ಬುಧವಾರ, ಮೇ 18, 2022
23 °C

ಬಾಷ್ ಕಲಾಸಂಗಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಾಷ್ ಲಲಿತಕಲಾ ಸಂಘ: ಐದು ದಿನಗಳ ‘ಕಲಾಸಂಗಮ- 2011’. ಶುಕ್ರವಾರ ಉದ್ಘಾಟನೆ, ಚಿತ್ರ ನಿರ್ದೇಶಕ ಸಿ.ವಿ. ಶಿವಶಂಕರ್ ಮತ್ತು ಎಸ್. ಬಾಲಿ ಅವರಿಗೆ ಸನ್ಮಾನ. ವಿದ್ವಾನ್ ಆನೂರ್ ಅನಂತಕೃಷ್ಣ ಶರ್ಮ ನೇತೃತ್ವದಲ್ಲಿ ಸ್ವರ ಲಯ ಸಮ್ಮಿಲನ. ವಿದ್ವಾನ್ ಎಚ್.ಕೆ. ವೆಂಕಟರಾಂ (ಪಿಟೀಲು), ಪ್ರವೀಣ್ ಗೋಡ್ಖಿಂಡಿ (ಕೊಳಲು) ಜುಗಲ್‌ಬಂದಿ ಮತ್ತು ಜಾನಪದ ತಾಳವಾದ್ಯ ವೈಭವ. ಅತಿಥಿ: ಬಾಷ್ ವ್ಯವಸ್ಥಾಪಕ ನಿರ್ದೇಶಕ ವಿ.ಕೆ. ವಿಶ್ವನಾಥನ್.ಸದಾ ಯಂತ್ರಗಳ ಜತೆ ಕೆಲಸ ಮಾಡುವ ಕಾರ್ಮಿಕರು ಸಾಂಸ್ಕೃತಿಕ ಬೇರುಗಳನ್ನು ಮರೆಯದೇ ಕಲೆಯನ್ನು ಜನಪ್ರಿಯಗೊಳಿಸಲು ಎಂತಹ ಕೊಡುಗೆ ಕೊಡಬಹುದು ಎಂಬುದಕ್ಕೆ ಬಾಷ್ ಲಲಿತಾ ಕಲಾ ಸಂಘ ಅತ್ಯುತ್ತಮ ನಿದರ್ಶನ.1965ರಲ್ಲಿ ಕಾರ್ಮಿಕರ ಮನರಂಜನೆಗಾಗಿ ಆರಂಭವಾದ ಸಂಘ ಈಗ ಬೆಂಗಳೂರಿನ ಕಲಾ ಲೋಕದಲ್ಲಿ ತನ್ನದೇ ಆದ ಸ್ಥಾನ ಗಳಿಸಿಕೊಂಡಿದೆ. ಬಾಷ್ ನೌಕರರು, ನೌಕರರ ಕುಟುಂಬ ವರ್ಗದವರು ಅಲ್ಲದೇ ಹಲವು ಕಲಾವಿದರಿಗೆ ವೇದಿಕೆ ಒದಗಿಸುತ್ತಿದೆ. ಈಗ ಮಾರ್ಚ್ 4 ರಿಂದ 8ರ ವರೆಗೆ ರಂಗಭೂಮಿ, ಸಂಗೀತ ಮತ್ತು ನೃತ್ಯ ಉತ್ಸವ ನಡೆಸುತ್ತಿದೆ.ಸ್ಥಳ: ಬಾಷ್ ಕ್ರೀಡಾಂಗಣ, ಆಡುಗೋಡಿ. ಸಂಜೆ 6.15.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.