ಬಾನಂಗಳದಲ್ಲಿ ಹಾರಾಡಿದ ಮಾದರಿ ವಿಮಾನ

ಗದಗ: ಸ್ಥಳೀಯ ವಿದ್ಯಾದಾನ ಸಮಿತಿ ಮೈದಾನದಲ್ಲಿ ಮಂಗಳವಾರ ವಿಮಾನಗಳು ಹಾರಾಡ ತೊಡಗಿದವು. ವೈಮಾನಿಕ ಪರೀಕ್ಷಾ ತಾಣಕ್ಕಿಂತ ಕಡಿಮೆ ಇಲ್ಲದಂತೆ ಏಳು ಮಿನಿ ಮಾದರಿ ವಿಮಾನಗಳು ಹಾರಾಡಿ ವಿದ್ಯಾರ್ಥಿಗಳು ಹಾಗೂ ಶಿಕ್ಷಕರನ್ನು ಹೊಸದೊಂದು ಲೋಕಕ್ಕೆ ಕೊಂಡೊಯ್ದವು.
ಧಾರವಾಡದ ಎಸ್.ಡಿ.ಎಂ.ಕಾಲೇಜು ಆಫ್ ಎಂಜಿನಿಯರಿಂಗ್ ಅಂಡ್ ಟೆಕ್ನಾಲಜಿಯ ಏರೋಟಿಂ ಹಾಗೂ ಬೆಳಗಾವಿಯ ಎರೋಸ್ಪೋಟ್ರ ಹಾಬಿ ಕ್ಲಬ್ ಆಶ್ರಯದಲ್ಲಿ ವಿದ್ಯಾದಾನ ಸಮಿತಿಯ ಮೈದಾನದಲ್ಲಿ ವಿದ್ಯಾರ್ಥಿಗಳಲ್ಲಿ ವಿಮಾನಗಳ ರಚನೆ, ಹಾರಾಟ ಹಾಗೂ ಕ್ಷೇತ್ರದಲ್ಲಿರುವ ಉದ್ಯೋಗ ಅವಕಾಶಗಳ ಕುರಿತು ಜಾಗೃತಿ ಮೂಡಿಸಲು ಮಿನಿ ಮಾದರಿ ವಿಮಾನಗಳ ಹಾರಾಟದ ಪ್ರಾತ್ಯಕ್ಷಿಕೆ ಏರ್ಪಡಿಸಲಾಗಿತ್ತು.
ವಿದ್ಯಾದಾನ ಸಮಿತಿಯ ಹಳೆಯ ವಿದ್ಯಾರ್ಥಿ ಹಾಗೂ ಧಾರವಾಡದ ಎಸ್.ಡಿ.ಎಂ.ಕಾಲೇಜು ಆಫ್ ಎಂಜನಿಯರಿಂಗ್ ಕಾಲೇಜಿನಲ್ಲಿ ಅಧ್ಯಯನ ಮಾಡುತ್ತಿರುವ ಏರೋಟಿಂ ಸದಸ್ಯ ಸಚಿನ್ ರೇವಣಕರ ಅವರ ಸಂಯೋಜನೆಯಲ್ಲಿ ಬೆಳಗಾವಿಯ ಏರೋಸ್ಪೋಟ್ರ ಹಾಬಿ ಕ್ಲಬ್ ಪ್ರೊ. ಅರ್ಜುನ ಬಿಲಾವರ ಹಾಗೂ ಅವರ ಪುತ್ರ ಶುಭಂ ಬಿಲಾವರ ಅವರು ಏಳು ರೀತಿಯ ವೈಮಾನಿಕ ಮಾದರಿಗಳನ್ನು ಪ್ರದರ್ಶಿಸಿದರು.
ಆರ್.ಸಿ.ಬ್ಯಾನರ ಫ್ಲೈಯಿಂಗ್, ಕಂಟ್ರೋಲ್ ಲೈನ್ ಸೊಲೊ, ಕಂಟ್ರೋಲ್ ಲೈನ್ ಏರೋಬೆಟಿಕ್, ರೇಡಿಯೋ ಕಂಟ್ರೋಲ್ ಗ್ಲಿಡ್ಡರ್, ಡಿಸ್ಕ್ ಫ್ಲೈಯಿಂಗ್, ರೇಡಿಯೊ ಕಂಟ್ರೋಲ್ ಪವರ್ ಏರೋಬೆಟಿಕ್ ಮತ್ತು ಕಂಬ್ಯಾಕ್ಟ್ ಫ್ಲೈಯಿಂಗ್ ಪ್ರದರ್ಶನಗಳು ವಿದ್ಯಾರ್ಥಿಗಳಲ್ಲಿ ವಿಮಾನದ ಹಾರಾಟ ಮತ್ತು ಭೂಸ್ಪರ್ಶದ ಕುರಿತು ಹೊಸ ಅನುಭವ ಉಂಟು ಮಾಡಿದವು.
ತಂಡದ ಮುಖ್ಯಸ್ಥ ಪ್ರೊ. ಅರ್ಜುನ ಬಿಲಾವರ ಮಾತನಾಡಿ, ಉತ್ತರ ಕರ್ನಾಟಕದ ವಿದ್ಯಾರ್ಥಿಗಳಿಗೆ ಏರೋನಾಟಿಕ್ ಎಂಜಿನಿಯರಿಂಗ್, ಪೈಲೆಟ್, ಏರ್ಫೋರ್ಸ್ ಕ್ಷೇತ್ರಗಳ ಬಗ್ಗೆ ಆಸಕ್ತಿ ಮೂಡಿಸಿ ಮುಂದೆ ಈ ಕ್ಷೇತ್ರಗಳಲ್ಲಿ ಪರಿಣತಿ ಮತ್ತು ಸಾಧನೆ ಕೈಗೊಳ್ಳಲು ಪ್ರೇರಪಣೆ ನೀಡುವ ಉದ್ದೇಶ ಇದೆ ಎಂದು ಹೇಳಿದರು.
ವಿದ್ಯಾದಾನ ಸಮಿತಿಯ ಕಾರ್ಯದರ್ಶಿ ಶ್ರೀನಿವಾಸ ಹುಯಿಲಗೋಳ ಮಾತನಾಡಿದರು.
ತಂಡದಲ್ಲಿ ಪ್ರವೀಣ ಗಾಂವಕರ, ನಿಖಿಲ ಚೌಧರಿ, ನಿತೇಶ ನಂದಣ್ಣವರ, ಸುಮಂತ ಕುಮಾರ, ನಿಹಾಂಕ ಜೈನ, ವಿಘ್ನೇಶ ಪಾಲನಕರ, ವೆಂಕಟೇಶ ಕುಲಕರ್ಣಿ ಪಾಲ್ಗೊಂಡು ಮಿಥೆಲ್ ಹಾಗೂ ಕಚ್ಚಾತೈಲವನ್ನು ಇಂಧನವನ್ನಾಗಿ ಬಳಸಿ ವಿವಿಧ ಶೈಲಿಯ ವಿಮಾನಗಳನ್ನು ಆಕಾಶದಲ್ಲಿ ಹಾರಾಡಿಸಿದರು.
ಸಮಿತಿಯ ಸದಸ್ಯರಾದ ಶುಭಲಕ್ಷ್ಮಿ ಹುಯಿಲಗೋಳ, ಆಡಳಿತಾಧಿಕಾರಿ ಬಿ.ಎಸ್.ಜಾಧವ, ಪ್ರಾಚಾರ್ಯ ಎಂ.ಸಿ. ಕಟ್ಟಿಮನಿ, ಬಿ.ಎಲ್.ಚವ್ಹಾಣ, ಎಸ್.ಸಿ.ಹೆದ್ದೂರಿ, ಉಪಪ್ರಾಚಾರ್ಯ ಎನ್.ಎಸ್.ಬಟ್ಟೂರ, ಎಸ್.ಎಂ. ಮುಂಡರಗಿ ಹಾಜರಿದ್ದರು.x
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.