ಭಾನುವಾರ, ಜನವರಿ 26, 2020
25 °C
₨ 3.5 ಲಕ್ಷ ನಗದು; 27 ತೊಲ ಚಿನ್ನ

ಬಾಯಿಗೆ ಫೆವಿಕ್ವಿಕ್‌ ಹಚ್ಚಿ ಒಡವೆ ಕಳವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೊಸಪೇಟೆ: ಮನೆಯಲ್ಲಿದ್ದ ಒಂಟಿ ಮಹಿಳೆಯ ಬಾಯಿಗೆ ಫೆವಿಕ್ವಿಕ್‌ ಹಚ್ಚಿದ ಕಳ್ಳರು ₨ 3.5 ಲಕ್ಷ ನಗದು ಸೇರಿ ₨ 7.5 ಲಕ್ಷ ಮೌಲ್ಯದ ಚಿನ್ನಾಭರಣ ಕಳವು ಮಾಡಿರುವ ಘಟನೆ ನಗರದಲ್ಲಿ ಮಂಗಳವಾರ ಮಧ್ಯರಾತ್ರಿ ನಡೆದಿದೆ.ಕಾಲೇಜು ರಸ್ತೆಯಲ್ಲಿರುವ ಚನ್ನಬಸಪ್ಪ ರೆಡ್ಡಿ ಅವರ ಮನೆಯಲ್ಲಿ ಪತ್ನಿ ಶಾರದಮ್ಮ ಒಬ್ಬರೇ ಇದ್ದರು. ರಾತ್ರಿ 11.30ರ ವೇಳೆಗೆ ಕಳ್ಳರ ತಂಡ ಬಾಗಿಲು ಬಡಿದಿದೆ. ಬಾಗಿಲು ತೆರೆಯುತ್ತಿದ್ದಂತೆಯೇ ಅವರ ಬಾಯಿಗೆ ಫೆವಿಕ್ವಿಕ್‌ ಅಂಟಿಸಿ, ಕೂಗಿಕೊಳ್ಳದಂತೆ ಮಾಡಿದ ಕಳ್ಳರ ತಂಡ, ನಕಲಿ ಕೀಲಿಕೈ ಬಳಸಿ ಮನೆಯಲ್ಲಿದ್ದ ಅಲ್ಮೇರಾ­ಗಳ ಬೀಗ ತೆರೆದು ಅವುಗಳಲ್ಲಿದ್ದ 27 ತೊಲ ಚಿನ್ನಾಭರಣ, ನಗದು ಕದ್ದೊಯ್ದಿದ್ದಾರೆ.ಹೊರ ಹೋದ ಕಳ್ಳರು ಮನೆಯ ಮಹಡಿಯ ಮೇಲೆ ಕೆಲವು ಚಿನ್ನದ ಆಭರಣಗಳು ಹಾಗೂ ₨ 40,000 ನಗದನ್ನು ಬಿಟ್ಟು ಹೋಗಿದ್ದಾರೆ.ಬೆಳಿಗ್ಗೆ ಶಾರದಮ್ಮ ಅವರನ್ನು ಖಾಸಗಿ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ ನಂತರವಷ್ಟೇ ಅವರಿಗೆ ಮಾತನಾಡಲು ಸಾಧ್ಯವಾಯಿತು. ನಾಲ್ವರು ಕಳ್ಳರ ಪೈಕಿ ಮೂವರು ಹಿಂದಿಯಲ್ಲಿ ಹಾಗೂ ಒಬ್ಬ ಕನ್ನಡದಲ್ಲಿ ಮಾತ­ನಾಡುತ್ತಿದ್ದ ಎಂದು ಅವರು ಪೊಲೀಸರಿಗೆ ತಿಳಿಸಿದ್ದಾರೆ. ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರತಿಕ್ರಿಯಿಸಿ (+)