುವಿಗೆ ಶ್ರೀರಕ್ಷೆಯಾಗಲಿವೆ.

ತಾವು ಅಧ್ಯಕ್ಷರಾದರೆ ಆಜೀವ ಸದಸ್ಯರ ಸಂಖ್ಯೆ ಹೆಚ್ಚಿಸುವುದು, ಪರಿಷತ್ತಿನ ಚಟುವಟೆಕೆಗಳನ್ನು ಗ್ರಾಮೀಣ ಪ್ರದೇಶಕ್ಕೆ ವಿಸ್ತರಿಸುವುದು. ಜನ ಮಾನಸದಲ್ಲಿ ಉಳಿಯುವಂಥ ಕಾರ್ಯಕ್ರಮಗಳನ್ನು ಹಾಕಿಕೊಳ್ಳುವ ಉದ್ದೇಶ ತಮ್ಮದಾಗಿದೆ ಎಂದು ಹೇಳಿದ ಅಂಗಡಿ, ಹಿರಿಯ ಕಿರಿಯ ಸಾಹಿತಿಗಳನ್ನು ಗೌರವಿಸಿ ಸಾಹಿತ್ಯ ಮತ್ತು ಸಾಹಿತಿಗಳನ್ನು ಬೆಳೆಸುವ ಗುರಿ ಹೊಂದಿರುವುದಾಗಿ ವಿವರಿಸಿದರು.

ಆದರೆ ಚಟುವಟಿಕೆ ಹೊರತುಪಡಿಸಿ ಯಾವುದೇ ಹುದ್ದೆ ಮುಖ್ಯ ಅಲ್ಲ, ಚುನಾವಣೆಯಲ್ಲಿ ಸೋಲು ಗೆಲುವು ಏನೇ ಆದರೂ ಕಸಾಪದೊಂದಿಗಿನ ನಿಕಟ ಸಂಪರ್ಕ ನಿರಂತರವಾಗಿರುತ್ತದೆ ಎಂದು ಅವರು ಹೇಳಿದರು.

ಮಂಜುನಾಥ ಡೊಳ್ಳಿನ, ಈಶಪ್ಪ ಮಳಗಿ, ಶಿವರಾಜ ಗುರಿಕಾರ, ಮಾನಪ್ಪ ಪೂಜಾರ, ಶಿವು ಯಲಬುರ್ಗಾ, ಚನ್ನಬಸಪ್ಪ ಹೊಕ್ಕಳದ, ಪತ್ರಕರ್ತ ಬಸವರಾಜ ಬಿನ್ನಾಳ, ರವೀಂದ್ರ ಬಾಕಳೆ, ಉಮೇಶ ಹಿರೇಮಠ ಮೊದಲಾದವರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.