ಶನಿವಾರ, ಏಪ್ರಿಲ್ 17, 2021
32 °C

ಬಿಎಂಎಸ್‌ಗೆ ಟಿಸಿಎಸ್ ಟೆಕ್‌ಬೈಟ್ಸ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಿಎಂಎಸ್‌ಗೆ ಟಿಸಿಎಸ್ ಟೆಕ್‌ಬೈಟ್ಸ್

ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (ಟಿಸಿಎಸ್) ಮತ್ತು ರಾಜ್ಯ ಸರ್ಕಾರಿ ಅನುದಾನಿತ ‘ಬೋರ್ಡ್ ಫಾರ್ ಐಟಿ ಎಜುಕೇಷನ್ ಸ್ಟಾಂಡರ್ಸ್’ (ಬಿಐಟಿಇಎಸ್) ಸಹಭಾಗಿತ್ವದ ರಾಜ್ಯ ಮಟ್ಟದ ‘ಟಿಸಿಎಸ್ ಟೆಕ್‌ಬೈಟ್ಸ್’ ರಸಪ್ರಶ್ನೆ ಸ್ಪರ್ಧೆಯಲ್ಲಿ ಬಿಎಂಎಸ್ ಎಂಜಿನಿಯರಿಂಗ್ ಕಾಲೇಜಿನ ಹಿಮಾದ್ರಿ ಬ್ಯಾನರ್ಜಿ ಮತ್ತು ಅಕ್ಷತ್ ಮೊದಲ ಸ್ಥಾನ ಗಳಿಸಿದ್ದಾರೆ.ಇವರಿಗೆ 60 ಸಾವಿರ ರೂ, ಟಿಸಿಎಸ್ ಶೈಕ್ಷಣಿಕ ವಿದ್ಯಾರ್ಥಿವೇತನ, ಸೆಲ್‌ಫೋನ್, ಫಾಸ್ಟ್‌ಟ್ರ್ಯಾಕ್ ಕನ್ನಡಕ, ಟ್ರೋಫಿಮತ್ತಿತರ ಬಹುಮಾನ ದೊರೆಯಿತು.ನಗರದ ದಯಾನಂದ ಸಾಗರ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಅಂತಿಮ ಸುತ್ತಿನ ಸ್ಪರ್ಧೆ ನಡೆಯಿತು. ಮೈಸೂರಿನ ಎಸ್‌ಜೆಸಿಇ ಕಾಲೇಜು ಮೈಸೂರಿನ ರಜತ್ ಮುಡಬಡಿತ್ತಾಯ ಮತ್ತು ಪವನ್ ಆರ್.ಕುಲಕರ್ಣಿ ಅವರು 30 ಸಾವಿರ ರೂ ಶಿಷ್ಯ ವೇತನ ಮತ್ತಿತರ ಬಹುಮಾನದ ರನ್ನರ್ ಅಪ್ ಪ್ರಶಸ್ತಿ ಪಡೆದರು.ಇದಕ್ಕೂ ಮುನ್ನ ರಾಜ್ಯದ ನಾನಾ ಭಾಗಗಳಲ್ಲಿ ನಡೆದ ಸ್ಪರ್ಧೆಯ ವಿವಿಧ ಹಂತದಲ್ಲಿ 150ಕ್ಕೂ ಹೆಚ್ಚು ಎಂಜಿನಿಯರಿಂಗ್ ಕಾಲೇಜು ತಂಡಗಳು ಭಾಗವಹಿಸಿದ್ದವು.ಈಗಿನ ಯುವಜನರಲ್ಲಿನ ಕ್ರಿಕೆಟ್ ಕ್ರೇಜ್ ಆಧರಿಸಿ ಟಿ 20 ಮಾದರಿಯಲ್ಲಿ ಟೆಕ್ ವಿಕೆಟ್, ಸ್ಟಂಪ್ ವಿಷನ್, ಸ್ನಿಕೊಮೀಟರ್, ಥರ್ಡ್ ಅಂಪೈರ್, ಸ್ಪೀಡ್ ಗನ್ ಎಂಬ ಸುತ್ತುಗಳಲ್ಲಿ ನಡೆದ ಸ್ಪರ್ಧೆಯನ್ನು ಕ್ವಿಜ್‌ಮಾಸ್ಟರ್ ಗಿರಿ ಬಾಲಸುಬ್ರಹ್ಮಣ್ಯಂ ನಡೆಸಿಕೊಟ್ಟರು.

  ಟಿಸಿಎಸ್ ಬೆಂಗಳೂರು ಮುಖ್ಯಸ್ಥ ನಾಗರಾಜ್ ಐಜರಿ ಹಾಗೂ ಬಿಐಟಿಇಎಸ್ ಅಧ್ಯಕ್ಷ ಆರ್.ನಟರಾಜ್ ಬಹುಮಾನ ವಿತರಿಸಿದರು.

                                                                                          

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.