ಸೋಮವಾರ, ಏಪ್ರಿಲ್ 19, 2021
23 °C

ಬಾಂಬ್ ಸ್ಫೋಟ: 19 ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಾಗ್ದಾದ್ (ಐಎಎನ್‌ಎಸ್): ಇರಾಕ್‌ನ ವಿವಿಧ ಭಾಗಗಳಲ್ಲಿರುವ ಮೂರು ಶಿಯಾ ಮಸೀದಿಗಳ ಬಳಿ ಮಂಗಳವಾರ ಕಾರ್ ಬಾಂಬ್ ಸ್ಫೋಟ ಸಂಭವಿಸಿದ್ದು, ಒಟ್ಟು 19 ಜನರು ಮೃತಪಟ್ಟು 72 ಜನರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಅಲ್-ಶು ಜಿಲ್ಲೆಯ ಶಿಯಾ ಮಸೀದಿಯೊಂದರ ಸಮೀಪ ಬಾಂಬ್ ಸ್ಫೋಟ ನಡೆದಿದ್ದು ಎಂಟು ಜನರು ಮೃತಪಟ್ಟು, 21 ಜನರು ಗಾಯಗೊಂಡಿದ್ದಾರೆ. ಬಾಗ್ದಾದ್‌ನ ಮತ್ತೊಂದು ಸ್ಥಳದಲ್ಲಿರುವ ಶಿಯಾ ಮಸೀದಿಯ ಬಳಿ ಸಂಭವಿಸಿದ ಸ್ಫೋಟದಲ್ಲೂ ಆರು ಜನರು ಮೃತಪಟ್ಟು, 32 ಜನರು ಗಾಯಗೊಂಡಿದ್ದಾರೆ. ಹುರಿಯಾ ಜಿಲ್ಲೆಯ ಮಸೀದಿ ಬಳಿ ದುಷ್ಕರ್ಮಿಗಳು ಬಾಂಬ್ ಸ್ಫೋಟ ನಡೆಸಿದ್ದು ಐದು ಜನರು ಸಾವನ್ನಪ್ಪಿ, 19 ಜನರು ಗಾಯಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.