ಶನಿವಾರ, ಫೆಬ್ರವರಿ 27, 2021
20 °C
ಯುಪಿಎ ಎಲ್ಲ ರಂಗದಲ್ಲಿ ವಿಫಲ

ಬಿಜೆಪಿ ಅಭ್ಯರ್ಥಿ ಶಿವಕುಮಾರ ಉದಾಸಿ ಟೀಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಿಜೆಪಿ ಅಭ್ಯರ್ಥಿ ಶಿವಕುಮಾರ ಉದಾಸಿ ಟೀಕೆ

ಹಾನಗಲ್‌: ‘ದೃಢ ನಿರ್ಧಾರ, ಸಾಮಾಜಿಕ ಬದ್ಧತೆ, ದೇಶದ ಭದ್ರತೆ, ಉದ್ಯೋಗ ಸೃಷ್ಟಿ, ರಾಜಕೀಯ ಇಚ್ಛಾಶಕ್ತಿ ಸೇರಿದಂತೆ ನೂರೆಂಟು ರಂಗಗಳಲ್ಲಿ ಕಾಂಗ್ರೆಸ್‌ ನೇತೃತ್ವದ ಯುಪಿಎ ಸರ್ಕಾರ ವಿಫಲವಾಗಿದೆ’ ಎಂದು ಹಾವೇರಿ ಲೋಕಸಭೆ ಬಿಜೆಪಿ ಅಭ್ಯರ್ಥಿ ಶಿವಕುಮಾರ ಉದಾಸಿ ಹೇಳಿದರು.ತಾಲ್ಲೂಕಿನ ಕಂಚಿನೆಗಳೂರು ಗ್ರಾಮದಲ್ಲಿ ಶುಕ್ರವಾರ ತಮ್ಮ ಬೆಂಬಲಿಗರೊಂದಿಗೆ ಮತದಾರರ ಬಳಿಗೆ ತೆರಳಿ ಮತಯಾಚನೆ ಮಾಡಿದ ಸಂದರ್ಭದಲ್ಲಿ ಅವರು ಮಾತನಾಡಿದರು.‘ಹತ್ತು ವರ್ಷಗಳ ಕಾಲ ಆಡಳಿತ ನಡೆಸಿದ ಯುಪಿಎಸರ್ಕಾರದಿಂದ ಬೆಲೆ ಏರಿಕೆಗೊಂಡು ಜನಸಾಮಾನ್ಯರು ಇಕ್ಕಟ್ಟಿಗೆ ಸಿಲುಕಿದ್ದಾರೆ. ವಿಶ್ವದಲ್ಲಿಯೇ ಉತ್ತಮ ಆರ್ಥಿಕ ತಜ್ಞ ಎಂದು ಹೆಸರು ಪಡೆದಿದ್ದ ಪ್ರಧಾನಿ ಮನಮೋಹನ ಸಿಂಗ್‌ ಭಾರತದ ಇಡೀ ಆರ್ಥಿಕ ವ್ಯವಸ್ಥೆಯನ್ನು ಕೆಳಮಟ್ಟಕ್ಕೆ ತಂದಿದ್ದಾರೆ. ನರೇಂದ್ರ ಮೋದಿ ನೇತೃತ್ವದ ಬಿಜೆಪಿಯಿಂದ ದೇಶದ ಸಮಗ್ರ ಅಭಿವೃದ್ಧಿ ಸಾಧ್ಯ’ ಎಂದರು.ಜಿಲ್ಲಾ ಪಂಚಾಯಿತಿ ಸದಸ್ಯ ಬಸವ ರಾಜ ಹಾದಿಮನಿ ಮಾತನಾಡಿದರು. ‘ಉತ್ತಮ ಸಂಸದಿಯ ಪಟುವಾಗಿ ಹೊಮ್ಮಿರುವ ಶಿವಕುಮಾರ ಉದಾಸಿ ಜನಪ್ರತಿನಿಧಿ ಹೇಗಿರಬೇಕು ಎಂಬುದಕ್ಕೆ ಮಾದರಿಯಾಗಿದ್ದಾರೆ. ರೈತಪರ, ಜನಪರ ಕಾರ್ಯಕ್ರಮಗಳ ಮೂಲಕ ಕ್ಷೇತ್ರದ ಅಭಿವೃದ್ಧಿಗೆ ಜವಾಬ್ದಾರಿ ನಿರ್ವಹಿಸಿದ್ದಾರೆ’ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಭೋಜರಾಜ ಕರೂದಿ ಅಭಿಪ್ರಾಯಪಟ್ಟರು.ತಾಲ್ಲೂಕು ಘಟಕದ ಅಧ್ಯಕ್ಷ ಈರಣ್ಣ ನಿಂಬಣ್ಣನವರ, ಮುಖಂಡರಾದ ಸಿದ್ಧಲಿಂಗಪ್ಪ ಶಂಕ್ರಿಕೊಪ್ಪ, ಭೋಜಪ್ಪ ಲಂಗಟಿ, ಎನ್‌.ಬಿ.ಪೂಜಾರ, ಭರಮಣ್ಣ ಶಿವೂರ, ಶಿವಪುತ್ರಪ್ಪ ಮಾಳಗಿ, ಶಿವಪುತ್ರಪ್ಪ ಕರ್ಜಗಿ, ಡಾ.ಕೃಷ್ಣರಾವ್‌ ಕುಲಕರ್ಣಿ, ಹಾಲಪ್ಪ ಮಾಳಗಿ, ಗೋಪಾಲ ಗಿರೆಣ್ಣನವರ, ಎಂ.ಎಫ್‌. ಕಠಾರಿ, ಸುರೇಶ ಅರಳೇಶ್ವರ, ಮಲ್ಲಪ್ಪ ಗಿರಿಯಣ್ಣನವರ, ಸಿದ್ಧಪ್ಪ ಕನವಳ್ಳಿ, ಎಂ.ಬಿ.ಕತ್ತಿ, ಪಿ.ಬಿ.ಕಲ್ಲೇಗೌಡರ ಮತ್ತಿತರರು ಹಾಜರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.