ಬುಧವಾರ, ಮೇ 12, 2021
19 °C

ಬಡವರ ಸೇವೆಯೇ ಜನ್ಮದಿನದ ಸಾರ್ಥಕತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರೋಣ: ಜನ್ಮದಿನಗಳು ಬಡವರ, ದೀನ ದಲಿತರ ಹಾಗೂ ಹಿಂದುಳಿದ ವರ್ಗಗಳ ಕಣ್ಣೀರು ಒರೆಸುವ ಮುಖ್ಯ ಸಾಧನ ವಾಗಿ ಆಚರಿಸಲ್ಪಟ್ಟಾಗ ಮಾತ್ರ ಇಂತಹ ಸಮಾರಂಭಗಳು ಸಾರ್ಥಕ. ಅವುಗಳು ವಿಶಿಷ್ಟ  ರೀತಿಯ ಜನ್ಮದಿನಗಳಾಗಲು ಸಾಧ್ಯ ಎಂದು ಮಾಜಿ ಸಚಿವ ಹೆಚ್.ಕೆ. ಪಾಟೀಲ ಹೇಳಿದರು.ಅವರು ಮಂಗಳವಾರ ಪಟ್ಟಣದ ರಾಜೀವಗಾಂಧಿ ಶಿಕ್ಷಣ ಸಂಸ್ಥೆಯ ಆರ್ಯವೇದಿಕ್ ಮೆಡಿಕಲ್ ಕಾಲೇಜಿನ ಆವರಣದಲ್ಲಿ ಮಾಜಿ ಶಾಸಕ ಜಿ.ಎಸ್. ಪಾಟೀಲ 64ನೇ ಜನ್ಮದಿನದ ಪ್ರಯುಕ್ತ ನಡೆದ ವಿವಿಧ ರೀತಿಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಜನ್ಮದಿನವನ್ನು ನೆಪವಾಗಿ ಇಟ್ಟು ಕೊಂಡು ಈ ತರಹದ ಕಾರ್ಯಕ್ರಮ ಗಳನ್ನು ಮಾಡಿರುವುದು ನಿಜಕ್ಕೂ ಶ್ಲಾಘನೀಯ. ಕೇಂದ್ರ ಸರ್ಕಾರದ ಮಹತ್ವಪೂರ್ಣವಾದ ಯೋಜನೆ ಯಾದ ಅಸಂಘಟಿತ ಕೂಲಿ ಕಾರ್ಮಿಕ ರಿಗೆ ಕಾರ್ಡ್ ಹಂಚಿಕೆ ಮಾಡಿ ಅವರಿಗೆ ಪೆನ್ಸನ್ ಕಾರ್ಡ್ ಹಂಚಿಕೆ ಮಾಡಿ ಅವರಿಗೆ ಪೆನ್ಶನ್ ವಿತರಿಸುವ ಕಾರ್ಯ ಅನನ್ಯವಾದದು ಎಂದು ಅವರು ಹೇಳಿದರು.ಈಗಿನ ಬರಗಾಲದ ಕಷ್ಟದ ಕಾಲ ದಲ್ಲಿ ಟೀಕೆಗಳನ್ನು ಮಾಡುವುದನ್ನು ಬಿಟ್ಟು ಬರಗಾಲದ ತೀವ್ರ          ತೊಂದರೆ ಅನುಭವಿಸುತ್ತಿರುವ ಈ ಸಮಯದಲ್ಲಿ ಕುಡಿಯುವ ನೀರಿನ ಶುದ್ದ ಘಟಕವನ್ನು ಪ್ರಾರಂಭಿಸಿರುವ ಜಿ.ಎಸ್. ಪಾಟೀಲರ ಕಾರ್ಯ ಇತರರಿಗೆ ಪ್ರೇರಣೀಯವಾಗಿದೆ. ಹಿಂದೆ ಬರಗಾಲ ಇದ್ದಾಗ ಶಾಸಕರಾಗಿದ್ದ  ಪಾಟೀಲರು ಮಾಡಿರುವ ಕಾರ್ಯ ಈಗಲೂ ಆಗಿನ ಜನರಿಗೆ ಉಪಯೋಗವಾಗಿದ್ದವು. ಆವಾಗ ಅವರು ನಿರ್ಮಿಸಿದ ಕೆರೆಗಳನ್ನು ನೋಡಿದವರು ಅವರಿಗೆ ಸಾವಿರ ಕೆರೆಗಳ ಸರ್ದಾರ ಎಂದು ಕರೆಯುತ್ತಾರೆ ಎಂದರು.ಕಾರ್ಯಕ್ರಮದ ಸಾನ್ನಿಧ್ಯವನ್ನು ವಹಿಸಿದ್ದ ಜಮಖಂಡಿಯ ಓಲೇಮಠದ ಡಾ.ಚನ್ನಬಸವ ಶ್ರಿಗಳು, ರೋಣ ಗುಲಗಂಜಿ ಮಠದ ಗುರುಪಾದ ಶ್ರಿಗಳು ಶಾಸಕ ಜೆ.ಎಸ್.ಪಾಟೀಲ ಅವರ ಕಾರ್ಯಗಳನ್ನು ಪ್ರಶಂಸಿದರು.

ಮಾಜಿ ಸಂಸದ ಆರ್.ಎಸ್. ಪಾಟೀಲ, ಜಿ.ಎಸ್.ಗಡ್ಡೇದದೇವರ ಮಠ, ವಿಧಾನ ಪರಿಷತ್ ಸದಸ್ಯ ಶ್ರಿನಿವಾಸ ಮಾನೆ, ಮಾಜಿ ಶಾಸಕ  ಬಿ.ಆರ್.ಯಾವಗಲ್, ಮಾಜಿ      ಕೇಂದ್ರ ಸಚಿವ ಸಿದ್ದು ನ್ಯಾಮಗೌಡ, ಮಾಜಿ ಸಚಿವ ಆರ್.ಬಿ.ತಿಮ್ಮೋಪೂರ, ಮಾಜಿ ಸಚಿವ ಎ.ಎಂ.ಹಿಂಡಸಗೇರಿ, ಮಾಜಿ ಶಾಸಕ ಡಿ.ಆರ್.ಪಾಟೀಲ, ಮಾಜಿ ಶಾಸಕ ಸಿ.ಎಸ್.ಶಿವಳ್ಳಿ, ಅಯ್ಯಪ್ಪ ನಾಯ್ಕರ,         ಡಾ.ಸುಜಾತ ಗಿರಿಯನ್, ಅಪ್ಪಣ್ಣ ಇನಾಮತಿ, ಡಾ.ಎ.ಸಿ.ಹೂಲಿ ಮುಂತಾದವರು ಉಪಸ್ಥಿತರಿದ್ದು ಮಾತನಾಡಿದರು.ಸಮಾರಂಭದ ಅಧ್ಯಕ್ಷತೆಯನ್ನು  ವಿಧಾನಪರಿಷತ್‌ನ ಮಾಜಿ ಸಭಾಪತಿ ಹಾಗೂ ಹಾಲಿ ಸದಸ್ಯ ವೀರಣ್ಣ ಮತ್ತಿ ಕಟ್ಟಿ ವಹಿಸಿದ್ದರು.ಡಿಇಡಿ ವಿದ್ಯಾರ್ಥಿನಿಯರಿಂದ ಪ್ರಾರ್ಥನೆ ಜರುಗಿತು. ಪರಶುರಾಮ ಅಳಗವಾಡಿ ಸ್ವಾಗತಿಸಿದರು. ವಿ.ಬಿ. ಸೋಮನಕಟ್ಟಿಮಠ ನಿರೂಪಿಸಿದರು. ಯೂಸೂಫ್ ಇಟಗಿ ವಂದಿಸಿದರು. ಸನ್ಮಾನ: ಸಮಾರಂಭದ ಕೇಂದ್ರ ಬಿಂದು ಮಾಜಿ ಶಾಸಕ ಜಿ.ಎಸ್. ಪಾಟೀಲ ಅವರನ್ನು ನೂರಾರು ಅಭಿ ಮಾನಿಗಳು ಸನ್ಮಾನಿಸಿದರು.ತಾಲ್ಲೂಕಿನ ವಿವಿಧೆಡೆಯಿಂದ ಕಾಂಗ್ರೆಸ್ ಕಾರ್ಯಕರ್ತರು, ಅಭಿಮಾನಿಗಳು, ಸಂಬಂಧಿಕರು ಆಗಮಿಸಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.