ಮಂಗಳವಾರ, ಮೇ 18, 2021
22 °C

ಬಿಜೆಪಿಯ `ಜೈಲ್‌ಭರೋ' ಚಳವಳಿ ಮುಂದೂಡಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಐಎಎನ್‌ಎಸ್): ಉತ್ತರಾಖಂಡನಲ್ಲಿ ಮಹಾಮಳೆಯಿಂದ ತೀವ್ರ ಸಂಕಷ್ಟ ಪರಿಸ್ಥಿತಿ ಉದ್ಭವಿಸಿರುವ ಹಿನ್ನೆಲೆಯಲ್ಲಿ ಬಿಜೆಪಿಯು ತನ್ನ ಉದ್ದೇಶಿತ `ಜೈಲ್‌ಭರೋ' ಚಳವಳಿಯನ್ನು ಶನಿವಾರ ಎರಡನೇಯ ಬಾರಿಗೆ ಮುಂದೂಡಿದೆ.ಯುಪಿಎ ಸರ್ಕಾರದ `ಹಗರಣಗಳು, ಭ್ರಷ್ಟಾಚಾರ, ಬೆಲೆ ಏರಿಕೆ ಹಾಗೂ ಸಂವಿಧಾನಿಕ ಸಂಸ್ಥೆಗಳ ದುರ್ಬಳಕೆ' ವಿರೋಧಿಸಿ ಬಿಜೆಪಿಯು ಮೇ 27 ರಿಂದ ಜೂನ್ 2 ರ ವರೆಗೆ `ಜೈಲ್‌ಭರೋ' ಚಳವಳಿ ನಡೆಸಲು ಉದ್ದೇಶಿಸಿತ್ತು. ಆದರೆ ಛತ್ತೀಸಗಢ್‌ದಲ್ಲಿ ಕಾಂಗ್ರೆಸ್ ಮುಖಂಡರ ಮೇಲೆ ನಕ್ಸಲರ ದಾಳಿ ನಡೆದ ಹಿನ್ನೆಲೆಯಲ್ಲಿ ಚಳುವಳಿಯನ್ನು ಮುಂದೂಡಲಾಗಿತ್ತು. ಇದೀಗ ಉತ್ತರಾಖಂಡ ಪ್ರವಾಹದ ಹಿನ್ನೆಲೆಯಲ್ಲಿ ಶನಿವಾರ ಎರಡನೇಯ ಬಾರಿಗೆ ಚಳವಳಿಯನ್ನು ಮುಂದೂಡಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.