ಬೆಂಗಳೂರು: `ಬಡವರ ಪರ ಕಾರ್ಯನಿರ್ವಹಿಸಲು ಮುಖ್ಯಮಂತ್ರಿಯೇ ಆಗಬೇಕೆಂದಿಲ್ಲ. ಸಾಮಾನ್ಯ ವ್ಯಕ್ತಿಯಾಗಿಯೇ ಬಡವರ ಸೇವೆ ಮಾಡುವೆ. ಈ ಸ್ಥಾನಕ್ಕಾಗಿ ಎಂದೂ ಭಿಕ್ಷೆ ಬೇಡುವುದಿಲ್ಲ~ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದರು.

ಕರ್ನಾಟಕ ರಾಜ್ಯ ಸವಿತಾ ಸಮಾಜವು ನಗರದ ಪುರಭವನದಲ್ಲಿ ಮಂಗಳವಾರ ಆಯೋಜಿಸಿದ್ದ ಸವಿತಾ ಸಮಾಜದ ಸಮಾವೇಶದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

`ಶಿಕ್ಷಣ ಮತ್ತು ರಾಜಕೀಯ ಕ್ಷೇತ್ರದಲ್ಲಿ ಸವಿತಾ ಸಮುದಾಯದವರ ಸಂಖ್ಯೆ ಕಡಿಮೆ ಇದೆ. ಕುಲಕಸುಬು ಒಂದೆಡೆ ಇರಲಿ, ಸಮುದಾಯದ ಹಿರಿಯರು ಮಕ್ಕಳನ್ನು ಸಂಪೂರ್ಣ ಶಿಕ್ಷಿತರನ್ನಾಗಿ ಮಾಡುತ್ತೇವೆಂಬ ಪಣ ತೊಡುವ ಮೂಲಕ ಸಮುದಾಯಕ್ಕೆ ಕಾಣಿಕೆ ನೀಡಬೇಕು~ ಎಂದು ಕರೆ ನೀಡಿದರು. `ಬಿಜೆಪಿ ಸರ್ಕಾರವು ಸವಿತಾ ಸಮುದಾಯದ ಅಭಿವೃದ್ಧಿಗೆ ಉತ್ತಮ ಕೊಡುಗೆಗಳನ್ನು ನೀಡಿದೆ. ಮೂರು ವರ್ಷಗಳ ಹಿಂದೆ ಈ ಸಮುದಾಯವು ಯಾವ ಸ್ಥಿತಿಯಲ್ಲಿತ್ತು ಎಂಬುದನ್ನು ಅರಿಯಬೇಕು. ನನಗೆ ಜಾತಿ ಗೊತ್ತಿಲ್ಲ. ಎಲ್ಲರೂ ಸಮಾನರೂ ಎಂಬ ಅಂಶವನ್ನೇ ಮುಂದಿಟ್ಟುಕೊಂಡು ಎಲ್ಲ ಬಜೆಟ್ಗಳನ್ನು ಮಂಡಿಸಿದ್ದೇನೆ~ ಎಂದು ಹೇಳಿದರು.

`ಅಕ್ರಮ ಗಣಿಗಾರಿಕೆಗೆ ಕಡಿವಾಣ ಹಾಕುವಂತೆ ಪ್ರಧಾನಿ ಮನಮೋಹನ್ಸಿಂಗ್ ಅವರಿಗೆ ಪತ್ರ ಬರೆದಿದ್ದೆ. ಮುಖ್ಯಮಂತ್ರಿಯಾಗಿ ತೆಗೆದುಕೊಂಡ ಈ ದಿಟ್ಟ ಕ್ರಮಕ್ಕೆ ಪ್ರಧಾನಿ ಅವರು ನನ್ನನ್ನು ಸನ್ಮಾನಿಸಬೇಕಿತ್ತು. ಆದರೆ ವಿರೋಧ ಪಕ್ಷ ಮತ್ತು ಸ್ವಪಕ್ಷದ ಕೆಲವರ ಪಿತೂರಿಯಿಂದ ಅಪರಾಧಿ ಸ್ಥಾನದಲ್ಲಿ ನಿಂತು 24 ದಿನಗಳು ಜೈಲಿನಲ್ಲಿ ಕಳೆಯಬೇಕಾಯಿತು. ಈ ರೀತಿಯ ದೌರ್ಜನ್ಯಕ್ಕೆ ದೇಶಕ್ಕೆ ಸ್ವಾತಂತ್ರ್ಯ ಬೇಕಿತ್ತಾ? ಎಂದು ಪ್ರಶ್ನಿಸಿದರು.

ಸಚಿವ ವಿ.ಸೋಮಣ್ಣ, ` ಸವಿತಾ ಸಮುದಾಯದಲ್ಲಿರುವ ನಿರ್ಗತಿಕರಿಗೆ ಉಚಿತ ನಿವೇಶನ ನೀಡುವತ್ತ ಚಿಂತನೆ ನಡೆಸಲಾಗಿದೆ. ಆ ಮೂಲಕ ಗುಡಿಸಲುರಹಿತ ಸಮಾಜವನ್ನು ನಿರ್ಮಿಸುವ ಕನಸು ಸಾಕಾರಗೊಳ್ಳಲಿದೆ~ ಎಂದು ಹೇಳಿದರು.

ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಎನ್.ಶಂಕರಪ್ಪ, ಉಪಮೇಯರ್ ಎಸ್.ಹರೀಶ್, ಸಮಾಜ ಅಧ್ಯಕ್ಷ ಎನ್.ಸಂಪತ್ಕುಮಾರ್ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.