ಮೀರ್ಪುರ (ಪಿಟಿಐ): ಪ್ರಭಾವಿ ಬೌಲಿಂಗ್ ಪ್ರದರ್ಶನ ನೀಡಿದ ಬಾಂಗ್ಲಾದೇಶ ತಂಡದವರು ಟ್ವೆಂಟಿ-20 ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಅರ್ಹತಾ ಪಂದ್ಯದಲ್ಲಿ ಆಫ್ಘಾನಿಸ್ತಾನ ವಿರುದ್ಧ ಒಂಬತ್ತು ವಿಕೆಟ್ಗಳ ಭರ್ಜರಿ ಗೆಲುವು ಪಡೆದಿದ್ದಾರೆ.

ಷೇರ್ ಎ ಬಾಂಗ್ಲಾ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ‘ಎ’ ಗುಂಪಿನ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆಫ್ಘಾನಿಸ್ತಾನ 17.1 ಓವರ್ಗಳಲ್ಲಿ ಕೇವಲ 72 ರನ್ಗಳಿಗೆ ಆಲೌಟಾಯಿತು. ಆತಿಥೇಯ ತಂಡ 12 ಓವರ್ಗಳಲ್ಲಿ ಒಂದು ವಿಕೆಟ್ ನಷ್ಟಕ್ಕೆ 78 ರನ್ ಗಳಿಸಿ ಜಯ ಸಾಧಿಸಿತು.
ಇತ್ತೀಚೆಗೆ ನಡೆದ ಏಷ್ಯಾಕಪ್ ಟೂರ್ನಿಯಲ್ಲಿ ಆಫ್ಘನ್ ತಂಡ ಬಾಂಗ್ಲಾದೇಶಕ್ಕೆ ಆಘಾತ ನೀಡಿತ್ತು. ಮುಷ್ಫಿಕರ್ ರಹೀಮ್ ಬಳಗ ಇದೀಗ ಆ ಸೋಲಿಗೆ ಮಯ್ಯಿ ತೀರಿಸಿಕೊಂಡಿದೆ.

ಟಾಸ್ ಗೆದ್ದ ಬಾಂಗ್ಲಾ ಎದುರಾಳಿ ತಂಡವನ್ನು ಬ್ಯಾಟಿಂಗ್ಗೆ ಕಳುಹಿಸಿತು. ಆಫ್ಘನ್ ಆಟಗಾರರು ಆತಿಥೇಯ ತಂಡದ ಸ್ಪಿನ್ ಬೌಲಿಂಗ್ ಮುಂದೆ ಪರದಾಡಿದರು. ಶಕೀಬ್ ಅಲ್ ಹಸನ್ (8ಕ್ಕೆ 3) ಮತ್ತು ಅಬ್ದುರ್ ರಜಾಕ್ (20ಕ್ಕೆ 2) ಸಮರ್ಥ ದಾಳಿಯ ಮೂಲಕ ಎದುರಾಳಿ ಬ್ಯಾಟ್ಸ್ಮನ್ಗಳನ್ನು ಕಟ್ಟಿಹಾಕಿದರು. ಆಫ್ಸ್ಪಿನ್ನರ್ ಮಹಮೂದುಲ್ಲಾ ನಾಲ್ಕು ಓವರ್ಗಳಲ್ಲಿ ಕೇವಲ ಎಂಟು ರನ್ ನೀಡಿ ಒಂದು ವಿಕೆಟ್ ಪಡೆದರು. 36 ರನ್ ಗಳಿಸುವಷ್ಟರಲ್ಲಿ ನಾಲ್ಕು ವಿಕೆಟ್ ಕಳೆದುಕೊಂಡು ಆಫ್ಘನ್ ಬಳಿಕ ಚೇತರಿಸಿಕೊಳ್ಳಲು ವಿಫಲವಾಯಿತು. 21 ರನ್ ಗಳಿಸಿದ ಗುಲ್ಬದೀನ್ ನೈಬ್ ಈ ತಂಡದ ಗರಿಷ್ಠ ಸ್ಕೋರರ್ ಎನಿಸಿಕೊಂಡರು. ಇತರ ಇಬ್ಬರು ಮಾತ್ರ ಎರಡಂಕಿಯ ಮೊತ್ತ ತಲುಪಿದರು.

ಸುಲಭ ಗುರಿ ಬೆನ್ನಟ್ಟಿದ ಬಾಂಗ್ಲಾಕ್ಕೆ ಉತ್ತಮ ಆರಂಭ ಲಭಿಸಿತು. ತಮೀಮ್ ಇಕ್ಬಾಲ್ (21) ಮತ್ತು ಅನಾಮುಲ್ ಹಕ್ (ಅಜೇಯ 44, 33 ಎಸೆತ, 4 ಬೌಂ, 3 ಸಿಕ್ಸರ್) ಮೊದಲ ವಿಕೆಟ್ಗೆ 45 ರನ್ ಸೇರಿಸಿದರು. ಅನಾಮುಲ್ ಆ ಬಳಿಕ ಶಕೀಬ್ ಅಲ್ ಹಸನ್ ಜೊತೆ ಸೇರಿ ಕೊಂಡು ತಂಡವನ್ನು ಗೆಲುವಿನತ್ತ ಮುನ್ನಡೆಸಿದರು.

ಸಂಕ್ಷಿಪ್ತ ಸ್ಕೋರ್: ಆಫ್ಘಾನಿಸ್ತಾನ: 17.1 ಓವರ್ಗಳಲ್ಲಿ 72 (ಗುಲ್ಬದೀನ್ ನೈಬ್ 21, ಕರೀಮ್ ಸಾದಿಕ್ 10, ಶಫೀಕ್ ಉಲ್ಲಾ 16, ಶಕೀಬ್ ಅಲ್ ಹಸನ್ 8ಕ್ಕೆ 3, ಅಬ್ದುರ್ ರಜಾಕ್ 20ಕ್ಕೆ 2, ಮಹಮೂದುಲ್ಲಾ 8ಕ್ಕೆ 1, ಮಷ್ರಫೆ ಮೊರ್ತಜಾ 8ಕ್ಕೆ 1)
ಬಾಂಗ್ಲಾದೇಶ: 12 ಓವರ್ಗಳಲ್ಲಿ 1 ವಿಕೆಟ್ಗೆ 78 (ತಮೀಮ್ ಇಕ್ಬಾಲ್ 21, ಅನಾಮುಲ್ ಹಕ್ ಔಟಾಗದೆ 44, ಶಕೀಬ್ ಅಲ್ ಹಸನ್ ಔಟಾಗದೆ 10, ಸಮೀವುಲ್ಲಾ ಶೆನ್ವರಿ 14ಕ್ಕೆ 1). ಫಲಿತಾಂಶ: ಬಾಂಗ್ಲಾದೇಶಕ್ಕೆ 9 ವಿಕೆಟ್ ಗೆಲುವು ಹಾಗೂ ಎರಡು ಪಾಯಿಂಟ್; ಪಂದ್ಯಶ್ರೇಷ್ಠ: ಶಕೀಬ್ ಅಲ್ ಹಸನ್

ನೇಪಾಳಕ್ಕೆ ಗೆಲುವು: ಚಿತ್ತಗಾಂಗ್ನಲ್ಲಿ ನಡೆದ ದಿನದ ಎರಡನೇ ಪಂದ್ಯದಲ್ಲಿ ನೇಪಾಳ ತಂಡ 80 ರನ್ಗಳಿಂದ ಹಾಂಕಾಂಗ್ ತಂಡವನ್ನು ಮಣಿಸಿತು.
ಜಹೂರ್ ಅಹ್ಮದ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಗೆಲುವಿಗೆ 150 ರನ್ ಗಳಿಸಬೇಕಿದ್ದ ಹಾಂಕಾಂಗ್ ಕೇವಲ 69 ರನ್ಗಳಿಗೆ ಆಲೌಟಾಯಿತು.

ಸಂಕ್ಷಿಪ್ತ ಸ್ಕೋರ್: ನೇಪಾಳ: 20 ಓವರ್ಗಳಲ್ಲಿ 8 ವಿಕೆಟ್ಗೆ 149 (ಗ್ಯಾನೇಂದ್ರ ಮಲ್ಲ 48, ಪಾರಸ್ ಖಡ್ಕ 41, ಹಸೀಬ್ ಅಮ್ಜದ್ 25ಕ್ಕೆ 3, ನದೀಮ್ ಅಹ್ಮದ್ 26ಕ್ಕೆ 2) ಹಾಂಕಾಂಗ್: 17 ಓವರ್ಗಳಲ್ಲಿ 69 (ವಕಾಸ್ ಬರ್ಕತ್ 18, ಬಾಬರ್ ಹಯಾತ್ 20, ಬಸಂತ್ ರೆಗ್ಮಿ 14ಕ್ಕೆ 3, ಶಕ್ತಿ ಗೌಚನ್ 9ಕ್ಕೆ 3, ಸೋಂಪಾಲ್ ಕಮಿ 13ಕ್ಕೆ 2) ಫಲಿತಾಂಶ: ನೇಪಾಳಕ್ಕೆ 80 ರನ್ ಗೆಲುವು ಹಾಗೂ ಎರಡು ಪಾಯಿಂಟ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.