ಶನಿವಾರ, ಮೇ 8, 2021
24 °C

ಬರ ಅಧ್ಯಯನ; ವ್ಯರ್ಥ ಪ್ರಯತ್ನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಜ್ಯದ 123 ತಾಲ್ಲೂಕುಗಳಲ್ಲಿ ಬರ ಪರಿಸ್ಥಿತಿ ನಿರ್ಮಾಣವಾಗಿ ಐದಾರು  ತಿಂಗಳಾಯಿತು. ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರಿಗೆ ಈಗ ಬರ ಸಂತ್ರಸ್ತರ ನೆನಪಾಗಿದೆ.ಬೆಂಗಳೂರು, ಹುಬ್ಬಳ್ಳಿ, ಗುಲ್ಬರ್ಗ, ಶಿವಮೊಗ್ಗ ಮತ್ತಿತರ ಕಡೆಗಳಲ್ಲಿ ಸನ್ಮಾನ, ಹುಟ್ಟು ಹಬ್ಬಗಳಲ್ಲಿ ಭಾಗವಹಿಸುತ್ತ, ರೆಸಾರ್ಟ್‌ನಲ್ಲಿ ಬೆಂಬಲಿಗರ ಜತೆಯಲ್ಲಿ ಕೂತು ರಾಜಕಾರಣ ಮಾಡುತ್ತ ದಿನಕ್ಕೊಂದು ಹೇಳಿಕೆ ನೀಡುತ್ತ ಮತ್ತೆ ಅಧಿಕಾರಕ್ಕೆ ಬರುವ ಕನಸು ಕಾಣುತ್ತಿದ್ದ ಅವರಿಗೆ ಇದ್ದಕ್ಕಿದ್ದಂತೆ ಬರ ಸಂತ್ರಸ್ತರು ಸಂಕಷ್ಟದಲ್ಲಿದ್ದಾರೆ ಎಂಬ ಜ್ಞಾನೋದಯವಾದದ್ದು ನಿಜಕ್ಕೂ ಅಚ್ಚರಿಯ ವಿಷಯ. ಕೊಪ್ಪಳ, ಗದಗ ಜಿಲ್ಲೆಗಳಲ್ಲಿ ಅವರ ಬರ ಅಧ್ಯಯನದ ವೈಖರಿಯನ್ನು ಟೀವಿಗಳಲ್ಲಿ ನೋಡಿ ಅಚ್ಚರಿಯಾಯಿತು. ಜನರ ಸಮಸ್ಯೆಗಳಿಗೆ ಅವರು ಸರಿಯಾಗಿ ಉತ್ತರಿಸಲಿಲ್ಲ. ಬರ ಸಂತ್ರಸ್ತರ ಸಣ್ಣ ಬೇಡಿಕೆಯನ್ನು ಈಡೇರಿಸುವ ಅಧಿಕಾರ ಇಲ್ಲದ ಯಡಿಯೂರಪ್ಪ ಅವರದು ವ್ಯರ್ಥ ಪ್ರಯತ್ನ ಅನ್ನಿಸಿತು.ಗದಗದಲ್ಲಿ ಅವರು ಅಲ್ಲಿನ ಶಾಸಕರ ಜತೆ ಕೂತು ಉಣ್ಣುವ ದೃಶ್ಯಗಳನ್ನು ಟೀವಿಯೊಂದು ಸುಮಾರು ಅರ್ಧ ನಿಮಿಷ ತೋರಿಸಿತು. ಅದೊಂದೇ ಅವರು ಮಾಡಿದ ಸಾರ್ಥಕ ಕೆಲಸ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.