ಮಂಗಳವಾರ, ಮೇ 24, 2022
25 °C

ಬಸ್ ಉರುಳಿ 15 ಜನರಿಗೆ ಗಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೂಡ್ಲಿಗಿ: ತಾಲ್ಲೂಕಿನ ತಾಯಕನಹಳ್ಳಿ ಕ್ರಾಸ್‌ನಲ್ಲಿರುವ ಸೇತುವೆ ಬಳಿ ಖಾಸಗಿ ಬಸ್ ಉರುಳಿ 15 ಜನ ಗಾಯ ಗೊಂಡಿರುವ ಘಟನೆ ಶನಿವಾರ ಬೆಳಿಗ್ಗೆ ನಡೆದಿದೆ.ಮೊಳಕಾಲ್ಮೂರಿನಿಂದ ಚಿತ್ರದುರ್ಗಕ್ಕೆ ಹೋಗುತ್ತಿದ್ದ ಖಾಸಗಿ ಬಸ್ ತಾಯಕನಹಳ್ಳಿ ಕ್ರಾಸ್ ಬಳಿಯಿರುವ ಸೇತುವೆ ಹತ್ತಿರ ಬಂದಾಗ, ಚಾಲಕನ ಕೈಯಲ್ಲಿದ್ದ ಸ್ಟೇರಿಂಗ್  ಕಿತ್ತುಹೋಗಿ  ನಿಯಂತ್ರಣ ತಪ್ಪಿ ಸೇತುವೆ ಹತ್ತಿರ ಉರುಳಿಬಿದ್ದಿದೆ.ಬಸ್‌ನಲ್ಲಿದ್ದ ಚಳ್ಳಕೆರೆ ತಾಲ್ಲೂಕಿನ ಮಲ್ಲೆಬೋರಯ್ಯನಹಟ್ಟಿ ಗ್ರಾಮದ ಎಂ. ತಿಪ್ಪೇಸ್ವಾಮಿ, ಓಬಣ್ಣ, ಮಾರಣ್ಣ ಅವರಿಗೆ ಗಂಭೀರ ಗಾಯಗಳಾಗಿವೆ.  ಉಳಿದ 15 ಜನ ಪ್ರಯಾಣಿಕರಿಗೆ ಗಾಯ ಗಳಾಗಿದ್ದು, ತಕ್ಷಣವೇ ಅವರನ್ನು 108 ತುರ್ತು ಚಿಕಿತ್ಸಾ ವಾಹನದ ಮೂಲಕ ಜಗಳೂರು ಮತ್ತು ಹೊಸಹಳ್ಳಿ ಆಸ್ಪತ್ರೆಗೆ ದಾಖಲಿಸಲಾಯಿತು.  ಹೊಸಹಳ್ಳಿ   ಠಾಣೆಯಲ್ಲಿ ದಾಖಲಾಗಿದೆ. ಬಸ್‌ನ ಚಾಲಕ ತಲೆಮರೆಸಿ ಕೊಂಡಿದ್ದಾನೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.