ಮಂಗಳವಾರ, ಜೂನ್ 22, 2021
29 °C

ಬದುಕಿನಲ್ಲಿ ಉತ್ಸಾಹ ಕಳೆದುಕೊಳ್ಳದಿರುಲು ಸಲಹೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಕ್ಕಿಆಲೂರ: ಎಂತಹ ಸಂದಿಗ್ಧ ಸಂದರ್ಭದಲ್ಲಿಯೂ ಕೂಡ ಬಾಳಿನ ಉತ್ಸಾಹ ಕಳೆದುಕೊಳ್ಳದೇ ಜೀವನ ವನ್ನು ಸಾಫಲ್ಯಗೊಳಿಸುವ ನಿಟ್ಟಿನಲ್ಲಿ ಎಲ್ಲರೂ ಕಾರ್ಯೋನ್ಮುಖರಾಗಬೇಕಿದೆ. ಸಮಾಜಪರ ಕಳಕಳಿಯನ್ನು ಮೈಗೂಡಿಸಿ ಕೊಂಡು ಧರ್ಮ ಕಾರ್ಯಗಳಲ್ಲಿ ತೊಡಗಿಸಿಕೊಳ್ಳು ವಂತಾದರೆ ಬದುಕಿಗೆ ಹೊಸ ಅರ್ಥ ದೊರೆಯಲಿದೆ ಎಂದು ಉಜ್ಜಯಿನಿಯ ಶಿದ್ಧಲಿಂಗ ರಾಜದೇಶಿಕೇಂದ್ರ ಶ್ರೀಗಳು ನುಡಿದರು.ಇಲ್ಲಿಗೆ ಸಮೀಪವಿರುವ  ಇನಾಮಲಕ ಮಾಪುರ ಗ್ರಾಮದಲ್ಲಿ ರೇಣುಕಾ ಚಾರ್ಯ ಜಯಂತಿ, ಶಿದ್ಧೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ ಹಾಗೂ ಲಕ್ಷ್ಮೀ ದೇವಿ ಪ್ರಾಣ ಪ್ರತಿಷ್ಠಾಪನಾ ಸಮಾರಂಭದ ನಿಮಿತ್ಯ ಏರ್ಪಡಿಸ ಲಾಗಿದ್ದ ಮನುಕುಲ ಸದ್ಭಾವನಾ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಪರಸ್ಪರ ಸಾಮರಸ್ಯದ ಬದುಕು ಕಟ್ಟಿಕೊಂಡಾಗ ಸೌಹಾರ್ದಮಯ ವಾತಾವರಣ ನೆಲೆಯೂರಲಿದೆ  ಎಂದರು.ಮುಖ್ಯ ಅತಿಥಿಯಾಗಿದ್ದ ಜಲ ಸಂಪನ್ಮೂಲ ಸಚಿವ ಬಸವರಾಜ ಬೊಮ್ಮಾಯಿ ಮಾತನಾಡಿ, ನಮ್ಮ ನಡೆ, ನುಡಿ, ಹಾವ, ಭಾವ ಇನ್ನೊಬ್ಬರಿಗೆ ತೊಂದರೆಯನ್ನುಂಟು ಮಾಡಬಾರದು. ನಾವು ಬದುಕುವ ಜೊತೆಗೆ ನೆರೆಹೊರೆ ಯವರನ್ನು ಸಹ ಬದುಕಲು ಬಿಡಬೇಕಿದೆ ಎಂದರು.ಕಾರ್ಯಕ್ರಮ ಉದ್ಘಾಟಿಸಿದ ನಿವೃತ್ತ ನೋಂದಣಿ ಮಹಾಪರಿವೀಕ್ಷಕ ಬಿ.ಶಿವಪ್ಪ ಮಾತನಾಡಿ, ಮೊಬೈಲ್, ದೂರದರ್ಶನ, ಸಿನಿಮಾ ನಮ್ಮ ಸಂಸ್ಕೃತಿಯನ್ನು ನಾಶಪಡಿಸುತ್ತಿವೆ. ಯುವ ಪೀಳಿಗೆಗೆ ಮನೆಗಳಲ್ಲಿ ಹಾಗೂ ಶಾಲೆಗಳಲ್ಲಿ ಅಗತ್ಯ ಮಾರ್ಗದರ್ಶನ ದೊರೆಯದಂತಾಗಿರುವುದು ಎಲ್ಲ ಸಮಸ್ಯೆಗಳಿಗೆ ಮೂಲ ಕಾರಣವಾಗಿದೆ ಎಂದು ಹೇಳಿದರು.    ಕಾರ್ಯಕ್ರಮದ ನೇತೃತ್ವ ವಹಿಸಿದ್ದ ಇನಾಮಲಕಮಾಪುರ ಹಿರೇ ಮಠದ ಶಿವಯೋಗಿ ದೇವರು ಮಾತ ನಾಡಿ, ಪಾಶ್ಚಿಮಾತ್ಯ ಸಂಸ್ಕೃತಿ ನಮ್ಮ ಬದುಕಿನ ಮೌಲ್ಯಗಳನ್ನೇ ಹೊಸಕಿ ಹಾಕುತ್ತಿದೆ. ಮನೆ, ಮನಗಳಲ್ಲಿ ವಿದೇಶ ಸಂಸ್ಕೃತಿ ನೆಲೆಯೂರುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಆಧುನಿಕತೆಯ ಪ್ರಭಾವಕ್ಕೊಳಗಾಗಿ ಕಳೆದು ಹೋಗುತ್ತಿರುವ ಭಾರತೀಯ ಸಂಸ್ಕೃತಿಗೆ ಯುವ ಪೀಳಿಗೆ ಹೊಸ ಚೈತನ್ಯ ನೀಡುವ ಅಗತ್ಯವಿದೆ ಎಂದು ನುಡಿದರು.ಶಾಂತಪುರ ಸಂಸ್ಥಾನಮಠದ ಶಿವಾನಂದ ಶ್ರೀಗಳು ಅಧ್ಯಕ್ಷತೆ ವಹಿಸಿದ್ದರು. ನೆಗಳೂರಿನ ಗುರುಲಿಂಗ ಶ್ರೀಗಳು, ಹೇರೂರಿನ ಅಭಿನವ ನಂಜುಂಡೇಶ್ವರ ಶ್ರೀಗಳು, ಸಂಗೊಳ್ಳಿಯ ಗುರುಲಿಂಗ ಶಿವಾಚಾರ್ಯ ಶ್ರೀಗಳು, ಲೋಕೋಪಯೋಗಿ ಸಚಿವ ಸಿ.ಎಂ.ಉದಾಸಿ, ರಾಜ್ಯ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಅಧ್ಯಕ್ಷ ಭೋಜರಾಜ್ ಕರೂದಿ, ಜಿಲ್ಲಾ ಬಿ.ಜೆ.ಪಿ. ಅಧ್ಯಕ್ಷ ಸೋಮಣ್ಣ ಬೇವಿನಮರದ, ರಾಜ್ಯ ಅಂಧರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಎನ್.ಎಂ.ಪಾಟೀಲ, ಹಾನಗಲ್ಲ ಪುರಸಭೆ ಮಾಜಿ ಅಧ್ಯಕ್ಷ ಕಲ್ಯಾಣಕುಮಾರ ಶೆಟ್ಟರ, ಕೆ.ಪಿ.ಸಿ.ಸಿ. ಸದಸ್ಯ ಸತೀಶ ದೇಶಪಾಂಡೆ, ಚಿಕ್ಕಬಾಸೂರ ಗ್ರಾ.ಪಂ. ಅಧ್ಯಕ್ಷ ಜಗದೀಶ ಕಣಗಲಬಾವಿ, ಗಣ್ಯರಾದ ಉಮೇಶ ಗೌಳಿ, ವನಜಾಕ್ಷಿ ಪಾಟೀಲ, ಶಿವಕುಮಾರ ಮಠದ, ಸತೀಶ ತಳವಾರ, ಮಲ್ಲನಗೌಡ ಪಾಟೀಲ, ರಾಜಶೇಖರ ಸಾಲಿಮಠ, ಎ.ಎಂ. ಪಠಾಣ, ವೀರಭದ್ರಪ್ಪ ಗೊಡಚಿ, ಜಿ.ಎಸ್,ಘಂಟೇರ, ಶಿವಲಿಂಗಪ್ಪ ತಲ್ಲೂರ, ಗುಡ್ಡಪ್ಪ ಬಾರ್ಕಿ, ಲಕ್ಷ್ಮಣ ಮರಿಗೌಡ್ರ, ಶಾಂತಪ್ಪ ಕೋಟಿಹಳ್ಳಿ, ರಾಮಣ್ಣ ಶೇಷಗಿರಿ ಸೇರಿದಂತೆ ಇನ್ನೂ ಹಲವರು  ಭಾಗವಹಿಸಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.