ತುಮಕೂರು: ರಾಜ್ಯದಲ್ಲಿ ಕುಡಿಯುವ ನೀರಿಗಾಗಿ ಸರ್ಕಾರ ಕೋಟಿಗಟ್ಟಲೆ ಹಣ ಬಿಡುಗಡೆ ಮಾಡಿದೆ. ಆದರೆ ಆ ಹಣದಿಂದ ಜನರ ನೀರಿನ ದಾಹ ತೀರದಾಗಿದೆ.

ಪೂರ್ವ ಮುಂಗಾರು ಆರಂಭದಲ್ಲಿ ಉತ್ತಮ ಮಳೆಯಾಗುವ ಮುನ್ಸೂಚನೆ ನೀಡಿದರೂ ಈಗ ಕೈಕೊಟ್ಟಿದೆ. ಅಂತರ್ಜಲ ಮಟ್ಟ ಕುಸಿಯುತ್ತಲೇ ಸಾಗಿದೆ. ಕೊಳವೆ ಬಾವಿಗಳಲ್ಲಿ ನೀರು ಖಾಲಿಯಾಗುತ್ತಿದೆ.

ನೀರು ಸಿಕ್ಕರೂ ಅದು ಕುಡಿಯುವ ಸ್ಥಿತಿಯಲ್ಲಿಲ್ಲ. ಆಳಕ್ಕೆ ಕೊರೆದಷ್ಟೂ ಫ್ಲೋರೈಡ್ ಮಿಶ್ರಿತ ನೀರು ಸಿಗುತ್ತಿದೆ. ಗ್ರಾಮೀಣ ಭಾಗದಲ್ಲಿ ಹಣ ಕೊಟ್ಟರೂ ಕುಡಿಯುವ ನೀರು ಒದಗಿಸುವುದು ಕಷ್ಟಕರವಾಗಿದೆ.

ನೀರಿನ ಸಮಸ್ಯೆ ಪರಿಹರಿಸಲು ಪ್ರತಿ ಜಿಲ್ಲಾ ಪಂಚಾಯಿತಿಗೆ ಕೋಟಿಗಟ್ಟಲೆ ಹಣ ಬಿಡುಗಡೆಯಾಗಿದೆ. ಆದರೂ ಪರಿಹಾರ ಮಾತ್ರ ಕಾಣದಾಗಿದೆ. ಟ್ಯಾಂಕರ್ನಿಂದ ನೀರು ಪೂರೈಸುತ್ತಿದ್ದೇವೆ. ಹೊಸ ಕೊಳವೆ ಬಾವಿ ಕೊರೆಸಲಾಗಿದೆ. ನೀರಿನ ಸಮಸ್ಯೆ ಪರಿಹಾರವಾಗಲಿದೆ ಎಂಬುದೇ ಅಧಿಕಾರಿವರ್ಗ ನಿತ್ಯ ನೀಡುವ ಪ್ರತಿಕ್ರಿಯೆ. ಆದರೆ ವಾಸ್ತವದಲ್ಲಿ ಪರಿಸ್ಥಿತಿಯೇ ಬೇರೆ.

ನೀರಿನ ಸಮಸ್ಯೆ ಕುರಿತು ಹಳ್ಳಿಗರನ್ನು ಒಮ್ಮೆ ಮಾತನಾಡಿಸಿದರೆ ಸಾಕು, ವಾಸ್ತವದ ಪರಿಚಯವಾಗುತ್ತದೆ. ಗ್ರಾಮ ಪಂಚಾಯಿತಿ ವತಿಯಿಂದ ನಿತ್ಯ ಎರಡು ಟ್ಯಾಂಕರ್ ನೀರು ಬಿಡಲಾಗುತ್ತಿದೆ. ಟ್ಯಾಂಕರ್ ನೀರಿಗಾಗಿ ಪಂಚಾಯಿತಿಯು ತಿಂಗಳಿಗೆ ರೂ. 20 ಸಾವಿರ ಖರ್ಚು ಮಾಡಬೇಕಾಗುತ್ತದೆ. ಸ್ಥಳೀಯ ಖಾಸಗಿ ಬೋರ್ವೆಲ್ ಮಾಲೀಕರಿಗೆ ಕಡಿಮೆ ಪ್ರಮಾಣದಲ್ಲಿ ಹಣ ನೀಡಿ, ನೀರು ಪಡೆಯಲಾಗುತ್ತಿದೆ ಎಂದು ತುಮಕೂರು ತಾಲ್ಲೂಕು ದೇವಲಾಪುರ ನಿವಾಸಿ ಕೃಷ್ಣಮೂರ್ತಿ ಹೇಳುತ್ತಾರೆ.

ಒಮ್ಮಮ್ಮೆ ಖಾಸಗಿ ಕೊಳವೆ ಬಾವಿ ಮಾಲೀಕರೂ ಕೂಡ ನೀರು ಬಿಡುವುದಿಲ್ಲ. ಊರಿನಲ್ಲಿ ಮೂರು ಹೊಸ ಕೊಳವೆಬಾವಿ ಕೊರೆಸಲಾಗಿದೆ. ಆದರೆ ಪಂಪ್, ಮೋಟರ್ ಹಾಕಿಲ್ಲ. ದಿನಕ್ಕೆ 3 ಗಂಟೆ ವಿದ್ಯುತ್ ನೀಡಲಾಗುತ್ತಿದೆ. ವಿದ್ಯುತ್ ಇದ್ದಾಗ ನೀರು ಬಿಡುವುದರಿಂದ ಕೆಲಸ ಕಾರ್ಯಗಳನ್ನು ಬದಿಗೊತ್ತಿ ಕಾಯಬೇಕಾಗುತ್ತದೆ ಎಂದು ಅವರು `ಪ್ರಜಾವಾಣಿ'ಗೆ ತಿಳಿಸಿದರು.

ತುಮಕೂರು ತಾಲ್ಲೂಕಿನ ಬೆಳ್ಳಾವಿ, ಹೊನ್ನುಡಿಕೆ, ಗೂಳಹರಿವೆ, ಗುಬ್ಬಿ ತಾಲ್ಲೂಕಿನ ಚೇಳೂರು ಗ್ರಾಮಗಳಲ್ಲಿ ಜನ ನೀರಿಗಾಗಿ ಪರದಾಡುತ್ತಿದ್ದಾರೆ. ಟ್ಯಾಂಕರ್ ಮೂಲಕ ನೀರು ಪೂರೈಸುತ್ತಿದ್ದರೂ ಅದು ಆನೆ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಎಂಬಂತಾಗಿದೆ.

ಗ್ರಾಮೀಣ ಪ್ರದೇಶದಲ್ಲಿ ಪ್ರತಿ ವ್ಯಕ್ತಿಗೆ ದಿನವೊಂದಕ್ಕೆ 55 ಲೀಟರ್ ನೀರಿನ ಅವಶ್ಯಕತೆ ಇದೆ. ಆದರೆ ಈಗ ಪೂರೈಸುತ್ತಿರುವುದು 30 ಲೀಟರ್ನಷ್ಟು ನೀರು. ತಾಲ್ಲೂಕಿನ ಮೈದಾಳ, ಊರ್ಡಿಗೆರೆ ಕೆರೆಗಳು ಬತ್ತಿ ಹೋಗಿವೆ. ಈ ಕೆರೆಗಳಿಗೆ ಹೇಮಾವತಿ ಜಲಾಶಯದಿಂದ ನೀರು ಬಿಡಲಾಗುತ್ತಿತ್ತು. ಈಗ ಹೇಮಾವತಿಯೂ ಬರಿದಾಗಿದೆ. ಇಲ್ಲಿನ ಕೆರೆಗಳಲ್ಲೂ ನೀರು ಇಲ್ಲವಾಗಿದೆ.

2 ಕೋಟಿ ಬಿಡುಗಡೆ
ತುಮಕೂರು ಹಾಗೂ ಮಧುಗಿರಿ ವಿಭಾಗದಲ್ಲಿ ತಲೆದೋರಿರುವ ನೀರಿನ ಸಮಸ್ಯೆ ಪರಿಹರಿಸಲು ಸರ್ಕಾರ ರೂ.2 ಕೋಟಿ ಅನುದಾನ ಬಿಡುಗಡೆ ಮಾಡಿದೆ.

ಕೊಳವೆ ಬಾವಿ, ಟ್ಯಾಂಕರ್ ಮೂಲಕ ನೀರು ಪೂರೈಸಲು ಈ ಹಣ ವಿನಿಯೋಗಿಸಲಾಗುತ್ತದೆ. ಸರ್ಕಾರ ಬಿಡುಗಡೆ ಮಾಡಿರುವ ಹಣವನ್ನು ಪ್ರತಿ ತಾಲ್ಲೂಕಿಗೆ ರೂ. 20 ಲಕ್ಷದಂತೆ ಹಂಚಿಕೆ ಮಾಡಲಾಗುತ್ತದೆ.

ಶಾಸಕರ ನೇತೃತ್ವದ ಕಾರ್ಯಪಡೆ ನೀರಿನ ಸಮಸ್ಯೆ ಅವಲೋಕಿಸಿ, ಜಿಲ್ಲಾ ಪಂಚಾಯಿತಿಗೆ ಶಿಫಾರಸು ಮಾಡಲಿದೆ. ಇದಾದ ಒಂದು ವಾರದೊಳಗೆ ನೀರು ಪೂರೈಸುವ ಕಾಮಗಾರಿ ಆರಂಭಿಸಲಾಗುವುದು ಎಂದು ಜಿಲ್ಲಾ ಪಂಚಾಯಿತಿ ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.