ಬೆಂಗಳೂರು: ಕೈವಾರ ಮಠಕ್ಕೆ ರಾಜ್ಯ ಸರ್ಕಾರ ನೀಡಿರುವ ಅನುದಾನವನ್ನು ಬಲಿಜ ಸಮಾಜದ ಅಭಿವೃದ್ಧಿಗೆ ಶ್ರಮಿಸುತ್ತಿರುವ ಕರ್ನಾಟಕ ಬಲಿಜ ಸಂಘಕ್ಕೆ ನೀಡಬೇಕು ಎಂದು ಸಂಘದ ಕಾರ್ಯಾಧ್ಯಕ್ಷ ಕೆ.ಎಂ.ಶ್ರೀನಿವಾಸ ಮೂರ್ತಿ ಹಾಗೂ ಪ್ರಧಾನ ಕಾರ್ಯದರ್ಶಿ ಲಕ್ಷ್ಮಯ್ಯ ಅವರು ಒತ್ತಾಯಿಸಿದ್ದಾರೆ.

ಮಠದ ಧರ್ಮಾಧಿಕಾರಿ ಎಂ.ಆರ್.ಜಯರಾಂ ಅವರು ಬಜೆಟ್ನಲ್ಲಿ ನೀಡಿರುವ ಅನುದಾನವನ್ನು ತಿರಸ್ಕರಿಸುವ ಮೂಲಕ ಬಲಿಜ ಜನಾಂಗದ ವಿರೋಧಿ ನೀತಿಯನ್ನು ಅನುಸರಿಸುತ್ತಿದ್ದಾರೆ ಎಂದು ಖಂಡಿಸಿ, ಬಜೆಟ್ನಲ್ಲಿ ನೀಡಿರುವ ಮೊತ್ತವನ್ನು ಐದು ಕೋಟಿ ರೂಪಾಯಿಗೆ ಹೆಚ್ಚಿಸಿ ಸಂಘಕ್ಕೆ ನೀಡಬೇಕು ಎಂದು ಮನವಿ ಮಾಡಿದ್ದಾರೆ.

ಯೋಗಿ ನಾರಾಯೇಣ ಯತೀಂದ್ರರು ಸ್ಥಾಪಿಸಿದ ಮಠವು ಚಿಂತಾಮಣಿ ತಾಲ್ಲೂಕಿನ ಕೈವಾರದಲ್ಲಿ ಅಂದಿನಿಂದ ಇಂದಿನವರೆಗೂ ಬಲಿಜ ಜನಾಂಗದ ಮಠವಾಗಿ ಉಳಿದಿದೆ. ಕೈವಾರ ನಾರಾಯಣಪ್ಪ ಸ್ಥಾಪಿಸಿರುವ ಈ ಮಠವು ಬಲಿಜ ಸಮಾಜದ ಏಕೈಕ ಗುರುಪೀಠವಾಗಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.