ಮಂಗಳವಾರ, ಮೇ 17, 2022
26 °C

ಬಹಿರ್ದೆಸೆ-ದುರ್ದಶೆ!

-ಸಿ.ಪಿ.ಕೆ.,ಮೈಸೂರು Updated:

ಅಕ್ಷರ ಗಾತ್ರ : | |

`ಬಯಲು ಬಹಿರ್ದೆಸೆಗೆ ನಿಷೇಧ ಚಿಂತನೆ' (ಪ್ರ.ವಾ., ಜು. 2). ರಾಮನಗರ ಜಿಲ್ಲಾ ಪಂಚಾಯಿತಿಯ ಈ ಚಿಂತನೆಯ ಸುದ್ದಿಯನ್ನೋದಿ ನಗು ಬಂತು; ಪ್ರಶ್ನೆಗಳೂ ಹುಟ್ಟಿದುವು: ಜನ ನಸುಕಿನಲ್ಲಿ ಅಥವಾ ಮುಸ್ಸಂಜೆ ಹೊತ್ತು ಬಯಲು ಕಡೆಗೆ ಹೋಗುವಾಗ ಪೊಲೀಸರು (ಹೊಂಚುಹಾಕಿ) ಅವರನ್ನು ಹಿಡಿದುಹಾಕುತ್ತಾರೊ ಅಥವಾ ಅವರು `ಬಹಿರ್ದೆಸೆ'ಗೆ ಕುಳಿತಿರುವಾಗ ಬಂಧಿಸುತ್ತಾರೊ?ನಿಷೇಧಾಜ್ಞೆಯ ಉಲ್ಲಂಘನೆಗೆ ಏನು ಶಿಕ್ಷೆ? ನಿಷೇಧ ಜಾರಿಗೆ ಬಂದರೆ, ಮಲಬದ್ಧತೆಯಿಂದ ಬಳಲುವವರಿಂದ ಆಸ್ಪತ್ರೆಗಳು ತುಂಬಿ ತುಳುಕುವುದು ನಿಶ್ಚಿತ! ಅಂತೂ ಬಹಿರ್ದೆಸೆಗೆ ಹೋಗುತ್ತಲೆ ತೀವ್ರವಾಗಿ ಚಿಂತಿಸಬೇಕಾದ ವಿಚಾರ!             

-ಸಿ.ಪಿ.ಕೆ., ಮೈಸೂರು .

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.