ಕಾರವಾರ: ಕರ್ನಾಟಕ ವಿಶ್ವವಿದ್ಯಾಲ ಯದ ದೂರ ಶಿಕ್ಷಣ ವಿದ್ಯಾಲಯವು ಬಿ.ಎ. ಅಂತಿಮ ವರ್ಷದ ವಿದ್ಯಾರ್ಥಿ ಗಳಿಗೆ ನೀಡಿರುವ ಅಧ್ಯಯನ ಪರಿಕರ ಗಳಲ್ಲಿ ನೂರಾರು ದೋಷಗಳಿರುವುದು ಬೆಳಕಿಗೆ ಬಂದಿದ್ದು, ವಿದ್ಯಾರ್ಥಿಗಳಲ್ಲಿ ಗೊಂದಲವನ್ನುಂಟು ಮಾಡಿದೆ.

ಅಂತಿಮ ವರ್ಷದ ಪರೀಕ್ಷೆ ಬರೆ ಯುವ ವಿದ್ಯಾರ್ಥಿಗಳಿಗೆ ಕನ್ನಡ, ಇಂಗ್ಲಿಷ್ (ಬೆಸಿಕ್) ಮತ್ತು ರಾಜ ಕೀಯಶಾಸ್ತ್ರ, ಸಮಾಜಶಾಸ್ತ್ರ ಹಾಗೂ ಇತಿಹಾಸ ಮತ್ತು ಪ್ರಾಚ್ಯಶಾಸ್ತ್ರ, ತತ್ವಶಾಸ್ತ್ರ, ಅರ್ಥಶಾಸ್ತ್ರ ಸೇರಿದಂತೆ ಒಟ್ಟು 18 ಐಚ್ಛಿಕ ವಿಷಯಗಳಿವೆ. ಈ ಐಚ್ಛಿಕ ವಿಷಯಗಳ ಪೈಕಿ ರಾಜಕೀಯ ಶಾಸ್ತ್ರ, ಸಮಾಜಶಾಸ್ತ್ರ ಹಾಗೂ ಇತಿಹಾಸ ಮತ್ತು ಪ್ರಾಚ್ಯಶಾಸ್ತ್ರ ವಿಷಯ ಆಯ್ಕೆ ಮಾಡಿಕೊಂಡ ವಿದ್ಯಾರ್ಥಿಗಳ ಅಧ್ಯಯನಕ್ಕೆ ನೀಡಿದ ಭಾರತೀಯ ಸಮಾಜದ ಅಧ್ಯಯನ (ಸಮಾಜಶಾಸ್ತ್ರ ಪತ್ರಿಕೆ-1), ಭಾರತದ ಇತಿಹಾಸ (ಇತಿಹಾಸ ಮತ್ತು ಪ್ರಾಚ್ಯಶಾಸ್ತ್ರ ಪತ್ರಿಕೆ-1) ಹಾಗೂ ಆಧುನಿಕ ಯುರೋಪಿನ ಚರಿತ್ರೆ (ಇತಿಹಾಸ ಮತ್ತು ಪ್ರಾಚ್ಯಶಾಸ್ತ್ರ ಪತ್ರಿಕೆ-2) ವಿಷಯಗಳಲ್ಲಿ ವ್ಯಾಕರಣ ದೋಷಗಳಿದ್ದು ಈ ವಿಷಯಗಳನ್ನು ಓದಲು ವಿದ್ಯಾರ್ಥಿಗಳಿಗೆ ಕಿರಿಕಿರಿಯಾಗು ತ್ತಿದೆ.

ಭಾರತದ ಇತಿಹಾಸ ಹಾಗೂ ಆಧುನಿಕ ಯುರೋಪಿನ ಚರಿತ್ರೆ ವಿಷಯದ ಅಧ್ಯಯನ ಪರಿಕರದ ಒಂದು ಪುಟದಲ್ಲಿ ಎರಡರಿಂದ ಮೂರು ತಪ್ಪುಗಳಿದ್ದರೆ, ಭಾರತೀಯ ಸಮಾಜ ಅಧ್ಯಯನ ವಿಷಯದಲ್ಲಿ ಪ್ರತಿ ಸಾಲಿನಲ್ಲೂ ತಪ್ಪುಗಳಿರುವುದು ಕಂಡು ಬಂದಿದೆ. ಕರೆಯತೊಡಗಿದರು ಎನ್ನುವ ಬದಲು `ಕರೆಯತೋಡಗಿದರು~, ಕರೆ ಯುವುದುಂಟು ಎಂದು ಬರೆಯುವ ಬದಲು `ಕರೆಯುವುದುಟು~, ಎಂದು ಬರೆಯಲಾಗಿದೆ. ವಿಧಿ-ವಿಧಾನಗಳ ಬದಲು ವಿಧಿ-ವಧಾನ ಗಳು, ಬೆಳೆದು ನಿಂತಿರುವುದರಿಂದ ಎನ್ನುವ ಬದಲು `ಬೆಳೆದು ನಿತ್ತಿರುವುದರಿಂದ~, `ಕರ್ಮ ಸಿದ್ಧಾಂತದಲ್ಲಿ~ ಎನ್ನುವ ಬದಲು ಕರ್ವ ಸಿದ್ಧಾಂತದಲ್ಲಿ ಹೀಗೆ ಪ್ರತಿ ಪುಟದಲ್ಲಿ ಕನಿಷ್ಠ ಹತ್ತು ತಪ್ಪುಗಳಿವೆ.

ಉಳೀದೆಲ್ಲ ಧರ್ಮಗಳಿಗೆ ಹೋಲಿಸಿ ದರೆ ಹಿಂದೂ ಧರ್ಮವು ಅತ್ಯಂತ ಸಂಕೀರ್ಣವಾದ ಧರ್ಮ. ಏಕೆಂದರೆ ಹಿಂದೂ ಧರ್ಮಕ್ಕೆ ಧರ್ಮ ಸಂಸ್ಥಾಪಕನು ಇರುವುದಿಲ್ಲ. ಈ ರೀತಿ ಯಾಗಿ ಒಂದೇ ವಾಕ್ಯದಲ್ಲಿ ಎರಡೆರಡು ತಪ್ಪುಗಳಿವೆ. ಜಾತಿಯ ಪ್ರಮುಖ ಗುಣಲಕ್ಷಣಗಳು ಎನ್ನುವ ಪಠ್ಯದಲ್ಲಿ ಸಮಾಜಿಕ (ಸಾಮಾಜಿಕ) ರಚನೆಯ ಬ್ರಹ್ಮಣ (ಬ್ರಾಹ್ಮಣ) ಎಂದಿದೆ.

ಆಧುನಿಕ ಯುರೋಪಿನ ಚರಿತ್ರೆ ಪುಸ್ತಕ ದಲ್ಲಿ `ಮಹಕ್ರಾಂತಿ~, `ಅಸಮಧಾನಕ್ಕೆ~, `ಸವಾಯ ಪ್ರಜ್ಞೆ~, `ವಶಂದ~ ಎಂದು ಬರೆದಿರುವುದರಿಂದ ವಿದ್ಯಾರ್ಥಿಗಳು ಎಲ್ಲ ಶಬ್ದಗಳನ್ನು ತಪ್ಪುತಪ್ಪಾಗಿ ಓದ ಬೇಕಾಗಿದೆ. ಪ್ರತಿಯೊಂದು ಪ್ಯಾರಾದಲ್ಲಿ ತಪ್ಪುಗಳು ಕಂಡು ಬಂದಿರುವುದರಿಂದ ವಿದ್ಯಾರ್ಥಿಗಳ ಅಧ್ಯಯನದ ಮೇಲೆ ಪರಿಣಾಮ ಬೀರುತ್ತಿದೆ.

ವಿಶ್ವವಿದ್ಯಾಲಯವೇ ಸಿದ್ಧಪಡಿಸಿದ ಅಧ್ಯಯನ ಪರಿಕರದಲ್ಲಿ ಇಂತಹ ತಪ್ಪು ಗಳಿರುವುದರಿಂದ ಯಾವುದು ಸರಿ, ಯಾವುದು ತಪ್ಪು ಎನ್ನುವುದು ವಿದ್ಯಾರ್ಥಿಗಳಲ್ಲಿ ಗೊಂದಲವನ್ನುಂಟು ಮಾಡಿದೆ. ಮುಂಬರುವ ಎಪ್ರಿಲ್, ಮೇದಲ್ಲಿ ಪರೀಕ್ಷೆ ನಡೆಯಲಿದ್ದು ವಿದ್ಯಾರ್ಥಿಗಳು ಈ ತಪ್ಪುಗಳನ್ನು ಸರಿ ಪಡಿಸಿಕೊಂಡು ಅಧ್ಯಯನ ಮಾಡಬೇಕಾಗಿದೆ.

`ಪರೀಕ್ಷೆ ಬರೆಯಲು ಕವಿವಿ ಸಂಪರ್ಕ ವಿದ್ಯಾಲಯವು ನೀಡಿದ ಅಧ್ಯಯನ ಪರಿಕರದಲ್ಲಿ ತಪ್ಪುಗಳಿರುವುದರಿಂದ ನಾವು ತೊಂದರೆ ಅನುಭವಿಸುತ್ತಿದ್ದೇವೆ. ಯಾವುದು ಸರಿ, ತಪ್ಪು ಎನ್ನುವುದು ತಿಳಿ ಯುತ್ತಿಲ್ಲ. ಸಮಾಜಶಾಸ್ತ್ರ ವಿಷಯದ ಪ್ರತಿಯೊಂದು ಪ್ಯಾರಾದಲ್ಲಿ ತಪ್ಪು ಗಳಿರುವುದರಿಂದ ಓದಿನಲ್ಲಿ ಏಕಾಗ್ರತೆ ಸಾಧಿಸಲು ಸಾಧ್ಯವಾಗುತ್ತಿಲ್ಲ~ ಎನ್ನುತ್ತಾರೆ ಬಿ.ಎ. ಅಂತಿಮ ವರ್ಷದ ಪರೀಕ್ಷೆ ಬರೆಯುತ್ತಿರುವ ಅಭ್ಯರ್ಥಿ ಪ್ರಮೋದ ಹರಿಕಂತ್ರ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.