ಬಂದಾರು: ಶ್ರಮದಾನ, ರಸ್ತೆ ನಿರ್ಮಾಣ

ಸೋಮವಾರ, ಮೇ 20, 2019
30 °C

ಬಂದಾರು: ಶ್ರಮದಾನ, ರಸ್ತೆ ನಿರ್ಮಾಣ

Published:
Updated:

ಉಪ್ಪಿನಂಗಡಿ: ಸಮೀಪದ ಬಂದಾರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೊಗ್ರು ಗ್ರಾಮದ ದಪ್ಪದಪಲ್ಕೆ- ಉಳಿಯ- ಪೊಯ್ಯ ಪ್ರದೇಶಕ್ಕೆ ಸಂಪರ್ಕ ಕಲ್ಪಿಸುವ ಹೊಸ ರಸ್ತೆಯಲ್ಲಿ ಸುಮಾರು 1 ಕಿಮೀ ದೂರದ ಹೊಸ ರಸ್ತೆಯನ್ನು ಮೊಗ್ರು ಅಪ್ನಾ ದೇಶ್ ಗ್ರಾಮ ಸಮೃದ್ಧಿ ಸಮಿತಿ ವತಿಯಿಂದ ಗ್ರಾಮಸ್ಥರು ಗುರುವಾರ ಶ್ರಮದಾನದ ಮೂಲಕ ನಿರ್ಮಿಸಿದರು.ಬಂದಾರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ದಪ್ಪದಪಲ್ಕೆ-ಕಂಚಿನಡ್ಕ ಸಂಪರ್ಕ ರಸ್ತೆಯನ್ನು 2010ರಲ್ಲಿ ಗ್ರಾಮ ಸಭೆಯ ನಿರ್ಣಯದಂತೆ ಗ್ರಾಮ ಪಂಚಾಯಿತಿ ರಸ್ತೆಗಳ ಪಟ್ಟಿಗೆ ಸೇರ್ಪಡೆಗೊಳಿಸಲಾಗಿತ್ತು. ಈ ಮಧ್ಯೆ ದಪ್ಪದಪಲ್ಕೆ ಎಂಬಲ್ಲಿಂದ ಉಳಿಯ ಮೂಲಕ ಪೊಯ್ಯ ಪ್ರದೇಶದವರೆಗಿನ ಸುಮಾರು 5 ಕಿಮೀ ದೂರದ ರಸ್ತೆಯಲ್ಲಿ ಸುಮಾರು 1.5 ಕಿಮೀ ದೂರ ಗುಡ್ಡಗಾಡು ಪ್ರದೇಶವಾಗಿದ್ದು, ಜನಸಂಚಾರಕ್ಕೆ ಹಾಗೂ ವಾಹನ ಓಡಾಟಕ್ಕೆ ಯೋಗ್ಯವೆನಿಸುವ ಪೂರ್ಣ ರಸ್ತೆಯಾಗದೆ ಗ್ರಾಮಸ್ಥರಿಗೆ ತೊಂದರೆಯಾಗಿತ್ತು.  ಈ ರೀತಿಯಾಗಿ ಸಂಪರ್ಕಕ್ಕೆ ಅಡ್ಡಿಯಾಗಿದ್ದ ಅಪೂರ್ಣ ರಸ್ತೆಯನ್ನು ಶಾಶ್ವತ ಸಂಪರ್ಕ ಯೋಗ್ಯ ರಸ್ತೆಯನ್ನಾಗಿ ಅಭಿವೃದ್ಧಿಗೊಳಿಸಲು ಊರವರೇ ಮುಂದಾಗಿದ್ದು ಗ್ರಾಪಂ ಸದಸ್ಯ ದಿನಕರ ಗೌಡ ನೇತೃತ್ವದಲ್ಲಿ ಗ್ರಾಮಸ್ಥರು ಶ್ರಮದಾನ ನಡೆಸಿದ್ದಾರೆ.

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry