ಭಾನುವಾರ, ಜೂನ್ 13, 2021
22 °C

ಬರಿದಾಗುತ್ತಿರುವ ಅರೆಸಾಮಿ ಕೆರೆ:ಸಚಿವರ ಉತ್ತರಕ್ಕೆ ಪರಿಸರಪ್ರಿಯರ ಅಸಮಾಧಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬರಿದಾಗುತ್ತಿರುವ ಅರೆಸಾಮಿ ಕೆರೆ:ಸಚಿವರ ಉತ್ತರಕ್ಕೆ ಪರಿಸರಪ್ರಿಯರ ಅಸಮಾಧಾನ

ಹೊನ್ನಾವರ: ಪುರಾಣ ಪ್ರಸಿದ್ಧ ರಾಮ ತೀರ್ಥ ಬಳಿಯಿರುವ ಐತಿಹಾಸಿಕ ಅರೆ ಸಾಮಿ ಕೆರೆಯ ಅಭಿವೃದ್ಧಿಯ ಬೇಡಿಕೆಗೆ  ಜಿಲ್ಲಾ ಉಸ್ತುವಾರಿ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಪ್ರತಿಕ್ರಿಯೆ ನಿರಾಶಾದಾಯಕವಾಗಿದ್ದು ಸಚಿವರ ಈ ಧೋರಣೆಗೆ ಈ ಭಾಗದ ಪರಿಸರಪ್ರಿಯರು ತೀವ್ರ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.“ಅರೆಸಾಮಿ ಕೆರೆಗೆ ಸರ್ಕಾರ ಲಕ್ಷಾಂತರ ರೂ ಬಿಡುಗಡೆ ಮಾಡಿ ವರ್ಷ ಕಳೆದರೂ ಈ ಕಾಮಗಾರಿಯ ಟೆಂಡರ್ ನೀಡಿಲ್ಲ. ಸ್ಥಳೀಯ ಪಂಚಾಯಿತಿ ಕೆರೆಯ ಅಭಿವೃದ್ಧಿಗಾಗಿ ಶಾಶ್ವತ ಕಾಮಗಾರಿ ಕೈಗೊಳ್ಳುತ್ತಿಲ್ಲ. ಸ್ಥಳೀಯ ಗ್ರಾಮ ಅರಣ್ಯ ಸಮಿತಿ ಹಾಗೂ ಅರಣ್ಯ ಇಲಾಖೆ ಅಭಿವೃದ್ಧಿಗಾಗಿ ಕೆರೆಯನ್ನು ತಮಗೆ ಹಸ್ತಾಂತರಿಸಬೇಕೆಂಬ ಮನವಿ ನೆನೆ ಗುದಿಗೆ ಬಿದ್ದಿದೆ.ಪರಿಸರ ಸಮ ತೋಲನ ದೃಷ್ಟಿಯಿಂದ ಮಹತ್ವದ್ದಾದ 39 ಎಕರೆ ವಿಸ್ತೀರ್ಣವುಳ್ಳ ಕೆರೆಯ ಅಭಿವೃದ್ಧಿಗೆ ಸಚಿವರು ಮಧ್ಯಪ್ರವೇಶಿಸಿ ಸಮಸ್ಯೆ ಬಗೆಹರಿಸಬೇಕು ಎಂದು ಭಾನು ವಾರ ಇಲ್ಲಿನ ಪ್ರವಾಸಿ ಮಂದಿರದಲ್ಲಿ ಸಚಿವರನ್ನು ಭೇಟಿ ಮಾಡಿದ ಕೆಲವು ನಾಗರಿಕರು  ಒತ್ತಾಯಿಸಿದರು.“ಅರೆಸಾಮಿ ಕೆರೆ ಕಂದಾಯ ಇಲಾಖೆಗೆ ಸೇರಿರುವುದರಿಂದ ಇದನ್ನು ಹಸ್ತಾಂತರಿಸಲು ಸಾಧ್ಯವಿಲ್ಲವೆಂಬ     ತಹಶೀಲ್ದಾರರ ಹೇಳಿಕೆಯನ್ನು ಸರ್ಕಾರದ ನೀತಿ ನಿಯಮಾವಳಿಗಳನ್ನು ರೂಪಿಸುವ ಸ್ಥಾನದಲ್ಲಿರುವ ಸಚಿವರು ಪುರಸ್ಕರಿಸಿದ್ದು ಸರಿಯಲ್ಲ.        ಕಂದಾಯ ಇಲಾಖೆಯಂತೆ ಅರಣ್ಯ ಇಲಾಖೆಯೂ ಸರ್ಕಾರದ ಇಲಾಖೆಯೇ ಆಗಿದ್ದು ಸಚಿವರು ಕೆರೆಯ ಅಭಿವೃದ್ಧಿ ದೃಷ್ಟಿಯಲ್ಲಿಟ್ಟುಕೊಂಡು ಅಗತ್ಯ ನಿರ್ಧಾರ ತೆಗೆದುಕೊಳ್ಳಬೇಕು  ಎಂದು ಅವರು ಆಗ್ರಹಿಸಿದ್ದು ಕೆರೆಯ ಅಭಿ ವೃದ್ಧಿಗಾಗಿ ಸಮಾನ ಮನಸ್ಕರ ಹೋರಾಟ ಮುಂದುವರಿಯುವುದಾಗಿ ತಿಳಿಸಿದ್ದಾರೆ.ಕನ್ನಡ ಕಸ್ತೂರಿ ಪರೀಕ್ಷೆ: ಉತ್ತಮ ಸಾಧನೆಕಾರವಾರ: ದಾವಣಗೆರೆಯಲ್ಲಿ ನಡೆದ ಪ್ರಸಕ್ತ ಸಾಲಿನ ಕಸ್ತೂರಿ ಕನ್ನಡ ಪ್ರತಿಭಾ ಪರೀಕ್ಷೆಯಲ್ಲಿ ಇಲ್ಲಿಯ ಹಿಂದು ಪ್ರೌಢ ಶಾಲೆ ವಿದ್ಯಾರ್ಥಿಗಳು ರಾಜ್ಯ ಮಟ್ಟ ದಲ್ಲಿ 8, ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದಲ್ಲಿ 9 ಸೇರಿದಂತೆ ಒಟ್ಟು 26 ರ‌್ಯಾಂಕ್ ಪಡೆದು  ಸಾಧನೆ ಮಾಡಿದ್ದಾರೆ.ರಾಜ್ಯಮಟ್ಟ: ಶಾಲೆಯ ವಿದ್ಯಾರ್ಥಿ ಗಳಾಗಿರುವ ಶ್ರೀಕಾಂತ ಉತ್ತಂಗಿ ಮೂರು, ರಂಜಿತ ಅರಗೇಕರ ಮತ್ತು ಆಕಾಶ ನಾಯಕ-4, ಸಂದೇಶ ದುರ್ಗೇಕರ, ಯೋಗಿತಾ ದೇವಸ್ಕರ ದಾಕ್ಷಾಯಿಣಿ ಎಚ್ ನಾಯಕ, ಅಂಕಿತಾ ನಾಯಕ, ನೂತನಾ ಎಮ್ ನಾಯಕ-5 ರ‌್ಯಾಂಕ್ ಪಡೆದಿದ್ದಾರೆ.ಜಿಲ್ಲಾ ಮಟ್ಟ: ರೋಶನ ನಾಯಕ, ಮಯೂರ ಮಹೇಕರ, ವರ್ಷ ಕೋಳಿ-1 ವಿತೇಶ ನಾಯಕ, . ಸೌಮ್ಯ ಹುಲಸ್ವಾರ, ನಾಗವೇಣಿ ಅಣ್ವೇಕರ-2, ಸಂಜನಾ ಹರಿಕಂತ್ರ, ಅನಿಲಕುಮಾರ ಇಟಗಿ, ಶ್ರೇಯಾ ನಾಯ್ಕ-3 ನೇ ರ‌್ಯಾಂಕ್ ಪಡೆದಿದ್ದಾರೆ.ತಾಲ್ಲೂಕು ಮಟ್ಟ: ಶಾಮಿನ್  ಖಾನ್, ವಿನೂತ ಪ್ರಭು, ಶುಭೋದಯ ಅಜಗಾಂವಕರ-1, ಸುಜಯ ಮಹಾಲೆ, ಲಿಖಿತಾ ಅಣ್ವೇಕರ-2, ಅನುಷಾ ಬಿಣಗೇಕರ, ಅನುಶ್ರೀ ಶೇಟ್ಟಿ, ಮಗಜ ನಾಯ್ಕ, ಲಕ್ಷ್ಮೀ ತಳೇವಾಡಾ-3 ರ‌್ಯಾಂಕ್ ಪಡೆದಿದ್ದಾರೆ.ವಿದ್ಯಾರ್ಥಿಗಳ ಸಾಧನೆಯನ್ನು ಶಾಲೆಯ ಮುಖ್ಯಾಧ್ಯಾಪಕಿ ಗಿರಿಜಾ ಬಂಟ, ಎಚ್.ಆರ್.ಆಚಾರ್ಯ, ಮಂಗಲಾ ಶೇಜವಾಡರ್, ಸಂಗೀತಾ ಭಟ್, ಶೋಭಾ ನಾಯ್ಕ ಅಭಿನಂದಿ ಸಿದ್ದಾರೆ. ವಿದ್ಯಾರ್ಥಿಗಳ ಸಾಧನೆಗೆ ಕಾರಣರಾಗಿರುವ `ಸಂಘಟನಾ ಶಿಕ್ಷಕ ಪ್ರಮಾಣಪತ್ರ ಪಡೆದಿರುವ ಬಿ. ಎಚ್. ಕಂದಾರಿ ಅವರನ್ನೂ ಶಿಕ್ಷಕರು ಅಭಿನಂದಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.