ಬಹರೇನ್: ರಾಜಕೀಯ ಕೈದಿಗಳ ಬಿಡುಗಡೆಗೆ ಸಮ್ಮತಿ

7

ಬಹರೇನ್: ರಾಜಕೀಯ ಕೈದಿಗಳ ಬಿಡುಗಡೆಗೆ ಸಮ್ಮತಿ

Published:
Updated:

ಮನಾಮ (ಐಎಎನ್‌ಎಸ್/ಆರ್‌ಐಎ ನೊವೊತ್ಸಿ): ಬಹರೇನ್‌ನಲ್ಲಿ ಆಡಳಿತ ವಿರೋಧಿ ಹೋರಾಟಗಾರರು ಮುಂದಿಟ್ಟಿರುವ ಬೇಡಿಕೆಗಳಲ್ಲಿ ಒಂದಾದ ರಾಜಕೀಯ ಕೈದಿಗಳ ಬಿಡುಗಡೆಗೆ ಬಹರೇನ್ ರಾಜ ಸಮ್ಮತಿಸಿದ್ದಾರೆ ಎಂದು  ಸರ್ಕಾರದ ಮೂಲಗಳು ಮಂಗಳವಾರ ತಿಳಿಸಿವೆ.ಆದರೆ ಪ್ರತಿಭಟನಾಕಾರರ ಉಳಿದ ಬೇಡಿಕೆಗಳನ್ನು ಈಡೇರಿಸಲು ಅವರು ನಿರಾಕರಿಸಿದ್ದಾರೆ.ದೇಶದ ರಾಜಕೀಯದಲ್ಲಿ ತಮಗೆ ಇನ್ನೂ ಹೆಚ್ಚಿನ ಪ್ರಾತಿನಿಧ್ಯ ನೀಡಬೇಕು ಎಂದು ಒತ್ತಾಯಿಸಿ ಸುನ್ನಿ ರಾಜಪ್ರಭುತ್ವವಿರುವ ಬಹರೇನ್‌ನಲ್ಲಿ ಫೆಬ್ರುವರಿ 14ರಿಂದ ಸಾವಿರಾರು ಸಂಖ್ಯೆಯಲ್ಲಿ ಶಿಯಾ ಮುಸ್ಲಿಮರು ರಾಜಧಾನಿ ಮನಾಮ ಹಾಗೂ ಇನ್ನಿತರ ನಗರಗಳಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.ಇದುವರೆಗೆ ನಡೆದ ಪ್ರತಿಭಟನೆಯಲ್ಲಿ ಕನಿಷ್ಠ ಐವರು ಮೃತಪಟ್ಟು, 230ಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry