ಮಂಗಳವಾರ, ಜೂನ್ 15, 2021
25 °C

ಬಸಾಪುರ: ಕೇದಾರ ಶ್ರೀ ಅಡ್ಡಪಲ್ಲಕ್ಕಿ ಉತ್ಸವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಾವಣಗೆರೆ: ನಗರದ ಬಸಾಪುರದಲ್ಲಿ ಬುಧವಾರ ಬೆಳಿಗ್ಗೆ ಹಿಮವತ್ಕೇದಾರ ಭೀಮಾಶಂಕರಲಿಂಗ ಶಿವಾಚಾರ್ಯ ಸ್ವಾಮೀಜಿ ಅವರ ಅಡ್ಡ ಪಲ್ಲಕ್ಕಿ ಉತ್ಸವ ಯಶಸ್ವಿಯಾಗಿ ಜರುಗಿತು.ಎರಡು ದಿನ ನಡೆಯುವ ಜನ ಜಾಗೃತಿ ಧರ್ಮ ಸಮಾರಂಭದ ಅಂಗವಾಗಿ ಮೊದಲದಿನ ಸ್ವಾಮೀಜಿಯ ಪಲ್ಲಕ್ಕಿ ಉತ್ಸವ ನಡೆಯಿತು. ಗ್ರಾಮಸ್ಥರು ಶ್ರೀಗಳು ಅಲಂಕರಿಸಿದ್ದ ಪಲ್ಲಕ್ಕಿ ಹೊತ್ತು ‘ಪಂಚಪೀಠಕ್ಕೆ ಜಯವಾಗಲಿ...’, ‘ಮಾನವ

ಧರ್ಮಕ್ಕೆ ಜಯವಾಗಲಿ...’ ಎಂದು ಘೋಷಣೆ ಕೂಗುತ್ತಾ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದರು.

ಸ್ವಾಮೀಜಿ ಅವರು ಕುಳಿತಿದ್ದ ಪಲ್ಲಕ್ಕಿಯು ಕೆಲವೆಡೆ ನಿಂತು, ಸಾಗುತ್ತಿತ್ತು. ಆ ಸಮಯದಲ್ಲಿ ಶ್ರೀಗಳು ಭಕ್ತರಿಗೆ ಆಶೀರ್ವಾದ ನೀಡಿದರು.ಗ್ರಾಮದ ಮಹಿಳೆಯರು ಪೂರ್ಣಕುಂಭ, ಕಳಸದೊಂದಿಗೆ ಸ್ವಾಮೀಜಿಯ ಪಲ್ಲಕ್ಕಿ ಉತ್ಸವವನ್ನು ಬರಮಾಡಿಕೊಂಡರು. ನೂರಾರು ಗ್ರಾಮಸ್ಥರು ಉತ್ಸವದಲ್ಲಿ ಪಾಲ್ಗೊಂಡು   ಸ್ವಾಮೀಜಿ ಅವರಿಗೆ ಜಯಕಾರ ಕೂಗಿ ಸಂಭ್ರಮಿಸಿದರು.

ಜಾನಪದ ಕಲಾ ಮೇಳ ತಂಡ, ಭಜನಾ ತಂಡಗಳು ಭಾಗವಹಿಸಿದ್ದವು.ಕಣ್ವಕುಪ್ಪೆ ಗವಿಮಠದ ನಾಲ್ವಡಿ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ, ಆವರಗೊಳ್ಳದ ಓಂಕಾರ ಶಿವಾಚಾರ್ಯ ಸ್ವಾಮೀಜಿ, ಆಲ್ದಳ್ಳಿ ಶಿವಾನಂದಪ್ಪ, ಎಂ.ಎಸ್‌.ಕೊಟ್ರಯ್ಯ, ಸುರೇಂದ್ರಪ್ಪ, ಮಹೇಶ್ವರಪ್ಪ, ದೇವೇಂದ್ರಪ್ಪ ಸೇರಿದಂತೆ ಅಡ್ಡಪಲ್ಲಕ್ಕಿ ಉತ್ಸವದಲ್ಲಿ ನೂರಾರು ಭಕ್ತರು ಭಾಗವಹಿಸಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.