ಶಿವಮೊಗ್ಗ: ಮಲೆನಾಡಿನ ನಿವಾಸಿಗಳು ಹಾಗೂ ರೈತರಿಗೆ ಬದಲೀ ಇಂಧನ ಮೂಲಗಳನ್ನು ಒದಗಿಸಲು ವಿಶೇಷ ಪ್ಯಾಕೇಜ್ ಘೋಷಿಸುವಂತೆ ಸರ್ಕಾರವನ್ನು ಒತ್ತಾಯಿಸಲಾಗುವುದು ಎಂದು ಪಶ್ಚಿಮ ಘಟ್ಟ ಕಾರ್ಯಪಡೆ ಅಧ್ಯಕ್ಷ ಅನಂತ ಹೆಗಡೆ ಆಶೀಸರ ತಿಳಿಸಿದರು.

ನಗರದ ಎಪಿಎಂಸಿ ಆವರಣದಲ್ಲಿ ಬುಧವಾರ ಮಲೆನಾಡು ಅಡಿಕೆ ಮಾರಾಟದ ಸಹಕಾರ ಸಂಘ, ಪಶ್ಚಿಮಘಟ್ಟ ಕಾರ್ಯಪಡೆ ಮತ್ತು ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತ ಸಂಯುಕ್ತವಾಗಿ ಮ್ಯೋಮ್ಕೋಸ್ ಸದಸ್ಯರು ಹಾಗೂ ಬೆಳೆಗಾರರಿಗಾಗಿ ಹಮ್ಮಿಕೊಂಡಿದ್ದ ಸೌರಶಕ್ತಿ ವಿದ್ಯುತ್ ಮತ್ತು ಪರಿಸರ ಸ್ನೇಹಿ ಇಂಧನ ಮೂಲಗಳ ಕುರಿತಾದ ಜಾಗೃತಿ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.

ಸರ್ಕಾರ ಹಲವು ವಿಚಾರಗಳಿಗೆ ಪ್ಯಾಕೇಜ್ ಘೋಷಿಸುವಂತೆ ಬದಲೀ ಇಂಧನ ಮೂಲಗಳಿಗೂ ಪ್ಯಾಕೇಜ್ ಘೋಷಿಸಬೇಕು. ಮಲೆನಾಡಿನ ರೈತರಿಗೆ ಆಲೆಮನೆ, ಅಡಿಕೆ ಬೇಯಿಸಲು, ಕೃಷಿ ಉತ್ಪನ್ನ ಒಣಗಿಸಲು, ಅಗತ್ಯ ಸೌಲಭ್ಯ ಬೇಕು. ಅದಕ್ಕಾಗಿ ಸಹಕಾರಿ ಸಂಸ್ಥೆಗಳ ಸಹಕಾರ ಪಡೆದು ಮಲೆನಾಡಿನ ಎಲ್ಲ ಪ್ರದೇಶಗಳಲ್ಲಿ ಅಸ್ತ್ರ ಒಲೆ, ಬಯೋ ಗ್ಯಾಸ್, ಸೋಲಾರ್, ಗಾಳಿ ಯಂತ್ರದಿಂದ ಕೂಡಿದ ಮಾದರಿ ಗ್ರಾಮ ರೂಪಿಸಬೇಕು ಎಂದು ಆಶಿಸಿದರು.

ರಾಜ್ಯದ 36 ಗ್ರಾಮಗಳಲ್ಲಿ ಬದಲೀ ಇಂಧನ ಯೋಜನೆ ಜಾರಿಗೊಳಿಸಲಾಗಿದೆ. ಈ ನಿಟ್ಟಿನಲ್ಲಿ ಪಶ್ಚಿಮಘಟ್ಟದ ವ್ಯಾಪ್ತಿಗೆ ಒಳಪಡುವ ಆಗುಂಬೆ, ಕೊಲ್ಲೂರು ಮತ್ತು ದಾಂಡೇಲಿಯ ಗ್ರಾಮೀಣ ಭಾಗಗಳಲ್ಲಿ ಸೋಲಾರ್ದೀಪ ಅಳವಡಿಸುವ ಪ್ರಯತ್ನ ಯಶಸ್ವಿಯಾಗಿದೆ. ಪ್ರಸಕ್ತ ಸಾಲಿನಲ್ಲಿ 300 ಗ್ರಾಮಗಳಲ್ಲಿ ಸೋಲಾರ್, ಗೋಬರ್ಗ್ಯಾಸ್ ಮತ್ತು ಅಸ್ತ್ರಒಲೆ ಯೋಜನೆ ಅನುಷ್ಠಾನಗೊಳಿಸಲಾಗುವುದು ಎಂದು ವಿವರಿಸಿದರು.
ಕ್ರೆಡಿಲ್ ಸಂಸ್ಥೆ ಮುಖ್ಯ ಆಡಳಿತಾಧಿಕಾರಿ ಸಂಗಪ್ಪ ಉಪಾಸೆ ಮಾತನಾಡಿ, ಬದಲಿ ಇಂಧನಗಳ ಬಳಕೆ ಕುರಿತು ಜಾಗೃತಿ ಮೂಡಿಸುವ ಅವಶ್ಯಕತೆ ಇದೆ ಎಂದರು.

ಪಶ್ಚಿಮಘಟ್ಟ ಕಾರ್ಯಪಡೆ ಸದಸ್ಯರಾದ ಪ್ರೊ.ಬಿ.ಎಂ. ಕುಮಾರ ಸ್ವಾಮಿ, ಗಜೇಂದ್ರ ಗೊರಸುಕುಡಿಗೆ, ನಬಾರ್ಡ್ ಅಸಿಸ್ಟೆಂಟ್ ಜನರಲ್ ಮ್ಯೋನೇಜರ್ ರಾಘವೇಂದ್ರ, ಜೆಎನ್ಎನ್ಸಿಇ ಪ್ರಾಂಶುಪಾಲ ಡಾ.ಶ್ರೀನಿವಾಸರಾವ್ ಕುಂಠೆ, ಪ್ರಾಧ್ಯಾಪಕ ಡಾ.ಎಲ್.ಕೆ. ಶ್ರೀಪತಿ, ಆನಂದನಾರಾಯಣ, ಪ್ರಸನ್ನಕುಮಾರ್ ಸ್ವಾಮಿ ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಸೌರಶಕ್ತಿಯಿಂದ ಬಳಸಬಹುದಾದ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ಮಳಿಗೆಯನ್ನು ಮ್ಯೋಮ್ಕೋಸ್ ಉಪಾಧ್ಯಕ್ಷ ಕೆ. ನರಸಿಂಹನಾಯ್ಕ ಉದ್ಘಾಟಿಸಿದರು.

ಎಚ್.ಪಿ. ಪುಪ್ಪಲತಾ ಮತ್ತು ಮೀರಾ ಎಸ್. ರಾವ್ ಪ್ರಾರ್ಥಿಸಿದರು. ಬಿ.ಎಚ್. ರಾಘವೇಂದ್ರ ಸ್ವಾಗತಿಸಿದರು. ವೈ.ಎಸ್. ಸುಬ್ರಮಣ್ಯ ವಂದಿಸಿದರು. ಎಚ್.ಆರ್. ಅಶೋಕ್ ನಾಯಕ ಕಾರ್ಯಕ್ರಮನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.