ಶುಕ್ರವಾರ, ಮೇ 14, 2021
35 °C

ಬಾರದ `ಭಾಗ್ಯ ಲಕ್ಷ್ಮಿ' ಬಾಂಡ್

ವಿಶೇಷ ವರದಿ / ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಾಗಲಕೋಟೆ: ಹೆಣ್ಣು ಮಕ್ಕಳ ಶ್ರೇಯೋಭಿವೃದ್ಧಿಗಾಗಿ ರಾಜ್ಯ ಸರ್ಕಾರವು 2006-07ರಲ್ಲಿ ಜಾರಿಗೊಳಿಸಿರುವ `ಭಾಗ್ಯಲಕ್ಷ್ಮಿ' ಯೋಜನೆಯ ಜಿಲ್ಲೆಯ 4139 ಫಲಾನುಭವಿಗಳಿಗೆ ಇದುವರೆಗೂ ಬಾಂಡ್ ವಿತರಣೆಯಾಗಿಲ್ಲ.ಯೋಜನೆ ಜಾರಿಯಾದ ಬಳಿಕ ಜಿಲ್ಲೆಯಲ್ಲಿ ಇದುವರೆಗೆ 64,186 ಫಲಾನುಭವಿಗಳಿಗೆ ಎಲ್‌ಐಸಿ ವತಿಯಿಂದ `ಭಾಗ್ಯಲಕ್ಷ್ಮಿ' ಬಾಂಡ್ ವಿತರಿಸಲಾಗಿದೆ. ಆದರೆ, 2006-07ನೇ ಸಾಲಿನ 71 ಬಾಂಡ್, 2008-09ನೇ ಸಾಲಿನ 194, 2009-10ನೇ ಸಾಲಿನ 24, 2011-12ನೇ ಸಾಲಿನ 1350 ಹಾಗೂ 2012-13ನೇ ಸಾಲಿನ 2500 ಫಲಾನುಭವಿಗಳ ಭಾಗ್ಯಲಕ್ಷ್ಮಿ ಬಾಂಡ್ ಇನ್ನೂ ವಿತರಣೆಯಾಗಿಲ್ಲ.ಬಾಂಡ್ ವಿತರಣೆಯಾಗದೇ ಇರುವುದಕ್ಕೆ ಕಾರಣ ಕುರಿತು `ಪ್ರಜಾವಾಣಿ'ಗೆ ಮಾಹಿತಿ ನೀಡಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಎಸ್.ಎಚ್.ಪಾಟೀಲ, `ಕೆಲವು ಫಲಾನುಭವಿಗಳ ಹೆಸರು ಎರಡೆರಡು ಬಾರಿ ಮುದ್ರಣವಾಗಿರುವುದರಿಂದ ಮತ್ತು ಸರ್ಕಾರ ಎಲ್‌ಐಸಿಗೆ ಡಿಪಾಜಿಟ್ ನೀಡುವಲ್ಲಿ ಆದ ವಿಳಂಬದಿಂದ 4139 ಬಾಂಡ್ ವಿತರಣೆಯಾಗದೇ ಬಾಕಿ ಉಳಿದಿವೆ.ಅದರಲ್ಲಿ 2006-07ನೇ ಸಾಲಿನ 71 ಮತ್ತು 2009-10ನೇ ಸಾಲಿನ 194 ಬಾಂಡ್ ಬಹುತೇಕ ರದ್ದಾಗಿವೆ. ಉಳಿದ ಬಾಂಡ್‌ಗಳ ವಿತರಣೆಗೆ ಕ್ರಮ ಕೈಗೊಳ್ಳಲಾಗುವುದು' ಎಂದರು.ಎರಡು ವರ್ಷವಾದರೂ ಬಾಂಡ್ ಸಿಗದೇ ಇರುವ ಕುರಿತು `ಪ್ರಜಾವಾಣಿ'ಯೊಂದಿಗೆ ಮಾತನಾಡಿದ ಹುನಗುಂದದ ಫಲಾನುಭವಿ ತಾಯಿ ಸುನೀತ, `ನನಗೆ ಹೆಣ್ಣು ಮಗು ಜನನವಾದ ತಕ್ಷಣ ಭಾಗ್ಯಲಕ್ಷ್ಮಿ ಬಾಂಡ್‌ಗೆ ಇಲಾಖೆ ಅಧಿಕಾರಿಗಳು ಕೇಳಿದ ದಾಖಲೆಗಳ ಸಹಿತ ಅರ್ಜಿ ಸಲ್ಲಿಸಿದರೂ ಇದುವರೆಗೆ ನೀಡಿಲ್ಲ' ಎಂದು ಹೇಳಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.