ಭಾನುವಾರ, ಏಪ್ರಿಲ್ 18, 2021
33 °C

ಬಿಜೆಪಿ ಸರ್ಕಾರ ಶೀಘ್ರ ಪತನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶ್ರೀರಂಗಪಟ್ಟಣ: ರಾಜ್ಯದ ಬಿಜೆಪಿ ಸರ್ಕಾರ ಅಭಿವೃದ್ಧಿಯನ್ನು ಸಂಪೂರ್ಣ ಮರೆತಿದ್ದು, ನಾಡಿನ ಜನರು ಬೇಸತ್ತಿದ್ದಾರೆ. ಪಾಪದ ಕೊಡ ತುಂಬಿ ರುವ ಸರ್ಕಾರ ಶೀಘ್ರ ಪತನ ವಾಗಲಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಭವಿಷ್ಯ ನುಡಿದರು.ತಾಲ್ಲೂಕಿನ ಮಹದೇವಪುರದಲ್ಲಿ ಭಾನುವಾರ ಚಿಕ್ಕಮ್ಮ-ಚಿಕ್ಕದೇವಿ ದೇವಾಲಯ ಲೋಕಾರ್ಪಣೆ ಸಮಾ ರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಸಮಸ್ಯೆಗಳು ಬೆಟ್ಟದಂತೆ ಬೆಳೆಯುತ್ತಿವೆ. ರಸ್ತೆಗಳು ಇನ್ನಿಲ್ಲದಂತೆ ಹದಗೆಟ್ಟಿವೆ. ಕನಿಷ್ಠ ಗುಂಡಿ ಮುಚ್ಚುವ ಕೆಲಸ ಕೂಡ ಮಾಡುತ್ತಿಲ್ಲ. ಜನ ಅಸಹನೆ ವ್ಯಕ್ತಪಡಿಸುತ್ತಿದ್ದರೂ ಇವರಿಗೆ ಬುದ್ಧಿ ಬಂದಿಲ್ಲ. ನನ್ನ ಸರ್ಕಾರ ಘೋಷಿಸಿದ ಜನಪ್ರಿಯ ಯೋಜನೆಗಳಿಗೆ ಯಡಿ ಯೂರಪ್ಪ ತಮ್ಮ ಫೋಟೊ ಹಾಕಿ ಕೊಂಡು ಮೆರೆಯುತ್ತಿದ್ದಾರೆ ಎಂದು ಲೇವಡಿ ಮಾಡಿದರು.ಕೃಷಿ ಬಜೆಟ್ ಮಂಡಿಸಿದ ಬೆನ್ನಲ್ಲೇ ಮಳವಳ್ಳಿಯಲ್ಲಿ ರೈತ ದಂಪತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರೇಷ್ಮೆ ಬೆಳೆಗಾರರು ಬೀದಿಗೆ ಬಿದ್ದಿದ್ದಾರೆ. ಕಬ್ಬು ಬೆಳೆಗಾರ ಕಂಗಾಲಾಗಿದ್ದಾನೆ. ಯುವ ಜನತೆ ಕೃಷಿಗೆ ಬೆನ್ನು ತೋರಿಸಿ ಹಳ್ಳಿ ತೊರೆಯುತಿದ್ದಾರೆ. ನಾನು ಮುಖ್ಯ ಮಂತ್ರಿಯಾಗಿದ್ದಾಗ ನಡೆಸಿದ ರೈತರ ಜತೆಗಿನ ಸಂವಾದ ಕುರಿತ ವರದಿ ಯನ್ನು ಈ ಸರ್ಕಾರ ಕಸದ ಬುಟ್ಟಿಗೆ ಎಸೆದಿದೆ.ದೇವಾಲಯ ಕಟ್ಟುವ, ಜೀರ್ಣೋ ದ್ಧಾರ ಮಾಡುವ ಜತೆಗೆ ವೃದ್ಧಾಶ್ರಮ, ಅನಾಥಾಲಯ ತೆರೆಯಬೇಕು ಎಂದು ಸಲಹೆ ನೀಡಿದರು.ಶಾಸಕ ರಮೇಶ ಬಂಡಿಸಿದ್ದೇಗೌಡ ಅಧ್ಯಕ್ಷತೆ ವಹಿಸಿದ್ದರು. ಶಾಸಕರಾದ ಎಂ.ಶ್ರೀನಿವಾಸ್, ಬಿ.ರಾಮಕೃಷ್ಣ, ಮಾಜಿ ಶಾಸಕಿ ವಿಜಯಲಕ್ಷ್ಮಿ ಬಂಡಿ ಸಿದ್ದೇಗೌಡ, ಮೈಷುಗರ್ ಮಾಜಿ ಅಧ್ಯಕ್ಷ ಸಿದ್ದರಾಮೇಗೌಡ, ಜಿ.ಪಂ. ಸದಸ್ಯೆ ನಾಗರತ್ನ ಬಸವರಾಜು, ಡಾ. ಪಾಪೇಗೌಡ, ಎಂಡಿಸಿಸಿ ಬ್ಯಾಂಕ್ ನಿರ್ದೇಶಕ ಬಸವರಾಜು, ಜವನೇ ಗೌಡ, ಕೆ.ತಿಮ್ಮೇಗೌಡ, ಪುಟ್ಟಸ್ವಾಮಿ ಇತರರು ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.