ಮಂಗಳವಾರ, ಮೇ 18, 2021
28 °C

ಬಿ.ಜಯಶ್ರೀಗೆ ರೇಣುಕಶ್ರೀ ಪ್ರಶಸ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಕ್ಕೇರಿ: ಹಿರೇಮಠದ ದಸರಾ ಉತ್ಸವದಲ್ಲಿ  ಗುರುಶಾಂತೇಶ್ವರ ಜನಕಲ್ಯಾಣ ಪ್ರತಿಷ್ಠಾನದ ವತಿಯಿಂದ ಕೊಡುವ `ರೇಣುಕಶ್ರೀ~  ಪ್ರಶಸ್ತಿಗೆ  ರಾಜ್ಯಸಭಾ ಸದಸ್ಯೆ ಹಾಗೂ ರಂಗ ಕಲಾವಿದೆ ಬಿ.ಜಯಶ್ರೀ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಕೃಷಿ  ಸಚಿವ ಉಮೇಶ ಕತ್ತಿ ಹೇಳಿದರು.   ಪ್ರತಿವರ್ಷ ನಡೆಯುವ ದಸರಾ ಉತ್ಸವದಲ್ಲಿ   ವಿವಿಧ  ಕ್ಷೇತ್ರಗಳಲ್ಲಿ  ಸಾಧನೆಗೈದ ಮಹನೀಯರನ್ನು ಗುರುತಿಸಿ  ನೀಡಲಾಗುವ  ರೇಣುಕಶ್ರೀ  ಪ್ರಶಸ್ತಿಯು  ಹತ್ತು ಸಾವಿರ ನಗದು ಹಾಗೂ ಪ್ರಶಸ್ತಿ ಫಲಕ ಒಳಗೊಂಡಿದೆ ಎಂದು ಪತ್ರಕರ್ತರಿಗೆ ತಿಳಿಸಿದರು.ಪ್ರಸಕ್ತ  ಸಾಲಿನ ಪ್ರಶಸ್ತಿ  ಪ್ರದಾನ ಸಮಾರಂಭ  ಅಕ್ಟೋಬರ್ 1 ರಂದು  ಮಠಾಧ್ಯಕ್ಷ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯದಲ್ಲಿ  ನಡೆಯಲಿದೆ.   ಸೆ. 28ರಿಂದ ಅಕ್ಟೋಬರ್  6 ರವರೆಗೆ  ನಡೆಯುವ  ದಸರಾ ಉತ್ಸವದಲ್ಲಿ   ಮಕ್ಕಳ, ಜಾನಪದ, ಭಾವೈಕ್ಯ, ಶೈಕ್ಷಣಿಕ ಮತ್ತು ಮಹಿಳಾ ದಸರಾ ಕಾರ್ಯಕ್ರಮ ಜರುಗಲಿವೆ ಎಂದು ಹೇಳಿದರು. ಗುರುಶಾಂತೇಶ್ವರ ಸಂಸ್ಥಾನ ಹಿರೇಮಠದ  ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಹಾಜರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.