ಮುಂಬೈ(ಐಎಎನ್ಎಸ್): 14 ವರ್ಷದ ಬಾಲಕಿಯ ಹೊಟ್ಟೆಯಲ್ಲಿ 2.8 ಕೆ.ಜಿ ಭಾರದ, ಅಪಾಯಕಾರಿಯಲ್ಲದ ಗಡ್ಡೆಯನ್ನು ಹಾಗೂ 300 ಮಿ.ಲೀ ನಷ್ಟು ದ್ರವವನ್ನು ಶಸ್ತ್ರಕ್ರಿಯೆ ಮೂಲಕ ಯಶಸ್ವಿಯಾಗಿ ತೆಗೆಯಲಾಗಿದೆ.

ನಗರಸಭೆ ಆಸ್ಪತ್ರೆಯಲ್ಲಿ ಕಳೆದ ವಾರ ಈ ಅಂಡಾಶಯ ಶಸ್ತ್ರಕ್ರಿಯೆ ನಡೆಸಲಾಗಿದ್ದು ಬಾಲಕಿ ಸಾನಾ ಎಸ್. ಶೇಕ್ ತೀವ್ರ ಬೆನ್ನು ನೋವು ಹಾಗೂ ಕಿಬ್ಬೊಟ್ಟೆ ನೋವಿನಿಂದ ಬಳಲುತ್ತಿದ್ದಳೆಂದು ಎಲ್ಟಿಎಮ್ಜಿ ಸಿಯಾನ್ ಆಸ್ಪತ್ರೆಯಲ್ಲಿ ಶಸ್ತ್ರಕ್ರಿಯೆ ನಡೆಸಿದ ನಿರಂಜನ ಚೌಹಾಣ್ ತಿಳಿಸಿದ್ದಾರೆ.

ಸಾನಾ ಹೊಟ್ಟೆಯಲ್ಲಿದ್ದ ಈ ಅಪಾಯಕಾರಿಯಲ್ಲದ ಗಡ್ಡೆ 1.5 ಅಡಿ ಉದ್ದವಿತ್ತು. 38 ವಾರಗಳ ಮಗುವಿನ ಗಾತ್ರದಷ್ಟಿತ್ತು. ಈಗ ಆಕೆ ಯಾವುದೇ ಸಮಸ್ಯೆ ಎದುರಿಸದೆ ಚೇತರಿಸಿಕೊಳ್ಳುತ್ತಿದ್ದಾಳೆ. ಋತು ಚಕ್ರಕ್ಕಿಂತ ಮೊದಲು ಈ ಸಮಸ್ಯೆ ಕಾಣಿಸಿಕೊಳ್ಳುವುದು ಅತ್ಯಂತ ಕಡಿಮೆ. ಜಗತ್ತಿನಲ್ಲಿ ಕೇವಲ ಒಂಬತ್ತು ಇಂಥ ಪ್ರಕರಣಗಳು ದಾಖಲಾಗಿವೆ. ಅವುಗಳಲ್ಲಿ ಶಸ್ತ್ರಕ್ರಿಯೆಯ ಮೂಲಕ ತೆಗೆಯಲಾದ ಅತಿದೊಡ್ಡ ಗಡ್ಡೆ ಇದಾಗಿದೆ. ಮತ್ತು ಭಾರತದಲ್ಲಿ ದಾಖಲಾಗಿರುವ ಮೊದಲನೆಯ ಪ್ರಕರಣ ಇದು ಎಂದು ಅವರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.