ಭಾನುವಾರ, ಮೇ 16, 2021
26 °C

ಬರ್ರ್ಲ್ಲೆಲಾ ಗದಗ ಉತ್ಸವ ನೋಡಾಕ್..

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬರ್ರ್ಲ್ಲೆಲಾ ಗದಗ ಉತ್ಸವ ನೋಡಾಕ್..

ಗದಗ: ಹೊಸ ಮನೆ ಕಟ್ಟಿಕೊ ಳ್ಳುತ್ತಿರುವರಿಗೆ, ಮನೆಯ ಅಂದ ಹೆಚ್ಚಿಸುವ ಗೃಹ ಅಲಂಕಾರಿಕ ವಸ್ತುಗಳು, ಫ್ಯಾಶನ್ ಪ್ರಿಯರಿಗೆ ವಿವಿಧ ತರಹದ ವಸ್ತುಗಳನ್ನು ಒಂದೇ ಕಡೇ ಖರೀದಿಸುವಂತಹ ಸುಸಂಧಿ.

ಇದಕ್ಕೆಲ್ಲ ವೇದಿಕೆ ಕಲ್ಪಿಸಿರುವುದು ನಗರದ ತೋಂಟದಾರ್ಯ ಕಲ್ಯಾಣ ಕೇಂದ್ರದಲ್ಲಿ ಕಳೆದ ಮೂರು ದಿನಗಳಿಂದ ನಡೆಯುತ್ತಿರುವ ಗದಗ ಉತ್ಸವ. ರಾಜ್ಯದ ನಾನಾ ಭಾಗಗಳಿಂದ ಆಗಮಿಸಿ ರುವ ಕುಶಲಕರ್ಮಿಗಳ, ವಾಣಿಜ್ಯೋ ದ್ಯಮಿಗಳ ವಸ್ತುಗಳ ಪ್ರದರ್ಶನ ಹಾಗೂ ಮಾರಾಟ ಮೇಳ ಭರದಿಂದ ನಡೆದಿದೆ.ಗದಗ-ಬೆಟಗೇರಿ ಅವಳಿ ನಗರದ ಜನರನ್ನು ಆಕರ್ಷಿಸುತ್ತಿರುವ ಗದಗ ಉತ್ಸವದಲ್ಲಿ ವಿವಿಧ ಕಲಾಕೃತಿಗಳನ್ನು ಒಳಗೊಂಡ ಮನೆಯ ಬಾಗಿಲು, ಕಿಟಕಿ ಹಾಗೂ ಪೀಠೋಪಕರಣಗಳು ಲಭ್ಯವಿವೆ.ಮನೆಯ ಸೌಂದರ್ಯ ಪರಿಕರಗಳು, ಸೋಪಾ ಸೆಟ್, ಡೈನಿಂಗ್ ಟೇಬಲ್, ಕುರ್ಚಿ, ಸೋಲಾರ್ ಲೈಟ್ಸ್, ವಾಟರ್ ಹೀಟರ್ಸ್‌, ಖಾದಿ ಉತ್ಪನ್ನಗಳು, ಪುಸ್ತಕಗಳ ಮಾರಾಟ, ಸುಗಂಧ ದ್ರವ್ಯಗಳ ಮಳಿಗೆ, ಅಡುಗೆ ಮಾಡಲು ಬಳಸುವ ಕರೆಂಟ್ ಸ್ಟೋವ್, ಚಪಾತಿ ಮಾಡುವ ಮಶಿನ್, ತರಕಾರಿ ಹೆಚ್ಚುವ ಆಧುನಿಕ ಈಳಿಗೆ ಮಣೆ, ವಿವಿಧ ಸಿಹಿ ಖಾದ್ಯಗಳ ಮಾರಾಟ ಮಳಿಗೆ, ಕರದಂಟು, ಪಾಪ್‌ಕಾರ್ನ್, ಸೆಂಡಿಗೆ, ಹಪ್ಪಳ, ವಿವಿಧ ತರಹದ ಚಟ್ನಿ, ಶುದ್ಧ ಕುಡಿಯುವ ನೀರಿನ ಯಂತ್ರ, ಪಿಯುಸಿ ಪೈಪುಗಳ ಪ್ರದರ್ಶನ ಹಾಗೂ ಮಾರಾಟ ಇದೆ.

ಇದಲ್ಲದೆ, ಆಯುರ್ವೇದ ಔಷಧಿಗಳು, ಸೌಂದರ್ಯವರ್ಧಕಗಳು ಸಹ ದೊರೆಯುತ್ತಿವೆ. ಇಡೀ ಉತ್ಸವ ದಲ್ಲಿ ಆಯುರ್ವೇದಿಕ್ ಔಷಧಿಗೆ ಬೇಡಿಕೆ ಇದೆ. ಗದಗ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆ, ಜಿಲ್ಲಾ ಕೈಗಾರಿಕಾ ಕೇಂದ್ರದ ಆಶ್ರಯದಲ್ಲಿ ನಡೆಯುತ್ತಿರುವ ಗದಗ ಉತ್ಸವಕ್ಕೆ ಈಗ ಹತ್ತರ ಪ್ರಾಯ.ಕಳೆದ ಒಂದು ದಶಕದಿಂದ ಉತ್ಸವ ನಡೆಸಿಕೊಂಡು ಬರುತ್ತಿರುವ ವಾಣಿ ಜ್ಯೋದ್ಯಮ ಸಂಸ್ಥೆಯು ಸಣ್ಣ ಉದ್ದಿಮೆ ದಾರರು, ಕಿರು ಉದ್ದಿಮೆದಾರರಿಗೆ ಅವರ ಉತ್ಪನ್ನಗಳನ್ನು ಮಾರುಕಟ್ಟೆ ಮಾಡಲು ವೇದಿಕೆಯನ್ನು ಕಲ್ಪಿಸಿದೆ.ಗದಗ ಉತ್ಸವದಲ್ಲಿ ಕೇವಲ ವಸ್ತುಗಳ ಮಾರಾಟ ಪ್ರದರ್ಶನವಲ್ಲದೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಸುಗಮ ಸಂಗೀತ, ಭರತ ನಾಟ್ಯ, ಜಾನಪದ ವೈವಿಧ್ಯ, ಹಾಸ್ಯ ಕವಿಗೋಷ್ಠಿ ಮುಂತಾದ ಕಾರ್ಯ ಕ್ರಮಗಳು ಜನರನ್ನು ಆಕರ್ಷಿಸುತ್ತಿವೆ.ಗದಗ ಉತ್ಸವ ವರ್ಷದಿಂದ ವರ್ಷಕ್ಕೆ ಬೆಳವಣಿಗೆ ಹೊಂದುತ್ತಿದ್ದು, ಈ ಬಾರಿ 88 ಮಳಿಗೆಗಳನ್ನು ತೆರೆಯಲಾಗಿದೆ. ಇದರಲ್ಲಿ 40 ಮಳಿಗೆಯಲ್ಲಿ ಸಣ್ಣ, ಅತೀ ಸಣ್ಣ, ಮಹಿಳಾ ಸ್ವ ಸಹಾಯ ಸಂಘಗಳ ಉತ್ಪನ್ನಗಳನ್ನು ಮಾರಾಟ ಮಾಡಲು ಉಚಿತವಾಗಿ ಅವಕಾಶ ಕಲ್ಪಿಸಲಾಗಿದೆ ಎಂದು ವಾಣಿಜ್ಯೋದ್ಯಮ ಸಂಸ್ಥೆ ಅಧ್ಯಕ್ಷ ಸಂಗಮೇಶ ದುಂದೂರ ತಿಳಿಸಿದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.