ಬರ್ನೆಸ್‌ಗೆ ಬುಕರ್

7

ಬರ್ನೆಸ್‌ಗೆ ಬುಕರ್

Published:
Updated:
ಬರ್ನೆಸ್‌ಗೆ ಬುಕರ್

ಲಂಡನ್ (ಪಿಟಿಐ): ಜೂಲಿಯನ್ ಬರ್ನೆಸ್ ಅವರ `ದಿ ಸೆನ್ಸ್ ಆಫ್ ಆ್ಯನ್ ಎಂಡಿಂಗ್~ ಕಾದಂಬರಿ ಈ ಬಾರಿಯ ಪ್ರತಿಷ್ಠಿತ ಮ್ಯಾನ್ ಬುಕರ್ ಪ್ರಶಸ್ತಿಗೆ ಆಯ್ಕೆಯಾಗಿದೆ.ಲಂಡನ್‌ನ ಬರ್ನೆಸ್ (65) ಅವರ ಮೂರು ಕೃತಿಗಳು ಹಿಂದೆ ಬುಕರ್ ಪ್ರಶಸ್ತಿಗೆ ಶಿಫಾರಸುಗೊಂಡಿದ್ದರೂ ಪ್ರಶಸ್ತಿ ಪಡೆದಿರಲಿಲ್ಲ. ಆದರೆ ನಾಲ್ಕನೇ ಬಾರಿಗೆ ಬರ್ನೆಸ್ ಪ್ರಶಸ್ತಿ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಪ್ರಶಸ್ತಿ ಐವತ್ತು ಸಾವಿರ ಪೌಂಡ್ ಬಹುಮಾನದ ಮೊತ್ತವನ್ನು ಒಳಗೊಂಡಿದೆ.ಬಾಲ್ಯದ ಗೆಳೆತನ ಮತ್ತು ಕೆಲವು ಕಹಿನೆನಪುಗಳ ಕಥಾವಸ್ತುವನ್ನು ಹೊಂದಿರುವ ಈ ಕೃತಿ ಸರಾಗವಾಗಿ ಓದಿಸಿಕೊಂಡು ಹೋಗುವಂತಿದೆ. ಜತೆಗೆ ಜನಪ್ರಿಯತೆಯನ್ನೂ ಪಡೆದುಕೊಂಡಿದೆ, ನಿಜ. ಆದರೆ ಮೌಲ್ಯಯುತ ಸಾಹಿತ್ಯ ಇದಲ್ಲ ಎಂಬ ಅಪಸ್ವರಗಳು ಕೇಳಿ ಬಂದಿವೆ.ಈ ಅಂಶಗಳನ್ನೇ ಮುಂದಿಟ್ಟುಕೊಂಡು ವಿಮರ್ಶಕರು ಈಗಾಗಲೇ ಆಯ್ಕೆಗಾರರನ್ನು ಟೀಕಿಸಿದ್ದಾರೆ. ಈ ಕೃತಿಯನ್ನು ಪ್ರಶಸ್ತಿಗೆ ಆಯ್ಕೆ ಮಾಡಿರುವ ತೀರ್ಪುಗಾರರ ಮೇಲೆ ವಿವಿಧ ಮಾದ್ಯಮಗಳು ಟೀಕಾಪ್ರವಾಹವನ್ನೇ ಹರಿಸಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry