ಬರಾಕ್ ಒಬಾಮ ಜನಪ್ರಿಯತೆ

ಶುಕ್ರವಾರ, ಮೇ 24, 2019
30 °C

ಬರಾಕ್ ಒಬಾಮ ಜನಪ್ರಿಯತೆ

Published:
Updated:

ವಾಷಿಂಗ್ಟನ್, (ಎಎಫ್‌ಪಿ): ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮ ಅವರು ತಾಯ್ನಾಡಿನಲ್ಲಿ ತಮ್ಮ ಜನಪ್ರಿಯತೆಯನ್ನು ಕಳೆದುಕೊಂಡಿದ್ದರೂ, ಐರೋಪ್ಯ ರಾಷ್ಟ್ರಗಳಲ್ಲಿ ಅತ್ಯಂತ ಪ್ರಭಾವಿ ವ್ಯಕ್ತಿಯಾಗಿ ಹೊರಹೊಮ್ಮಿದ್ದಾರೆ.ಅಂತರರಾಷ್ಟ್ರೀಯ ಸಮಸ್ಯೆಗಳನ್ನು ನಿಭಾಯಿಸುವಲ್ಲಿ ಒಬಾಮ ಅವರ ಸಾಮರ್ಥ್ಯವನ್ನು ಯೂರೋಪ್‌ನ 12 ರಾಷ್ಟ್ರಗಳ ಶೇ 75ರಷ್ಟು ಜನ ಮೆಚ್ಚಿಕೊಂಡಿದ್ದಾರೆ ಎಂದು ಸಮೀಕ್ಷೆಯೊಂದು ಹೇಳಿದೆ. ಮಾಜಿ ಅಧ್ಯಕ್ಷ ಜಾರ್ಜ್ ಬುಷ್ ಅವರಿಗಿಂತಲೂ ಒಬಾಮ ಹೆಚ್ಚು ಜನಪ್ರಿಯರಾಗ್ದ್ದಿದಾರೆ.  2008ರಲ್ಲಿ ಬುಷ್ ಜನಪ್ರಿಯತೆಯ ಪ್ರಮಾಣ ಕೇವಲ ಶೇ 20ರಷ್ಟು ಮಾತ್ರವಾಗಿತ್ತು ಎಂದು ಜರ್ಮನ್ ಮಾರ್ಷಲ್ ಫಂಡ್  ಸಮೀಕ್ಷೆಯಲ್ಲಿ ತಿಳಿದುಬಂದಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry