ಸೋಮವಾರ, ಜೂನ್ 14, 2021
27 °C

ಬಜೆಟ್: ಒತ್ತಡದಲ್ಲಿ ಷೇರುಪೇಟೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಬೈ (ಪಿಟಿಐ): 2012-13ನೇ ಸಾಲಿನ ಕೇಂದ್ರ ಬಜೆಟ್ ಮಾರ್ಚ್ 16ರಂದು (ಶುಕ್ರವಾರ) ಮಂಡನೆಯಾಗಲಿದ್ದು, ಈ ಹಿನ್ನೆಲೆಯಲ್ಲಿ, ಮುಂಬೈ ಷೇರು ಪೇಟೆ ಸಂವೇದಿ ಸೂಚ್ಯಂಕವು ತೀವ್ರ ಏರಿಳಿತ ಕಾಣುವ ಸಾಧ್ಯತೆ ಇದೆ.ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಪ್ರಕಟಿಸಲಿರುವ ಮಧ್ಯಂತರ ಹಣಕಾಸು ಪರಾಮರ್ಶೆ, ಬಜೆಟ್ ಪೂರ್ವ ಆರ್ಥಿಕ ಸಮೀಕ್ಷಾ ವರದಿ ಇತ್ಯಾದಿ ಸಂಗತಿಗಳು ಕೂಡ ಈ ವಾರ ಷೇರುಪೇಟೆಯಲ್ಲಿ  ಗರಿಷ್ಠ ಮಟ್ಟದ ತಲ್ಲಣ ಸೃಷ್ಟಿಸಬಹುದು ಎಂದು ತಜ್ಞರು ವಿಶ್ಲೇಷಿಸಿದ್ದಾರೆ.ಗ್ರೀಸ್ ಪರಿಹಾರ ಕೊಡುಗೆಗೆ ಸಂಬಂಧಿಸಿದಂತೆ ಯೂರೋಪ್ ಒಕ್ಕೂಟ ಕೈಗೊಂಡಿರುವ ಕ್ರಮಗಳಿಂದ ಜಾಗತಿಕ ಷೇರುಪೇಟೆಗಳಲ್ಲಿ ಸ್ಥಿರತೆ ಮೂಡಿದೆ. ಆದರೆ, ದೇಶಿಯ ಮಟ್ಟದಲ್ಲಿ ಈ ವಾರ ಸಂಪೂರ್ಣವಾಗಿ `ಬಜೆಟ್~, ವಹಿವಾಟನ್ನು ನಿರ್ಧರಿಸಲಿದೆ ಎಂದು  ಏಂಜೆಲ್ ಬ್ರೋಕಿಂಗ್ ಸಂಸ್ಥೆ ಅಭಿಪ್ರಾಯಪಟ್ಟಿದೆ.`ಆರ್‌ಬಿಐ~ ಈಗಾಗಲೇ ಬ್ಯಾಂಕುಗಳ ನಗದು ಮೀಸಲು ಅನುಪಾತವನ್ನು (ಸಿಆರ್‌ಆರ್) ಶೇ 0.75ರಷ್ಟು ತಗ್ಗಿಸಿದೆ. ಇದರಿಂದ ಮಾರುಕಟ್ಟೆಗೆ ಹೆಚ್ಚುವರಿಯಾಗಿ ್ಙ48 ಸಾವಿರ ಕೋಟಿಗಳಷ್ಟು ಬಂಡವಾಳ ಹರಿದು ಬರಲಿದೆ. `ಆರ್‌ಬಿಐ~ ಕ್ರಮದಿಂದ ವಾರಾಂತ್ಯದ ವಹಿವಾಟಿನಲ್ಲಿ ಸೂಚ್ಯಂಕ 350 ಅಂಶಗಳಷ್ಟು ಏರಿಕೆ ಕಂಡಿದೆ.`ಆರ್‌ಬಿಐ~ ಅನಿರೀಕ್ಷಿತ ನಿರ್ಧಾರವು ಷೇರುಪೇಟೆಯಲ್ಲಿ ಚೇತರಿಕೆ ತಂದಿರುವುದೇನೋ ನಿಜ, ಆದರೆ, ಬಜೆಟ್ ಹಿನ್ನೆಲೆಯಲ್ಲಿ, ಸೋಮವಾರದಿಂದ ವಹಿವಾಟಿನ ಚಿತ್ರಣ ಸಂಪೂರ್ಣವಾಗಿ ಬದಲಾಗಲಿದೆ ಎಂದು `ವೇ-ಟು-ವೆಲ್ತ್~ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅಂಬರೀಷ್ ಬಳಿಗಾ ಹೇಳಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.