ಸೋಮವಾರ, ಸೆಪ್ಟೆಂಬರ್ 27, 2021
21 °C
ಸುನಿಲ್ ಚೆಟ್ರಿ ಬಳಗಕ್ಕೆ ಸಲಗಾಂವ್ಕರ್ ವಿರುದ್ಧ 2–0 ಗೋಲುಗಳ ಗೆಲುವು

ಬಿಎಫ್‌ಸಿ ಮುಡಿಗೆ ಐಲೀಗ್ ಪ್ರಶಸ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಿಎಫ್‌ಸಿ ಮುಡಿಗೆ ಐಲೀಗ್ ಪ್ರಶಸ್ತಿ

ಬೆಂಗಳೂರು:  ಭಾನುವಾರ ರಾತ್ರಿ ಕಂಠೀ ರವ ಕ್ರೀಡಾಂಗಣದಲ್ಲಿ ಬೆಂಗಳೂರು ಫುಟ್‌ಬಾಲ್ ಕ್ಲಬ್ ತಂಡದ  ಕನಸು ನನಸಾಯಿತು.  ಐಲೀಗ್ ಟೂರ್ನಿಯ ಚಾಂಪಿಯನ್ ಆಗಿ ಸುನಿಲ್ ಚೆಟ್ರಿ ಬಳಗವು ಮೆರೆದಾಡಿತು.ಲೀಗ್ ಸುತ್ತಿನ  ಪಂದ್ಯದಲ್ಲಿ ಬಿಎಫ್‌ಸಿ ತಂಡವು 2–0 ಗೋಲುಗ ಳಿಂದ   ಗೋವಾದ ಸಲಗಾಂವ್ಕರ್ ಫುಟ್‌ಬಾಲ್ ಕ್ಲಬ್‌ ತಂಡವನ್ನು  ಹಣಿ ಯಿತು.  ಆ ಮೂಲಕ 32 ಅಂಕಗಳನ್ನು ಗಳಿಸಿ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿ, ಪ್ರಶಸ್ತಿಗೆ ಮುತ್ತಿಕ್ಕಿತು.ಕಳೆದ ಮೂರು ವರ್ಷಗಳಲ್ಲಿ ಎರಡು ಬಾರಿ ಚಾಂಪಿಯನ್ ಆದ ಸಾಧನೆ ಮಾಡಿತು. ಹೋದ ವರ್ಷ ನಿರ್ಣಾಯಕ ಪಂದ್ಯದಲ್ಲಿ ಮೋಹನ್ ಬಾಗನ್ ತಂಡದೆದುರು ಸೋತು ರನ್ನರ್ಸ್ ಅಪ್ ಆಗಿತ್ತು.ಪ್ರಸಕ್ತ ಋತುವಿನಲ್ಲಿ ಬಿಎಫ್‌ಸಿ ಹತ್ತನೇ ಜಯ ದಾಖಲಿಸಿತು. ಒಟ್ಟು 15 ಪಂದ್ಯಗಳನ್ನು ಆಡಿದ್ದ ಬಿಎಫ್‌ಸಿ ಎರಡರಲ್ಲಿ ಡ್ರಾ ಸಾಧಿಸಿತ್ತು.  ಮೂರರಲ್ಲಿ ಸೋತಿತ್ತು. ತವರಿನ ಅಂಗಳದಲ್ಲಿ ಗೆದ್ದ ನಾಯಕ ಸುನಿಲ್ ಚೆಟ್ರಿ ಮತ್ತು ಆಟಗಾರರು ಮೈದಾನದಲ್ಲಿ ಒಂದು ಸುತ್ತು ಓಡಿ ಪ್ರೇಕ್ಷಕರಿಗೆ ಅಭಿನಂದನೆ ಸಲ್ಲಿಸಿದರು. ತಮ್ಮ ತಂಡದ ಕೋಚ್ ಆ್ಯಷ್ಲೆ ವೆಸ್ಟ್‌ವುಡ್‌ ಅವರನ್ನು ಎತ್ತಿಕೊಂಡು ಮೆರವಣಿಗೆ ಮಾಡಿತು.ಮೋಹನ್ ಬಾಗನ್ ತಂಡವು 27 ಅಂಕಗಳನ್ನು ಗಳಿಸಿದ್ದು  ಇನ್ನೊಂದು ಲೀಗ್ ಪಂದ್ಯ ಆಡಬೇಕಿದೆ.  ಏಪ್ರಿಲ್ 23ರಂದು ಬಿಎಫ್‌ಸಿ ತಂಡವನ್ನು  ಸಿಲಿಗುರಿಯಲ್ಲಿ ಎದುರಿಸಲಿದೆ.  ಬಾಗನ್ ತಂಡವು 15 ಪಂದ್ಯಗಳಲ್ಲಿ 7 ಜಯಿಸಿದೆ. ಆರರಲ್ಲಿ ಡ್ರಾ ಮಾಡಿಕೊಂಡಿದ್ದು, ಎರಡರಲ್ಲಿ ಸೋತಿದೆ.ರಜಾ ದಿನದ ಸಂಭ್ರಮ: ತವರು ಅಂಗಳ ದಲ್ಲಿ ಕಿಕ್ಕಿರಿದು ಸೇರಿದ್ದ ಅಭಿಮಾನಿಗಳ ಮುಂದೆ ಛಲದ ಆಟವಾಡಿದ ಬಿಎಫ್‌ಸಿ  ಎರಡು ಗೋಲು ಹೊಡೆಯಿತು. ಸಲ ಗಾಂವ್ಕರ್ ಒಡ್ಡಿದ ತೀವ್ರ ಸವಾಲನ್ನು ಮೆಟ್ಟಿ ನಿಂತಿತು. ತಂಡದ ಯುಗೆನ್ಸನ್ ಲಿಂಗ್ಡೊ (8ನೇ ನಿಮಿಷ) ತಂಡದ ಗೋಲಿನ ಖಾತೆ ತೆರೆದರು. ಮಿಡ್‌ಫಿಲ್ಡರ್ ಲಿಂಗ್ಡೊ ಅವರ ಚುರುಕಿನ ಆಟವು ಎದುರಾಳಿಗಳ ಅಂದಾಜಿ ಸಿಗಲಿಲ್ಲ. ಮಿಂಚಿನ ವೇಗದಲ್ಲಿ ಕಿಕ್ ಮಾಡಿದ ಅವರು ತಂಡಕ್ಕೆ ಗೋಲಿನ ಕಾಣಿಕೆ ನೀಡಿದರು.ನಂತರ ಸಲಗಾಂವ್ಕರ್ ತಂಡವು ಹಲವು ಬಾರಿ ಗೋಲು ಹೊಡೆಯಲು ಮಾಡಿದ ಪ್ರಯತ್ನವನ್ನು ಆತಿಥೇಯ ತಂಡದ ರಕ್ಷಣಾ ಆಟಗಾರರು ತಡೆದರು.   88ನೇ ನಿಮಿಷದಲ್ಲಿ ಸೀಮಿನ್ಲೆನ್ ಡಾಂಗಲ್ ಇನ್ನೊಂದು ಗೋಲು ಹೊಡೆದರು. ಇದರೊಂದಿಗೆ ಬಿಎಫ್‌ಸಿ ಎರಡು ಗೋಲುಗಳಿಂದ ಜಯದ ಸಂಭ್ರಮ ಆಚರಿಸಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.