ಬಾಲ್‌ಪೂಲ್: ಸುದಿನ್‌ಗೆ ಗೆಲುವು

7

ಬಾಲ್‌ಪೂಲ್: ಸುದಿನ್‌ಗೆ ಗೆಲುವು

Published:
Updated:

ಬೆಂಗಳೂರು: ಕರ್ನಾಟಕ ರಾಜ್ಯ ಬಾಲ್‌ಪೂಲ್ ಅಂಗಳದಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಸುದಿನ್ ಅವರು 5-4ರಲ್ಲಿ ನದೀಮ್ ಅಜೀಜ್ ವಿರುದ್ದ ಗೆಲುವು ಸಾಧಿಸಿದರು.  ಇದೇ ಗುಂಪಿನ ಇತರ ಪಂದ್ಯಗಳಲ್ಲಿ ನದೀಮ್ ಅಜೀಜ್ 5-0ರಲ್ಲಿ ದರ್ಶನ್ ರಾವ್ ಮೇಲೂ, ಸುದಿನ್ 5-1ರಲ್ಲಿ ದರ್ಶನ್ ರಾವ್ ವಿರುದ್ಧವೂ, ಪ್ರಭಾಕರ್ 5-3ರಲ್ಲಿ ನಖಿಲ್ ಪೈಸಿ ಮೇಲೂ, ನಿಖಿಲ್ ಪೈಸಿ 5-1ರಲ್ಲಿ ನದೀಮ್ ಅಜೀಜ್ ವಿರುದ್ಧವೂ, ಪ್ರಭಾಕರ್ 5-1ರಲ್ಲಿ ದರ್ಶನ್ ರಾವ್ ಮೇಲೂ, ಪ್ರಭಾಕರ್ 5-1ರಲ್ಲಿ ನದೀಮ್ ಅಜೀಜ್ ವಿರುದ್ಧವೂ, ನಿಖಿಲ್ ಪೈಸಿ 5-4ರಲ್ಲಿ ಸುದಿನ್ ಮೇಲೂ, ನಿಖಿಲ್ ಪೈಸಿ 5-1ರಲ್ಲಿ ದರ್ಶನ್ ರಾವ್ ವಿರುದ್ಧವೂ ಹಾಗೂ ಪ್ರಭಾಕರ್ 5-1ರಲ್ಲಿ ಸುದಿನ್ ಮೇಲೂ ಗೆಲುವು ಪಡದರು.‘ಎನ್’ ಗುಂಪಿನ ಪಂದ್ಯಗಳಲ್ಲಿ ಸುಮಂತ್ 5-4ರಲ್ಲಿ ಎಸ್. ನಟರಾಜ್ ಮೇಲೂ, ಅಮಿತ್ ಭೂಷಣ್ 5-3ರಲ್ಲಿ ರಾಜನ್ ರಾಡಿಕ್ಸ್ ವಿರುದ್ಧವೂ, ರಾಜನ್ ರಾಡಿಕ್ಸ್ 5-2ರಲ್ಲಿ ಸೂರಜ್ ಸಿಂಗ್ ಮೇಲೂ, ಅಮಿತ್ ಭೂಷಣ್ 5-0ರಲ್ಲಿ ಎಸ್. ನಟರಾಜ್ ವಿರುದ್ಧವೂ, ಸೂರಜ್ ಸಿಂಗ್ 5-3ರಲ್ಲಿ ಸುಮಂತ್ ಮೇಲೂ, ರಾಜನ್ ರಾಡಿಕ್ಸ್ 5-1ರಲ್ಲಿ ಎಸ್. ನಟರಾಜ್ ವಿರುದ್ಧವೂ, ಅಮಿತ್ ಭೂಷಣ್ 5-0ರಲ್ಲಿ ಸುಮಂತ್ ವಿರುದ್ಧವೂ, ರಾಜನ್ ರಾಡಿಕ್ಸ್ 5-1ರಲ್ಲಿ ಸುಮಂತ್ ಮೇಲೂ, ಸೂರಜ್‌ಸಿಂಗ್ 5-1ರಲ್ಲಿ ಎಸ್. ನಟರಾಜ್ ವಿರುದ್ಧವೂ, ಅಮಿತ್ ಭೂಷಣ್ 5-2ರಲ್ಲಿ ಸೂರಜ್ ಸಿಂಗ್ ವಿರುದ್ಧವೂ ಗೆಲುವು ಸಾಧಿಸಿದರು.‘ಜೆ’ ಗುಂಪಿನ ಪಂದ್ಯದಲ್ಲಿ ಜಾಸಿಮ್ ತಾವಿನ್ 5-0ರಲ್ಲಿ ಶಂಕರ್‌ಲಿಂಗಮ್ ಮೇಲೂ, ಕಾರ್ಲ್ ಅಲ್ಪೋನ್ಸೊ 5-3ರಲ್ಲಿ ಮಾರುತಿ ರಾಮ್ ವಿರುದ್ಧವೂ, ಜಾಸಿಮ್ ತಾವಿನ್ 5-0ರಲ್ಲಿ ಮಾರುತಿ ರಾಮ್ ಮೇಲೂ, ಶಂಕರ್‌ಲಿಂಗಮ್ 5-0ರಲ್ಲಿ ಕಾರ್ಲ್ ಅಲ್ಪೋನ್ಸೊ ವಿರುದ್ಧವೂ, ಜಾಸೀಮ್ ತಾವಿನ್ 5-4ರಲ್ಲಿ ಕಾರ್ಲ್ ಅಲ್ಪೋನ್ಸೊ ಮೇಲೂ, ಮಾರುತಿ ರಾಮ್ 5-4ರಲ್ಲಿ ಶಂಕರ್‌ಲಿಂಗಮ್ ವಿರುದ್ಧವೂ ಜಯ ಸಾಧಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry