ಶುಕ್ರವಾರ, ಜನವರಿ 17, 2020
22 °C
ಅಳ್ಳಿಮಾರನಹಳ್ಳಿ ಗ್ರಾಮ ಪಂಚಾಯ್ತಿ ಅಧ್ಯಕ್ಷ ಚುನಾವಣೆ

ಬಸವರಾಜು ಅವಿರೋಧವಾಗಿ ಆಯ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕನಕಪುರ: ತಾಲ್ಲೂಕಿನ ಕಸಬಾ ಹೋಬಳಿ ಅಳ್ಳಿಮಾರನಹಳ್ಳಿ ಗ್ರಾಮ ಪಂಚಾಯಿತಿಯ ಅಧ್ಯಕ್ಷರಾಗಿ ಕಾಂಗ್ರೆ ಸ್ ಬೆಂಬಲಿತ ಕುಂತಿಕಲ್ ದೊಡ್ಡಿ ಕೆ.ಎಂ.ಬಸವರಾಜು ಅವಿರೋಧವಾಗಿ ಆಯ್ಕೆಯಾದರು.ಪಂಚಾಯಿತಿಯ ಅಧ್ಯಕ್ಷರಾಗಿದ್ದ ವಾಡೆದೊಡ್ಡಿ ಕಾಳೇಗೌಡರ ರಾಜೀನಾ ಮೆಯಿಂದ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಮಂಗಳವಾರ ಚುನಾವಣೆ ನಡೆಯಿತು.ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಕೆ.ಎಂ. ಬಸವರಾಜು ಹೊರತು ಪಡಿಸಿ ಮತ್ಯಾರು ನಾಮಪತ್ರ ಸಲ್ಲಿಸದ ಕಾರಣ ಚುನಾವಣಾಧಿಕಾರಿ ಶ್ರೀನಾಥ್ ಅವರು ಬಸವರಾಜು ಅವರನ್ನು ಅವಿರೋಧ ವಾಗಿ ಆಯ್ಕೆ ಮಾಡಿ ಘೋಷಣೆ ಮಾಡಿದರು.ಅಭಿವೃದ್ಧಿಗೆ ಹೆಚ್ಚು ಒತ್ತು: ಪಂಚಾಯಿತಿಯ ನೂತನ ಅಧ್ಯಕ್ಷರಾಗಿ ಆಯ್ಕೆಗೊಂಡ ಕೆ.ಎಂ. ಬಸವರಾಜು ಮಾತನಾಡಿ, ಕ್ಷೇತ್ರದ ಶಾಸಕ ಡಿ.ಕೆ.ಶಿವ ಕುಮಾರ್ ಮತ್ತು ಸಂಸದ ಡಿ.ಕೆ.ಸುರೇಶ್ ಅವರ ಮಾರ್ಗದರ್ಶ ನದಲ್ಲಿ ಪಂಚಾಯಿತಿಗೆ ಬರುವ ಎಲ್ಲಾ ಅನುದಾನಗಳನ್ನು ಸಮಪರ್ಕವಾಗಿ ಬಳಕೆ ಮಾಡಿಕೊಂಡು ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಗ್ರಾಮಗಳಲ್ಲೂ ಅಭಿವೃದ್ಧಿ ಕಾರ್ಯ ಮಾಡುವುದಾಗಿ ತಿಳಿಸಿದರು.ಚುನಾವಣಾಧಿಕಾರಿಯಾಗಿ ಕನ ಕಪುರ ಯೋಜನಾ ಪ್ರಾಧಿಕಾರದ ಉಪ ನಿರ್ದೇಶಕ ಶ್ರೀನಾಥ್, ಸಹಾಯಕ ಚುನಾವಣಾಧಿಕಾರಿಯಾಗಿ ಪಂಚಾ ಯಿತಿ ಅಭಿವೃದ್ಧಿ ಅಧಿಕಾರಿ ಹನಮಪ್ಪ ರೇಣಿ  ಕರ್ತವ್ಯ ನಿರ್ವಹಿಸಿದರು.

ಅಭಿನಂದನೆ: ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ರವಿ, ಜಿಲ್ಲಾ ಪಂಚಾಯಿತಿ ಸದಸ್ಯ ಡಿ.ವೆಂಕಟೇಶಯ್ಯ, ಪುರಸಭೆ ಮಾಜಿ ಅಧ್ಯಕ್ಷ ಆರ್.ಕೃಷ್ಣ ಮೂರ್ತಿ, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷರಾದ ಎಂ.ಪುರುಷೋ ತ್ತಮ್, ದೊಡ್ಡಾಲಹಳ್ಳಿ ಕೃಷ್ಣಪ್ಪ, ಉಪಾಧ್ಯಕ್ಷ ಕೂತಗಳೆ ಲೋಕೇಶ್, ಮಾಜಿ ಉಪಾಧ್ಯಕ್ಷ ರಾಜಶೇಖರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎಂ.ಡಿ.ವಿಜಯದೇವು, ಕೆ.ಎನ್.ದಿ ಲೀಪ್, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ವಿ.ಶ್ರೀನಿವಾಸ್, ಪಿ.ಎಲ್.ಡಿ.ಬ್ಯಾಂಕ್‌ ಅಧ್ಯಕ್ಷ ಜೆ.ನಟರಾಜು, ಪುರಸಭೆ ಸದಸ್ಯ ಜಗನ್ನಾಥ್, ಕಾಂಗ್ರೆಸ್‌ ಮುಖಂಡರಾದ ಕೆಂಪರಾಜು, ರಾಯಸಂದ್ರರವಿ, ಅನಜ ವಾಡಿವಿಜಿ, ಕನಕಪುರವಿಜಿ, ಚೀರಣಕು ಪ್ಪೆಮಹೇಶ್, ಮುದುವಾಡಿ ಶಂಭುಲಿಂ ಗಯ್ಯ, ದಂಡುಹುಚ್ಚಯ್ಯ, ಗಾಣಾಳ್‌ ವಿನಯ್, ಮೂರ್ತಿ, ಕಿಶೋರ್‌ಕು ಮಾರ್, ಎಂ.ಕುಮಾರ್, ಗೂಗರೆದೊ ಡ್ಡಿಪರಮೇಶ್, ಕೃಷ್ಣ, ಸೊಸೈಟಿರಾ ಮಣ್ಣ, ಮನುಅರಸು, ಸುಜಾತ ಅಶೋಕ್ ಕುಮಾರ್ ಅವರು ನೂತನ ಅಧ್ಯಕ್ಷ ಕೆ.ಎಂ.ಬಸವರಾಜು ಅವರಿಗೆ ಪುಷ್ಪಮಾಲಿಕೆ ಹಾಕಿ ಅಭಿನಂದಿಸಿದರು.

ಪ್ರತಿಕ್ರಿಯಿಸಿ (+)