ಮಂಗಳವಾರ, ಸೆಪ್ಟೆಂಬರ್ 17, 2019
24 °C

ಬಾಲ್ ಬ್ಯಾಡ್ಮಿಂಟನ್: ಆಳ್ವಾಸ್ ಎ ಚಾಂಪಿಯನ್ಸ್

Published:
Updated:

ತುಮಕೂರು: ಉತ್ತಮ ಪ್ರದರ್ಶನ ನೀಡಿದ ಮೂಡುಬಿದ್ರೆಯ ಆಳ್ವಾಸ್ `ಎ~ ತಂಡದವರು ಇಲ್ಲಿ ನಡೆದ ರಾಜ್ಯ ಬಾಲ್ ಬ್ಯಾಡ್ಮಿಂಟನ್ ಟೂರ್ನಿಯ ಮಹಿಳೆಯರ ವಿಭಾಗದಲ್ಲಿ ಅಗ್ರಸ್ಥಾನ ಪಡೆದು ಚಾಂಪಿಯನ್ ಆಯಿತು.ರೌಂಡ್ ರಾಬಿನ್ ಮಾದರಿಯ ಪಂದ್ಯದಲ್ಲಿ ಆಳ್ವಾಸ್ `ಎ~ ತಂಡ ಒಟ್ಟು 15 ಪಾಯಿಂಟ್ ಗಳಿಸಿ ಪ್ರಥಮ ಸ್ಥಾನ ಪಡೆದು ಪ್ರಶಸ್ತಿ ಜಯಿಸಿತು. ಭಾನುವಾರ ನಡೆದ ಕೊನೆಯ ಲೀಗ್ ಪಂದ್ಯದಲ್ಲಿ ಆಳ್ವಾಸ್ `ಎ~ ತಂಡ 29-16, 29-21ರಲ್ಲಿ ಆಳ್ವಾಸ್ `ಬಿ~ ತಂಡವನ್ನು ಮಣಿಸಿ ಅಗ್ರಸ್ಥಾನ ಪಡೆಯಿತು. ಆಳ್ವಾಸ್ `ಬಿ~ ತಂಡ (12) ಹಾಗೂ ಎಸ್‌ಬಿಬಿಸಿ ತುಮಕೂರು (11) ತಂಡಗಳು ಕ್ರಮವಾಗಿ ಎರಡು ಹಾಗೂ ಮೂರನೇ ಸ್ಥಾನ ಪಡೆದುಕೊಂಡವು.ಇದೇ ಟೂರ್ನಿಯ ಪುರುಷರ ವಿಭಾಗದಲ್ಲಿ ಬೆಂಗಳೂರಿನ ಕೆನರಾಬ್ಯಾಂಕ್ ಮತ್ತು ಭದ್ರಾವತಿಯ ಸ್ಫುಟ್ನಿಕ್ ತಂಡಗಳು ಜಂಟಿಯಾಗಿ ಅಗ್ರಸ್ಥಾನ ಹಂಚಿಕೊಂಡವು. ಕೊನೆಯ ಲೀಗ್ ಪಂದ್ಯದಲ್ಲಿ 29-15, 12-12ರಲ್ಲಿ ಸಾಗಿದ್ದಾಗ ಮಂದ ಬೆಳಕಿನ ಕಾರಣ ಆಟವನ್ನು ಸ್ಥಗಿತಗೊಳಿಸಲಾಯಿತು. ಈ ವಿಭಾಗದಲ್ಲಿ ಡೀಲಕ್ಸ್ ತುಮಕೂರು (2ನೇ ಸ್ಥಾನ) ಹಾಗೂ ಮೈಸೂರು ಸ್ಟಾರ್ಸ್‌ (3ನೇ ಸ್ಥಾನ) ಪಡೆಯಿತು.ಸನ್ಮಾನ: ವಿಧಾನ ಪರಿಷತ್ ಸದಸ್ಯ ಹುಲಿನಾಯ್ಕರ್, ಏಕಲವ್ಯ ಪ್ರಶಸ್ತಿ ಪುರಸ್ಕೃತ ಸುದರ್ಶನ್ ಮತ್ತು ಮಾದೇಗೌಡ, ಕೋಚ್ ಸತೀಶ್ ಅವರನ್ನು ಸನ್ಮಾನಿಸಲಾಯಿತು. ಅಸೋಸಿಯೇಷನ್ ಸದಸ್ಯರಾದ ಸುಧಾಕರಲಾಲ್, ಆರ್.ಶಿವಣ್ಣ, ಮಹದೇವ್, ಶೈಲಾ ನಾಗರಾಜ್ ಉಪಸ್ಥಿತರಿದ್ದರು.

Post Comments (+)