ಶನಿವಾರ, ಜನವರಿ 18, 2020
26 °C

ಬಾಲಕಿ ಅತ್ಯಾಚಾರ: ಭಾರತೀಯನಿಗೆ 6 ವರ್ಷ ಜೈಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೆಲ್ಬರ್ನ್ (ಪಿಟಿಐ): ಪಾನಮತ್ತ 17 ವರ್ಷದ ಶಾಲಾ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಭಾರತೀಯ ಟ್ಯಾಕ್ಸಿ ಚಾಲಕ ನಿತಿನ್ ರಾಣಾ(30) ಎಂಬಾತನಿಗೆ ಆಸ್ಟ್ರೇಲಿಯಾ ಕೋರ್ಟ್‌ ಶುಕ್ರವಾರ 6 ವರ್ಷ ಜೈಲು ಶಿಕ್ಷೆ ವಿಧಿಸಿದೆ.ಪ್ರಕರಣದ ವಿಚಾರಣೆ ನಡೆಸಿ ರಾಣಾಗೆ ಶಿಕ್ಷೆ ವಿಧಿಸಿದ ಪ್ರಾಂತೀಯ ಕೋರ್ಟ್ ನ್ಯಾಯಾಧೀಶೆ ವೆಂಡಿ ವಿಲ್ಮೊತ್, ಅಪರಾಧಿಗೆ 4 ವರ್ಷ ಪೆರೋಲ್ ನೀಡಬಾರದು. ಜತೆಗೆ, 15 ವರ್ಷ ಲೈಂಗಿಕ ಅಪರಾಧಿಗಳ ದಾಖಲೆಯಲ್ಲಿ  ರಾಣಾ ಹೆಸರನ್ನು ಸೇರಿಸಬೇಕು ಎಂದು ತೀರ್ಪು ನೀಡಿದರು.

ಕಳೆದ ನವೆಂಬರ್ 14ರಂದು ಸ್ನೇಹಿತರೊಬ್ಬರ ಹುಟ್ಟು­ಹಬ್ಬದ ಪಾರ್ಟಿಯಲ್ಲಿ ಮಿತಿಮೀರಿ ಮದ್ಯಪಾನ ಮಾಡಿ, ಟ್ಯಾಕ್ಸಿ ಏರಿದ್ದ ಬಾಲಕಿ ಮೇಲೆ ರಾಣಾ ಅತ್ಯಾಚಾರ ಎಸಗಿದ್ದ.2008ರಲ್ಲಿ ಆಸ್ಟ್ರೇಲಿಯಾಕ್ಕೆ ತೆರಳಿದ್ದ ಹೈದರಾಬಾದ್‌ನ ನಿತಿನ್ ರಾಣಾ, ವಾಣಿಜ್ಯ ಪದವೀಧರನಾಗಿದ್ದು,  ಇದಕ್ಕೂ ಮುಂಚೆ ಹಲವು ಬಹುರಾಷ್ಟ್ರೀಯ ಕಂಪೆನಿಗಳಲ್ಲಿ ಕಾರ್ಯ­ನಿರ್ವಹಿಸಿದ್ದ ಎಂದು ಮಾಧ್ಯಮಗಳು ವರದಿ ಮಾಡಿವೆ.

ಪ್ರತಿಕ್ರಿಯಿಸಿ (+)