ಸೋಮವಾರ, ಏಪ್ರಿಲ್ 12, 2021
26 °C

ಬಸ್ ನಿಲ್ದಾಣಕ್ಕೆ ಸಕಲ ಸೌಲಭ್ಯ: ಕಾಗೇರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕುಮಟಾ: `ಅತ್ಯಂತ ವಿಶಾಲ ಹಾಗೂ ವ್ಯವಸ್ಥಿತ ಸೌಲಭ್ಯಗಳನ್ನು ಹೊಂದಿರುವ ಕುಮಟಾ ನೂತನ ಬಸ್ ನಿಲ್ದಾಣದಲ್ಲಿ ಬಾಕಿ ಉಳಿದ ಅಗತ್ಯ ಕೆಲಸಗಳನ್ನು ಶೀಘ್ರ ಮಾಡಿಸಿಕೊಡಲಾಗುವುದು~ ಎಂದು ಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದರು.ಕುಮಟಾ ನೂತನ ಬಸ್ ನಿಲ್ದಾಣ ಉದ್ಘಾಟಿಸಿದ ಅವರು, `ಹೆಚ್ಚಿನ ಜನರು ಬಸ್‌ನಲ್ಲಿ ಪ್ರಯಾಣಿಸಿ ಸಾರಿಗೆ ಇಲಾ ಖೆಯ ಸೇವೆ ಪಡೆಯುವ ಮೂಲಕ ಅದರ ಆದಾಯ ಕೂಡ ಹೆಚ್ಚಿಸಬೇಕು. ತಾಲ್ಲೂಕಿನ ಗ್ರಾಮೀಣ ಭಾಗಗಳಿಗೆ ಓಡಾಡುವ ಬಸ್‌ಗಳನ್ನು ನೆಲ್ಲಿಕೇರಿ ಬಸ್ ನಿಲ್ದಾಣಕ್ಕೂ ಬಿಡುವ ಬಗ್ಗೆ ಕ್ರಮ ಕೈಕೊಳ್ಳಲಾಗುವುದು. ಹಿಂದೆ ಬಸ್ ನಿಲ್ದಾಣ ಜಾಗವನ್ನು ಮಂಜೂರಿ ಮಾಡಿ ಸುವಲ್ಲಿ ಕುಮಟಾದ ಹಿಂದಿನ ಶಾಸಕ ದಿ. ಮೋಹನ ಶೆಟ್ಟಿ ಶ್ರಮಿಸಿದ್ದಾರೆ~ ಎಂದರು.ವೇದಿಕೆ ಕಾರ್ಯಕ್ರಮ ಉದ್ಘಾಟಿಸಿದ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಅಧ್ಯಕ್ಷ ಮಲ್ಲಿಕಾರ್ಜುನ ಸಾವಕಾರ, `ಸರಕಾರ  ಅಗತ್ಯವಿರುವ ಪ್ರತೀ ತಾಲ್ಲೂಕುಗಳಲ್ಲಿ ಹೊಸ ಬಸ್ ನಿಲ್ದಾಣ ಹಾಗೂ ಡಿಪೋ ನಿರ್ಮಾಣಕ್ಕೆ ಆದ್ಯತೆ ನೀಡುತ್ತಿದೆ. ಬಸ್ ನಿಲ್ದಾಣ ಕಾಮಗಾರಿ ತರಾತುರಿಯಲ್ಲಿ ಕಳಪೆ ಆಗಿಲ್ಲ. ಈ ನಿಲ್ದಾಣ ಇಡೀ ಜಿಲ್ಲೆಯಲ್ಲಿ ಮಾದರಿ~ ಎಂದರು.ಅಧ್ಯಕ್ಷತೆ ವಹಿಸಿದ್ದ ಶಾಸಕ ದಿನಕರ ಶೆಟ್ಟಿ, `ಕುಮಟಾ ಬಸ್ ನಿಲ್ದಾಣ ನಿರ್ಮಾಣದಲ್ಲಿ ಸಾರಿಗೆ ಸಚಿವ ಆರ್ ಅಶೋಕ ಅವರ ಕೊಡುಗೆ ಅಪಾರ. ಬಸ್ ನಿಲ್ದಾಣ ಕಾಮಗಾರಿ ಪೂರ್ತಿ ಗೊಳ್ಳದೆ ಉದ್ಘಾಟಿಸಲಾಗಿದೆ ಎನ್ನುವ ಕೆಲವರ ಆರೋಪ ಸರಿಯಲ್ಲ. ಉತ್ತಮ ಗುಣಮಟ್ಟದ ಕೆಲಸ ಮಾಡಿದ್ದರೂ ಕಳಪೆ ಎಂದು ಆರೋಪಿಸಿದರೆ ಗುತ್ತಿಗೆದಾರರು ಏನು ಮಾಡಬೇಕು?~ ಎಂದು ಅವರು ಪ್ರಶ್ನಿಸಿದರು.ವೇದಿಕೆಯಲ್ಲಿ ತಾ.ಪಂ. ಅಧ್ಯಕ್ಷೆ ನೀಲಾಂಬಿಕಾ ನಾಯ್ಕ, ಉಪಾಧ್ಯಕ್ಷ ಈಶ್ವರ ನಾಯ್ಕ, ಜಿ.ಪಂ. ಸದಸ್ಯೆ ವೀಣಾ ನಾಯ್ಕ, ಗೇರು ಅಭಿವೃದ್ಧಿ ನಿಗಮ ಅಧ್ಯಕ್ಷ ವಿನೋದ ಪ್ರಭು ಇದ್ದರು.ವಿಭಾಗೀಯ ನಿಯಂತ್ರಣಾಧಿಕಾರಿ ಎಚ್.ಸಿ. ಬಸವರಾಜಪ್ಪ ಸ್ವಾಗತಿಸಿದರು. ಎ.ಐ.ಟಿ.ಯು.ಸಿ. ಸಂಘಟನೆಯ ಅಧ್ಯಕ್ಷ ಸತೀಶ ಹಾಗೂ ಸಾರಿಗೆ ಇಲಾಖೆಯ ಕನ್ನಡ ಕ್ರಿಯಾ ಸಮಿತಿ ಅಧ್ಯಕ್ಷ ಸೀತಾರಾಂ ನಾಯ್ಕ ಅವರ ನೇತೃತ್ವದಲ್ಲಿ ಸಿಬ್ಬಂದಿ ಎಲ್ಲ ವ್ಯವಸ್ಥೆ ಕೈಕೊಂಡಿದ್ದರು.ಕುಮಟಾ ಡಿಪೋ ಮ್ಯಾನೇಜರ್ ವಿ .ವಿ. ನಾಯ್ಕ, ಜಿ.ಪಂ. ಸದಸ್ಯ ಪ್ರದೀಪ ನಾಯಕ, ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಉದಯ ನಾಯ್ಕ, ಪುರಸಭೆ ಸದಸ್ಯರಾದ ಮಧುಸೂದನ್ ಶೇಟ್, ಪ್ರಶಾಂತ ನಾಯ್ಕ, ತಾ.ಪಂ. ಸದಸ್ಯ ರಾದ ಭಾರತಿ ದೇವತೆ ಇಂದಿರಾ ಮುಕ್ರಿ, ಅಧ್ಯಕ್ಷ ಎಸ್.ಟಿ. ನಾಯ್ಕ, ಪಂಚಾಯಿತಿ ಸದಸ್ಯೆ ನಾಗರತ್ನಾ ನಾಯ್ಕ, ಬಿ.ಜೆ.ಪಿ. ಮುಖಂಡರಾದ ಶಶಿಭೂಷಣ ಹೆಗಡೆ, ಸೂರಜ್ ನಾಯ್ಕ, ಜಿಲ್ಲಾಧ್ಯಕ್ಷ ಪ್ರಸಾದ ಕಾರವಾರಕರ  ಮೊದಲಾದವರಿದ್ದರು. ರವೀಂದ್ರ ಭಟ್ಟ ಸೂರಿ ನಿರೂಪಿಸಿದರು.ಆಕ್ಷೇಪ: ನೂತನ ಬಸ್ ನಿಲ್ದಾಣ ಕುಮಟಾ ಪುರಸಭೆ ವ್ಯಾಪ್ತಿಯೊಳಗೆ ಬರುತ್ತಿದ್ದರೂ ಉದ್ಘಾಟನಾ ಕಾರ್ಯ ಕ್ರಮಕ್ಕೆ ಪುರಸಭೆಯ ಸದಸ್ಯರಿಗೂ ಆಮಂತ್ರಣ ನೀಡಿಲ್ಲ. ನಾಳೆ ಬಸ್ ನಿಲ್ದಾ ಣದ ಆವಾರ ಅಕ್ಕ-ಪಕ್ಕ ಜಾಗವನ್ನು ಪುರಸಭೆ ಶುಚಿಯಾಗಿಡುವುದೂ ಬೇಡವೇ? ಎಂದು ಪುರಸಭೆ ಸದಸ್ಯ ಕಿರಣ ಕಾಮತ್ ಆಕ್ಷೇಪ ವ್ಯಕ್ತಪಡಿ ಸಿದ್ದಾರೆ. ಅದೇ ರೀತಿ ತಾ.ಪಂ. ಸದಸ್ಯ ರಿಗೂ ಕಾರ್ಯಕ್ರಮಕ್ಕೆ ಆಮಂತ್ರಣ ನೀಡದ ಬಗ್ಗೆ ಮಹಿಳಾ ಸದಸ್ಯರೊಬ್ಬರು ಆಕ್ಷೇಪಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.