ಶಿರಾ: ತಾಲ್ಲೂಕಿನ ಮದಲೂರು ಕೆರೆಗೆ ನೀರು ಹರಿಸುವ ಕಾಮಗಾರಿಯ ಶಂಕುಸ್ಥಾಪನೆಯ ಐತಿಹಾಸಿಕ ಸಮಾರಂಭಕ್ಕೆ ಅಪಾರ ಜನಸ್ತೋಮ ಸೇರುವ ಮೂಲಕ ತಮ್ಮ ಬಹುದಿನಗಳ ಕನಸು ಕೈಗೂಡುರುತ್ತಿರುವ ಬಗ್ಗೆ ವ್ಯಾಪಕ ಮೆಚ್ಚುಗೆ ವ್ಯಕ್ತಪಡಿಸಿದರು.

ಬೆಳಿಗ್ಗೆಯೇ ಹಳ್ಳಿಗಳಿಂದ ಜನ ತಂಡೋಪತಂಡವಾಗಿ ಆಗಮಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಕೆಲ ಹಳ್ಳಿಗಳಿಂದ ಬಸ್, ಟ್ರಾಕ್ಟರ್ ಸೇರಿದಂತೆ ವಿವಿಧ ವಾಹನಗಳಲ್ಲಿ ಆಗಮಿಸಿದರು. ಯುವಕರು ಬೈಕ್ಗಳಿಗೆ ಕಾಂಗ್ರೆಸ್ ಬಾವುಟ ಕಟ್ಟಿಕೊಂಡು ಅತ್ತಿಂದಿತ್ತ ಸವಾರಿ ಮಾಡುತ್ತಿದ್ದ ರೀತಿ ಯುವಕರ ಉತ್ಸಾಹದ ಪ್ರತಿಬಿಂಬವಾಗಿತ್ತು.

ಸ್ಥಳೀಯ ಮುಖಂಡರ ನೇತೃತ್ವದ ಗುಂಪುಗಳು ವಾದ್ಯಗಳ ಮೆರವಣಿಗೆಯೊಂದಿಗೆ ವಿವೇಕಾನಂದ ಕ್ರೀಡಾಂಗಣಕ್ಕೆ ಆಗಮಿಸಿದರೆ, ಮಹಿಳೆಯರು ಪೂರ್ಣ ಕುಂಬದೊಂದಿಗೆ ಗಣ್ಯರನ್ನು ಸ್ವಾಗತಿಸಿದರು. ಕಾರ್ಯಕ್ರಮ ವಿಳಂಬವಾದರೂ ಅಪಾರ ಜನಸ್ತೋಮ ಕಿಂಚಿತ್ತೂ ಗಲಾಟೆಗೂ ಅವಕಾಶವಿಲ್ಲದಂತೆ ತಾಳ್ಮೆಯಿಂದ ಕುಳಿತಿದ್ದು, ಜನತೆಯ ನೀರಿನ ಕನಸಿನ ಪ್ರತೀಕವಾಗಿತ್ತು.

ಮುಖ್ಯಮಂತ್ರಿ ಡಿ.ವಿ.ಸದಾ ನಂದಗೌಡ ಆಗಮಿಸದ ಬಗ್ಗೆ ಬಹಳ ಜನ ಬೇಸರ ವ್ಯಕ್ತಪಡಿಸಿದರು. ಅಭಿವೃದ್ಧಿ ವಿಷಯದಲ್ಲೂ ಮುಖಂಡರು ಪಕ್ಷ ರಾಜಕಾರಣ ಮಾಡುವುದು ಎಷ್ಟರ ಮಟ್ಟಿಗೆ ಸರಿ ಎಂಬ ಬಗ್ಗೆ ಜನಸಾಮಾನ್ಯರೂ ತಮ್ಮಲ್ಲೇ ಚರ್ಚಿಸುತ್ತಿದ್ದರು.

ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಅಧ್ಯಕ್ಷೆ ಲಲಿತಮ್ಮ ಸೇರಿದಂತೆ ಯಾವೊಬ್ಬ ಜೆಡಿಎಸ್ ಜನಪ್ರತಿನಿಧಿಯೂ ಸಮಾರಂಭದ ಕಡೆಗೆ ಸುಳಿಯದೇ ಪಕ್ಷ ರಾಜಕಾರಣಕ್ಕೆ ನಿಷ್ಠರಾಗಿ ಉಳಿದರು. ಕಾಂಗ್ರೆಸ್ ಪಕ್ಷದವರೇ ಆಗಿರುವ ನಗರಸಭೆ ಅಧ್ಯಕ್ಷ ಟಿ.ರಘು ಗೈರು ಹಾಜರಿ ಪಕ್ಷದಲ್ಲಿ ಭಿನ್ನಮತ ಇರುವ ಸುಳಿವು ನೀಡಿತು. ಕಾಂಗ್ರೆಸ್ ಕಾರ್ಯಕರ್ತರ ಉತ್ಸಾಹವಂತೂ ಮಿತಿ ಮೀರಿ ಶಾಸಕ ಟಿ.ಬಿ.ಜಯಚಂದ್ರ ಅವರನ್ನು ತಮ್ಮ ಹೆಗಲ ಮೇಲೆ ಹೊತ್ತು ಮೆರವಣಿಗೆ ನಡೆಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.