ಭಾನುವಾರ, ಜೂನ್ 13, 2021
26 °C

ಬಾಗಲಕೋಟೆ ಜಿಲ್ಲಾ ಮಟ್ಟದ 9ನೆಯ ಸಾಹಿತ್ಯ ಸಮ್ಮೇಳನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಾದಾಮಿ: ಸಾಹಿತ್ಯವು ಮಕ್ಕಳಿಗೆ ಒಳ್ಳೆಯ ಸಂಸ್ಕಾರ ನೀಡಬೇಕು. ಅದು ಮಕ್ಕಳಿಗೆ ಚೈತನ್ಯದ ಉಸಿರಾಗಬೇಕು. ಒಳ್ಳೆಯ ಕೃತಿಗಳಿಂದ ಮಾನವೀಯ ಮೌಲ್ಯಗಳನ್ನು ತುಂಬಬಹುದಾಗಿದೆ.  ಸಾಹಿತಿಗಳಿಂದ ಮಕ್ಕಳ ಬದುಕನ್ನು ರೂಪಿಸುವ ಸಾಹಿತ್ಯ ಕೃತಿಗಳು ಹೊರ ಬರಲಿ ಎಂದು ಶಿಶು ಸಾಹಿತಿ ಹ.ಮ.ಪೂಜಾರ ಆಶಯ ವ್ಯಕ್ತಪಡಿಸಿದರು.ಶಿವಯೋಗಮಂದಿರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜಿಲ್ಲಾ ಮಕ್ಕಳ ಸಾಹಿತ್ಯ ಸಮಾಗಮದ ಆಶ್ರಯದಲ್ಲಿ ಜರುಗಿದ 9ನೆಯ ಮಕ್ಕಳ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು.ಮಕ್ಕಳ ಸಾಹಿತ್ಯಕ್ಕೆ ಜನಪದ ಸಾಹಿತ್ಯವೇ ಮೂಲ ಬೇರು. ಮಕ್ಕಳು ಆಟವಾಡುವಾಗ ಆಟಕ್ಕೆ ತಕ್ಕಂತೆ ಹೇಳುವ ಹಾಡುಗಳು  `ಧಡಂ ದುಡುಕಿ ಪಂಚೇರ ಅಡಕಿ~  `ಸಕ್ಕಾ ಸುರಗಿ ಗೋದಿ ಮುರುಗಿ~  `ಅವ್ವಾ ಅವ್ವಾ ಗೆಣಸು ಕುಳ್ಯಾಗ ಹಾಕಿ ಕುದುಸು~ಜನಪದ ಗ್ರಾಮೀಣ ಆಟಗಳ ಕವನಗಳನ್ನು ಪ್ರಸ್ತುತ ಪಡಿಸಿ ಮಕ್ಕಳ ವಯಸ್ಸಿಗೆ ಅನುಗುಣವಾಗಿ ಬೌದ್ಧಿಕವಾಗಿ ಚಿಂತನೆ ಮಾಡುವ ಸಾಹಿತ್ಯ ರಚನೆಯಿಂದ ಮಕ್ಕಳ ಹೃದಯ ವಿಕಸಿತವಾಗಬೇಕು ಎಂದರು.ಜಿಲ್ಲಾ ಮಟ್ಟದ ಮಕ್ಕಳ ಸಾಹಿತ್ಯ ಸಮ್ಮೇಳನದಲ್ಲಿ ಮಕ್ಕಳ ಕೊರತೆ ಕಂಡ ಅತಿಥಿಗಳು ಮಕ್ಕಳ ಸಾಹಿತ್ಯ ಸಮ್ಮೇಳನಕ್ಕೆ ಜಿಲ್ಲೆಯ ಎಲ್ಲ ಮಕ್ಕಳು ಮತ್ತು ಶಿಕ್ಷಕರು ಪಾಲ್ಗೊಳ್ಳಬೇಕಾಗಿತ್ತು. ವಿವಿಧ ಸಾಹಿತಿಗಳಿಂದ ಮಕ್ಕಳಿಗೆ ಸಾಹಿತ್ಯದ ಮಾರ್ಗದರ್ಶನ ಅಗತ್ಯವಾಗಿ ಕೈಕೊಳ್ಳಬೇಕು ಎಂದು ಅತಿಥಿಗಳಾಗಿ ಆಗಮಿಸಿದ ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಮಹಾಂತೇಶ ಮಮದಾ ಪೂರ, ಜಿ.ಪಂ. ಮಾಜಿ ಸದಸ್ಯ ಎಂ.ಬಿ. ಹಂಗರಗಿ ಮತ್ತು ಶಿವಯೋಗಮಂದಿರದ ಆಡಳಿತಾಧಿಕಾರಿ ಎ.ಬಿ.ಇಟಗಿ ಸಂಘಟಕರಿಗೆ ಸಲಹೆ ನೀಡಿದರು.ಜಿಲ್ಲಾ ಮಕ್ಕಳ ಸಾಹಿತ್ಯ ಸಮಾಗಮದ ಅಧ್ಯಕ್ಷ ಗುರುಸ್ವಾಮಿ ಗಣಾಚಾರಿ ಸಮ್ಮೇಳನ ಉದ್ಘಾಟಿಸಿದರು. ಇದೇ ಸಂದರ್ಭದಲ್ಲಿ ಡಾ.ಶಿವಾನಂದ ಸರಗಣಾಚಾರಿ ಅವರನ್ನು ಸನ್ಮಾನಿಸಲಾಯಿತು.ಜಿಲ್ಲಾ ಮಕ್ಕಳ ಸಾಹಿತ್ಯ ಸಮಾಗಮದ ಗೌರವಾಧ್ಯಕ್ಷ ಅನ್ನದಾನಿ ಹಿರೇಮಠ ಅಧ್ಯಕ್ಷತೆ ವಹಿಸಿದ್ದರು. ಚಂದ್ರಕಾಂತ ತಾಳಿಕೋಟಿ ಅವರು, `ಅಧ್ಯಯನದಲ್ಲಿ ಏಕಾಗ್ರತೆ ಮತ್ತು ವೈ.ಸುಧೀಂದ್ರ ಮಕ್ಕಳು ಹಾಗೂ ಶಿಸ್ತು~ ಕುರಿತು ಉಪನ್ಯಾಸ ನೀಡಿದರು.10ನೆಯ ಮಕ್ಕಳ ಸಾಹಿತ್ಯ ಸಮಾಗಮದ ಸಮ್ಮೇಳನವನ್ನು ತಾಲ್ಲೂಕಿನ ನಂದಿಕೇಶ್ವರ ಗ್ರಾಮದಲ್ಲಿ ಅದ್ದೂರಿಯಾಗಿ ನಡೆಸುವಂತೆ ಜಿ.ಪಂ. ಸದಸ್ಯ  ಎಂ.ಬಿ. ಹಂಗರಗಿ ಸಂಘಟಕರಿಗೆ ಹೇಳಿದರು.ವೆಂಕಟೇಶ ಇನಾಂದಾರ, ವಿ.ಎಸ್. ಪಾಟೀಲ, ವಿ.ಎಸ್. ಶಿರಹಟ್ಟಿಮಠ, ಅಣ್ಣಾಜಿ ಫಡತಾರೆ, ಎಸ್.ಎಸ್. ಹಳ್ಳೂರ, ವೈ.ಆರ್. ಭೂತಾಳಿ ಜಿಲ್ಲೆಯ ಮಕ್ಕಳ ಸಮಾಗಮದ ಪದಾಧಿಕಾರಿಗಳು ಮತ್ತು ವಿವಿಧ ತಾಲ್ಲೂಕಿನ ಅಧ್ಯಕ್ಷರು ಸಮಾರಂಭದಲ್ಲಿ ಹಾಜರಿದ್ದರು.ಜಿಲ್ಲಾ ಮಕ್ಕಳ ಸಾಹಿತ್ಯ ಸಮ್ಮೇಳನದಲ್ಲಿ ಮಕ್ಕಳ ಕೊರತೆ ಮತ್ತು ವಿವಿಧ ಗೋಷ್ಠಿಗಳ ಕೊರತೆ ಕಂಡು ಬಂದಿತು. ಕೇವಲ ಶಿವಯೋಗಮಂದಿರ ಪ್ರೌಢ ಶಾಲೆ ಯ ವಸತಿ ನಿಲಯದ ವಿದ್ಯಾರ್ಥಿಗಳು ಮಾತ್ರ ಸಮಾ ರಂಭದಲ್ಲಿ ಹಾಜರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.