ಭಾನುವಾರ, ಏಪ್ರಿಲ್ 11, 2021
29 °C

ಬಾಗಲಕೋಟೆ: ವೀರ ಸಿಂಧೂರ ಲಕ್ಷ್ಮಣನ ಸ್ಮರಣೋತ್ಸವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಾಗಲಕೋಟೆ:  ಮಹರ್ಷಿ ವಾಲ್ಮೀಕಿ ನಾಯಕ ಮಹಾ ಸಂಘದ ಜಿಲ್ಲಾ ಘಟಕದಿಂದ ಗದ್ದನಕೇರಿ ಕ್ರಾಸ್ ಬಳಿ ಇರುವ ಲಡ್ಡು ಮುತ್ಯಾನ ಕಲ್ಯಾಣ ಮಂಟಪದಲ್ಲಿ ವೀರ ಸಿಂಧೂರ ಲಕ್ಷ್ಮಣ ಸ್ಮರಣೋತ್ಸವ ಅಂಗವಾಗಿ ಉಪನ್ಯಾಸ ಕಾರ್ಯಕ್ರಮ ನಡೆಯಿತು.ಮಹರ್ಷಿ ವಾಲ್ಮೀಕಿ ನಾಯಕ ಮಹಾ ಸಂಘದ ಹುನಗುಂದ ತಾಲ್ಲೂಕು ಘಟಕದ ಅಧ್ಯಕ್ಷ ಬಿ.ಎಚ್. ಗುಜ್ಜಲ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಭೀಮಶಿ ತಳವಾರ, ಚನ್ನಬಸಪ್ಪ ಮುತ್ತೂರ, ಕೃಷ್ಣಾ ಜಾಲಿಹಾಳ, ಸುರೇಶ ಕೊಡತಗೇರಿ, ರಮೇಶ ತಳವಾರ, ನಿಂಗಪ್ಪ ದಿವಟಗಿ, ಅಯ್ಯಪ್ಪ ತಳವಾರ, ಎಚ್.ಎಸ್.ರಾಜನಾಳ, ಜಿಲ್ಲಾಧ್ಯಕ್ಷ ವೆಂಕಟೇಶ ಲೋಕಾಪುರ, ಉಪಾಧ್ಯಕ್ಷ ರಾಯನಗೌಡ ಗೌಡರ, ಸಮಾಜದ ಯುವ ಮುಖಂಡ ಬಸವರಾಜ ಹೊನ್ಯಾಳ ಮತ್ತಿತರರು ಉಪಸ್ಥಿತರಿದ್ದರು.ಪ್ರಧಾನ ಕಾರ್ಯದರ್ಶಿ ಆರ್.ಎ.ಪೂಜಾರ ಮಹತ್ವದ ನಿರ್ಣಯಗಳನ್ನು ಸಭೆಯಲ್ಲಿ ಮಂಡಿಸಿದರು.

ಸಂಭ್ರಮದ ಆಚರಣೆವೀರಸಿಂಧೂರ ಲಕ್ಷ್ಮಣ ಜಯಂತಿಯನ್ನು ಬಾಗಲಕೋಟೆ ನವನಗರದ ಸೆಕ್ಟರ್ ನಂ. 50ರಲ್ಲಿರುವ ವಾಲ್ಮೀಕಿ ಸಮಾಜದ ಸಮುದಾಯ ಭವನದಲ್ಲಿ ಆಚರಿಸಲಾಯಿತು. ವಾಲ್ಮೀಕಿ ಸಮಾಜದ ಮುಖಂಡ ವೈ.ಕೆ.ನಾಯಕ ಮಾತನಾಡಿ, ಬ್ರಿಟಿಷರ ಕುತಂತ್ರದ ನೀತಿ ವಿರುದ್ಧ ಹೋರಾಟದ ಕಿಚ್ಚು ಹಬ್ಬಿಸಿದ ವೀರಸಿಂಧೂರ ಲಕ್ಷ್ಮಣನ ವಂಶಸ್ಥರ ಬಾಳು ದುಸ್ತರವಾಗಿದೆ ಎಂದು ಹೇಳಿದರು.

ಸಮಾಜ ಬಾಂಧವರು ಸಿಂಧೂರ ಲಕ್ಷ್ಮಣನ ಮನೆತನದ ಕುಟುಂಬದ ನೆರವಿಗೆ ಬರಬೇಕಾದ ಅಗತ್ಯವಿದೆ ಎಂದು ತಿಳಿಸಿದರು.ರಾಜು ನಾಯಕ ಮಾತನಾಡಿ, ವಾಲ್ಮೀಕಿ ಸಮಾಜಕ್ಕೆ ಕೇಂದ್ರ ಸರ್ಕಾರ ನೀಡುತ್ತಿರುವ ಶೇ 7.5ರಷ್ಟು ಮೀಸಲನ್ನು  ರಾಜ್ಯದಲ್ಲೂ ಜಾರಿಮಾಡಬೇಕು ಎಂದು ಆಗ್ರಹಿಸಬೇಕಾಗಿದೆ ಎಂದರು.ಸುರೇಂದ್ರ ನಾಯಕ, ಜಿಲ್ಲಾ ಘಟಕದ ಅಧ್ಯಕ್ಷ ಶಂಭುಗೌಡ ಪಾಟೀಲ, ಮುತ್ತಪ್ಪ ಪೂಜಾರಿ ವೆಂಕಟೇಶ ಪೂಜಾರಿ, ದ್ಯಾಮಣ್ಣ ಗಾಳಿ, ಸಿದ್ದಪ್ಪ ತಳವಾರ, ಲಕ್ಷ್ಮಣ ಮಾಳಗಿ, ಶ್ರಿಶೈಲ ಅಂಟಿನ, ಶಂಕರ ಗಲ್ಲಗ, ಮಹಾಂತೇಶ ತಳವಾರ, ಹುನಗುಂದ ತಾಲ್ಲೂಕು ನೌಕರ ಸಂಘದ ಅಧ್ಯಕ್ಷ ಜಿ.ಬಿ.ಗುಡದನ್ನವರ, ಸಂಗಮೇಶ ಊಟಿ, ಸಂಗಮೇಶ ವಾಲಿ, ಭೀಮಪ್ಪ ತಳವಾರ, ಮಾರುತಿ ಕರೆನ್ನವರ, ಚನ್ನಬಸಪ್ಪ ಮುತ್ತೂರ, ಷಣ್ಮುಖ ಗುಡದಾರ, ಮಲ್ಲಪ್ಪ ನಾಯಕ, ಶ್ರಿಶೈಲ ಸನದಿ, ಸತ್ಯಪ್ಪ ಗುಬ್ಬಿ, ಹನಮಂತ ತಳವಾರ, ನಿಂಗಪ್ಪ ಕ್ಯಾದಿಗೇರಿ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.