ಶನಿವಾರ, ಜೂನ್ 19, 2021
27 °C

ಬಜೆಟ್: ಮಠಗಳನ್ನು ಹೊರಗಿಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಖ್ಯಮಂತ್ರಿ ಸದಾನಂದಗೌಡರು ಬಿ.ಎಸ್.ಯಡಿಯೂರಪ್ಪ ಅವರ ಮಾದರಿಯಲ್ಲಿಯೇ ಬಜೆಟ್ ಮಂಡಿಸುವುದಾಗಿ ಹೇಳಿದ್ದಾರೆ. `ನಾನು ಕರ್ನಾಟಕದ ಜನರ ಕೂಲಿಯಾಳು, ನಾನು ಯಾರೊಬ್ಬರ ಸೊತ್ತಲ್ಲ~ ಎಂದು ಸ್ವಾಭಿಮಾನದ ಮಾತನಾಡಿದ್ದ ಅವರು ಈಗ ಯಡಿಯೂರಪ್ಪಮಾದರಿಯನ್ನು ಅನುಸರಿಸುವ ಮಾತುಗಳನ್ನು ಆಡುತ್ತಿರುವುದು ದುರದೃಷ್ಟಕರ ಬೆಳವಣಿಗೆ.ಯಡಿಯೂರಪ್ಪ ಮಠ ಮಾನ್ಯಗಳಿಗೆ ಬಜೆಟ್‌ನಲ್ಲಿ ಹಣ ನೀಡುವ ಮೂಲಕ ಕೆಟ್ಟ ಪರಂಪರೆಯನ್ನು  ಹಾಕಿದರು. ಯಡಿಯೂರಪ್ಪ ಅವರಿಂದ ಆರ್ಥಿಕ ಲಾಭ ಪಡೆದ ಮಠಾಧಿಪತಿಗಳು ತಮ್ಮ ಘನತೆಯನ್ನೂ ಮರೆತು ಅವರನ್ನು ಓಲೈಸುತ್ತಿದ್ದಾರೆ. ಮಠಾಧಿಪತಿಗಳ ನಡವಳಿಕೆಗಳಿಂದ ರಾಜ್ಯದ  ಜನರಿಗೆ ಭ್ರಮನಿರಸನ ಆಗಿದೆ.ಈಗ ಯಡಿಯೂರಪ್ಪನವರ ಮಾದರಿ ಎಂದರೆ ಮಠಗಳಿಗೆ ಹಣ ಕೊಡುವ ಕೆಟ್ಟ ಪರಂಪರೆ ಅಲ್ಲವೇ? ಕಳೆದ ಮೂರು ವರ್ಷಗಳ ಆಯವ್ಯಯದಲ್ಲಿ ಅವರು ಅನುತ್ಪಾದಕ ಚಟುವಟಿಕೆಗಳಿಗೆ ಹೆಚ್ಚಿನ ಆದ್ಯತೆ ನೀಡಿದ್ದಾರೆ. ಸಾವಯವ ಕೃಷಿಯೂ ಸೇರಿದಂತೆ ರೈತರ ಅನುಕೂಲಕ್ಕಾಗಿ ರೂಪಿಸಿದ ಕಾರ್ಯಕ್ರಮಗಳೆಲ್ಲವೂ ವಿಫಲವಾಗಿವೆ. ಅಂತಹ ದುಃಸ್ಸಾಹಸಕ್ಕೆ ಸದಾನಂದ ಗೌಡರು ಕೈಹಾಕಬಾರದು.ಬಜೆಟ್ ಮಂಡನೆಯಲ್ಲಿ ಯಡಿಯೂರಪ್ಪನವರ ಸಲಹೆಯನ್ನೂ ಕೇಳುವ ಅಗತ್ಯವಿಲ್ಲ. ಎಲ್ಲ ವಿಚಾರಗಳಲ್ಲೂ ಗೌಡರು ಮುಖ್ಯಮಂತ್ರಿಗಳು. ಇದರಲ್ಲಿ ಬೇರೆಯವರ ಹಸ್ತಕ್ಷೇಪಕ್ಕೆ ಅವಕಾಶ ಇರಬಾರದು. ಬಜೆಟ್ ಮಂಡನೆಯಲ್ಲಿ ಗೌಡರು ಸ್ವಂತಿಕೆಯನ್ನು ತೋರಬೇಕು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.