ಶುಕ್ರವಾರ, ಮೇ 14, 2021
32 °C

ಬಸವಣ್ಣನ ಚಿಂತನೆ ಎಂದೆಂದಿಗೂ ಪ್ರಸ್ತುತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಣ್ಣಿಗೇರಿ: ಸಮಾಜ ತಿರಸ್ಕರಿಸಿದ ಕಟ್ಟ ಕಡೆಯ ವ್ಯಕ್ತಿ ಸಂಬೊಳಿ ನಾಗಿದೇವನಲ್ಲಿ ಕೂಡಲ ಸಂಗಮನನ್ನು ಕಂಡ ಬಸವಣ್ಣ ಪ್ರಪಂಚ ಕಂಡ ಅತಿ ದೊಡ್ಡ ಸಂತ, ಚಿಂತಕ ಎಂದು ಹೊಸಳ್ಳಿ ಅಭಿನವ ಬೂದೀಶ್ವರ ಸ್ವಾಮೀಜಿ ನುಡಿದರು.ಸ್ಥಳೀಯ ಬಸವಕೇಂದ್ರ ಹೊರಕೇರಿ ಓಣಿಯ ಮಲ್ಲಿಕಾರ್ಜುನ ನವಲಗುಂದ ಅವರ ಮನೆಯಲ್ಲಿ ಏರ್ಪಡಿಸಿದ ಶರಣ ಶ್ರಾವಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಹರಿದುಕೊಂಡು ತಿನ್ನುವುದಕ್ಕಿಂತ ಹಂಚಿಕೊಂಡು ತಿನ್ನುವುದೇ ಶರಣ ಸಂಸ್ಕೃತಿ. ಸಮಾಜದಲ್ಲಿ ಸಂಘರ್ಷದ ಮೂಲ ಬೇಧಗಳಾದ ಗಂಡು- ಹೆಣ್ಣು, ಬಡವ- ಬಲ್ಲಿದ, ಮೇಲು- ಕೀಳುಗಳಿಗೆ ಕಿಚ್ಚು ಹಚ್ಚಿ ಕಾಯಕ ದಾಸೋಹಗಳನ್ನು ರೂಢಿಗೆ ತಂದ ಬಸವನ್ನನ ಚಿಂತನೆಗಳು ಅಂದು ಇಂದು ಎಂದೆಂದಿಗೂ ಪ್ರಸ್ತುತ. ಬಸವಣ್ಣನ ಈ ಅದ್ಭುತ ಚಿಂತನೆಗಳನ್ನು ನಾಗರಿಕರು  ತಮ್ಮ ಜೀವನದಲ್ಲಿ ರೂಢಿಸಿ ಕೊಳ್ಳುವುದು ಬಹಳ ಅಗತ್ಯ  ಎಂದು ಮಾರ್ಗದರ್ಶನ ನೀಡಿದರು.ಕ್ರಾಂತಿಯೋಗಿ ಬಸವಣ್ಣನನ್ನು ಕುರಿತು ಶಿಕ್ಷಕಿ ಪ್ರೇಮಾ ಉಪನ್ಯಾಸ ನೀಡಿದರು.

ಬಸನಗೌಡ ಕುರಹಟ್ಟಿ, ರಾಜೇಸಾಬ ಸುಂಕದ, ಪ್ರವೀಣ ನಾವಳ್ಳಿ, ಎಸ್.  ಎಸ್. ಹರ್ಲಾಪೂರ, ಮಲ್ಲಿಕಾರ್ಜುನ ಸುರಕೋಡ ಮತ್ತಿತರರು ಉಪಸ್ಥಿತರಿದ್ದರು.ಶಿಲ್ಪಾ ಉಳ್ಳಾಗಡ್ಡಿ ಪ್ರಾರ್ಥಿಸಿದರು. ಕುಂಬಾರ ಸ್ವಾಗತಿಸಿದರು.  ಬೀರಣ್ಣವರ ವಂದಿಸಿದರು,

 ಅಮೃತೇಶ ಶೆಟ್ಟರ ನಿರೂಪಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.